








ಮನ್ ಕಿ ಬಾತ್ ವೀಕ್ಷಣೆಯಲ್ಲಿ ಯಲಹಂಕಕ್ಕೆ ರಾಜ್ಯದಲ್ಲೇ ಪ್ರಥಮ ಸ್ಥಾನ :
ಯಲಹಂಕ : ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ಯಲಹಂಕ ಕ್ಷೇತ್ರ ಸತತ ಆರನೇ ಬಾರಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಭಾನುವಾರ ಪ್ರಸಾರವಾದ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜಪಾನ್ ಪ್ರವಾಸದಲ್ಲಿರುವ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ 35 ಬಿಜೆಪಿ ಮುಖಂಡರು ಭಾರತದ ರಾಷ್ಟ್ರಧ್ವಜ ಹಿಡಿದು ಜಪಾನ್ ನಲ್ಲಿಯೇ ವೀಕ್ಷಿಸಿ ಸರಲ್ ಆಪ್ ನಲ್ಲಿ ಅಪ್ಲೋಡ್ ಮಾಡಿದರು.
ಅದೇ ರೀತಿ ಯಲಹಂಕ ಉಪನಗರದಲ್ಲಿ ಸಹ ಬಿಜೆಪಿ ಮುಖಂಡರು ಭಾನುವಾರ ಮನ್ ಕೀ ಬಾತ್ ವೀಕ್ಷಿಸಿ, ಸರಲ್ ಆಪ್ ನಲ್ಲಿ ಅಪ್ ಲೋಡ್ ಮಾಡಿದರು.
ಸತತ ಆರು ಬಾರಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿ ಸರಲ್ ಆಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಮನ್ ಕಿ ಬಾತ್ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಅತಿ ಹೆಚ್ಚು ವೀಕ್ಷಿಸಿದ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಯಲಹಂಕ ಕ್ಷೇತ್ರ ಭಾಜನವಾಗಿದೆ.
