




ವಿಪ್ರ ಸೇವಾ ಟ್ರಸ್ಟ್ ನ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ :
ಯಲಹಂಕ : ವಿಪ್ರ ಸೇವಾ ಟ್ರಸ್ಟ್ ನ 19ನೇ ವಾರ್ಷಿಕೋತ್ಸವದ ಪ್ರಯುಕ್ತ ಯಲಹಂಕ ಉಪನಗರದಲ್ಲಿರುವ ಶ್ರೀ ಗಣೇಶ ಗಾಯತ್ರೀ ಮಂದಿರದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀನಿವಾಸ ಕಲ್ಯಾಣೋತ್ಸವ’ ಕಾರ್ಯಕ್ರಮವು ಅಸಂಖ್ಯಾತ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಯಶಸ್ವಿಯಾಗಿ ನೆರವೇರಿತು.
ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಶ್ರೀದೇವಿ, ಭೂದೇವಿ ಸಮೇತ ಶ್ರೀ ಶ್ರೀನಿವಾಸಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ, ಕಲ್ಯಾಣದಿ ಶಾಸ್ತ್ರ ವಿಧಿ ವಿಧಾನಗಳು, ಸತ್ಯನಾರಾಯಣ ಪೂಜೆ, ಮಾಸ ಶಿವರಾತ್ರಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶ್ರೀನಿವಾಸ ಕಲ್ಯಾಣೋತ್ಸವದ ಈ ದೈವ ಕಾರ್ಯದಲ್ಲಿ ವಿಪ್ರ ಸೇವಾ ಟ್ರಸ್ಟ್ ನ ಅಧ್ಯಕ್ಷ ಹೆಚ್.ವಿ. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಜಿ.ಎನ್.ಶ್ಯಾನುಭಾಗ್, ಕಾರ್ಯದರ್ಶಿ ಎ.ವಿ.ಲಕ್ಷ್ಮೀಶ, ಖಜಾಂಚಿ ಎಚ್.ಆರ್. ರಾಜಗೋಪಾಲ್ ಸೇರಿದಂತೆ ಕಾರ್ಯಕಾರಿ ಮಂಡಳಿಯ ಸದಸ್ಯರು ಹಾಗೂ ಅಸಂಖ್ಯಾತ ಭಕ್ತರಿದ್ದರು.
