ವಿವಿಧ ಸೇವಾ ಕಾರ್ಯಗಳ ಮೂಲಕ ಬಿ.ಬಿ.ಉಮೇಶ್ (ಎಸ್ಎಮ್ಎಲ್ ಪಿ) ಅವರ ಜನ್ಮದಿನ :
ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ
ಬ್ಯಾಟರಾಯನಪುರ : ಅನಾಥಾಶ್ರಮಗಳಿಗೆ ಅನ್ನದಾನ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನ‌ ಪರಿಕರಗಳ ವಿತರಣೆ, ಸಾಧುಗಳಿಂದ ವಿಶೇಷ ಪೂಜೆ, ಬಡವರಿಗೆ ನೆರವು ಸೇರಿದಂತೆ ವಿವಿಧ ಸೇವಾ ಕಾರ್ಯಗಳ ಮೂಲಕ ಬೆಟ್ಟಹಲಸೂರು ಗ್ರಾಮದ ಮುಖಂಡರು, ಎಸ್.ಎಂ.ಎಲ್.ಪಿ. ಗ್ರೂಪ್ ನ ಮಾಲೀಕರಾದ ಬಿ.ಬಿ.ಉಮೇಶ್ ಅವರು ತಮ್ಮ ಜನ್ಮದಿನಾಚರಣೆ ಯನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿಕೊಂಡರು.
ಜನ್ಮದಿನದ ಪ್ರಯುಕ್ತ ಬೆಟ್ಟಹಲಸೂರು ಗ್ರಾಮದಲ್ಲಿ ಆಯೋಜಿಸಿದ್ದ ಸ್ನೇಹಕೂಟದಲ್ಲಿ ಹಲವು ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂಧುಗಳು ಕೇಕ್ ಕತ್ತರಿಸಿ, ಸನ್ಮಾನಿಸಿ, ಬಿ.ಬಿ.ಉಮೇಶ್ ಅವರಿಗೆ ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಎಲ್ಲರಿಗೂ ಭೂರೀ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಜನ್ಮದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಬೆಟ್ಟಹಲಸೂರು ಗ್ರಾ.ಪಂ. ಅಧ್ಯಕ್ಷರಾದ ಹೇಮಾವತಿ ನಾಗರಾಜ್ ಬಾಬು, ಮಾಜಿ ಅಧ್ಯಕ್ಷ ರಾದ ಬಿ.ಎಸ್.ಅನಿಲ್ ಕುಮಾರ್, ಬಿ.ಎಂ.ನಾಗೇಶ್, ತಾ.ಪಂ.ಮಾಜಿ ಸದಸ್ಯರಾದ ಬಿ.ನಾಗರಾಜ್ ಬಾಬು, ಗ್ರಾ.ಪಂ. ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮುಖಂಡರಾದ ರವೀಂದ್ರನಾಥ್ ಗೌಡ, ಬಿ.ಎನ್.ಮಂಜುನಾಥ್, ಸುಗ್ಗಟ್ಟ ಮುನಿರಾಜು ಸೇರಿದಂತೆ ಹಲವು ಗಣ್ಯರಿದ್ದರು.
ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಮುಖಂಡರು ಸಹಭೋಜನ ಮಾಡುತ್ತಾ ಆರ್.ಸಿ.ಬಿ.- ಸಿ.ಎಸ್.ಕೆ. ತಂಡಗಳ ನಡುವಿನ ರೋಚಕ ಕ್ರಿಕೆಟ್ ಪಂದ್ಯಾವಳಿಯನ್ನು ಬೃಹತ್ ಪರದೆಯಲ್ಲಿ ವೀಕ್ಷಿಸಿದರು, ಆರ್.ಸಿ.ಬಿ.ತಂಡದ ಅತ್ಯದ್ಭುತ ಗೆಲುವು ಜನ್ಮದಿನಾಚರಣೆಯ ಸಂಭ್ರಮವನ್ನು ಇಮ್ಮಡಿ ಗೊಳಿಸಿತು. ಆರ್.ಸಿ.ಬಿ. ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯ ಮೂಲಕ ಗೆಲುವಿನ ಸಂಭ್ರ‌ಮ ಆಚರಿಸಿದರು.

Leave a Reply

Your email address will not be published. Required fields are marked *