



ಟಿ.ಎಸ್.ನವೀನ್ ಕುಮಾರ್ ಜನ್ಮದಿನಾಚರಣೆ :
ಸ್ನೇಹಿತರು, ಹಿತೈಷಿಗಳು, ಮುಖಂಡರಿಂದ ಶುಭ ಹಾರೈಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಬೆಟ್ಟಹಲಸೂರು ಗ್ರಾಮ ಪಂಚಾಯತಿ ಸದಸ್ಯರಾದ ಟಿ.ಎಸ್.ನವೀನ್ ಕುಮಾರ್ ಅವರ ಜನ್ಮದಿನಾಚರಣೆ ಪ್ರಯುಕ್ತ ಅವರ ಸ್ವಗ್ರಾಮ ತರಹುಣಸೆ ಗ್ರಾಮದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ಮುಖಂಡರು, ನವೀನ್ ಕುಮಾರ್ ಅವರ ಸ್ನೇಹಿತರು, ಹಿತೈಷಿಗಳು, ತರಹುಣಸೆ ಗ್ರಾಮದ ಯುವಕರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ನವೀನ್ ಕುಮಾರ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
