














ಬಸವಣ್ಣ ದೇವರ ದೇವಸ್ಥಾನದ ನೂತನ ವಿಮಾನ ಗೋಪುರ, ಧ್ವಜಸ್ಥಂಭ ಉದ್ಘಾಟನೆ :
ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರಿಂದ ದೇಗುಲ ದರ್ಶನ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮಸ್ಥರು ಮತ್ತು ದಾನಿಗಳ ನೆರವಿನೊಂದಿಗೆ ಶ್ರೀ ಬಸವಣ್ಣ ದೇವರ ಸೇವಾ ಸಮಿತಿ ಬೆಟ್ಟಹಲಸೂರು ವತಿಯಿಂದ ನಿರ್ಮಿಸಿದ್ದ ಶ್ರೀ ಬಸವಣ್ಣ ದೇವರ ದೇವಸ್ಥಾನದ ನೂತನ ವಿಮಾನ ಗೋಪುರ ಮತ್ತು ಧ್ವಜಸ್ಥಂಭದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಂಡು ಬಸವಣ್ಣ ದೇವರ ಕೃಪೆಗೆ ಪಾತ್ರರಾದರು. ಇದೇ ವೇಳೆ ಶ್ರೀ ಬಸವಣ್ಣ ದೇವರ ಸೇವಾ ಸಮಿತಿ ವತಿಯಿಂದ ಬಿ.ಎಸ್.ವೈ. ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ಮರಿಸ್ವಾಮಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ, ಶ್ರೀ ಬಸವಣ್ಣ ದೇವರ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಸ್.ಚಿತ್ರಶೇಖರ್ ಹಿರಿಯಾಳ್, ಉಪಾಧ್ಯಕ್ಷ ಬಿ.ಎಸ್.ನಟರಾಜ್, ಖಜಾಂಚಿ ಎಸ್.ಬಸವರಾಜ್(ಬಿ ಎಸ್ ಬಿ), ಟ್ರಸ್ಟ್ ನ ಪದಾಧಿಕಾರಿಗಳಾದ ನಂದೀಶ್ ಬಿ.ಆರ್., ಜೀರಿಗೆ ತೋಂಟದಾರ್ಯ, ನಂದೀಶ್ ಬಿ.ಎಸ್., ಸಿದ್ಧಪ್ಪ(ಅರ್ಚಕರು), ಆರ್.ಗೌರೀಶ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಿ.ಎಸ್.ಉಮಾಶಂಕರ್, ಬಿ.ನಂಜಪ್ಪ, ಬಿ.ಸಿ.ಶಿವರಾಜ್(ಶಿವು), ಪ್ರಮೋದ್ ಬಿ.ಎಲ್.ಸೇರಿದಂತೆ ಇನ್ನಿತರರಿದ್ದರು.
ನೂತನ ವಿಮಾನ ಗೋಪುರ ಮತ್ತು ಧ್ವಜಸ್ಥಂಭದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಶತ ರುದ್ರಾಭಿಷೇಕ, ಹೋಮ, ಹವನ, ವಿಶೇಷಪೂಜೆ, ತೀರ್ಥ ಪ್ರಸಾದ ವಿನಿಯೋಗ, ಅನ್ನದಾನ ಮುಂತಾದ ಹಲವಾರು ದೈವ ಕಾರ್ಯಗಳನ್ನು ನೆರವೇರಿಸಲಾಯಿತು.
ಹುಣಸಮಾರನಹಳ್ಳಿ ಶ್ರೀ ಮಠದ ಲಿಂಗೈಕ್ಯ ಸ್ವಾಮಿಗಳಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯವರು ಬೆಟ್ಟಹಲಸೂರು ಗ್ರಾಮದ ಶ್ರೀ ಬಸವಣ್ಣ ದೇವರ ದೇವಾಲಯದ ಸ್ಥಳ ದಾನಿಗಳಾಗಿದ್ದಾರೆ.
ಮಹತ್ವದ ಈ ದೈವ ಕಾರ್ಯಕ್ರಮಕ್ಕೆ ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷ್ಯರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮಾಲೂರು ತಾಲ್ಲೂಕು ಬೆಳ್ಳಾವಿ ಮಠದ ಶ್ರೀ ಮಹಂತ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಬಸವಲೋಕ ಮಠದ ಶ್ರೀ ಮಹದೇವ ಸ್ವಾಮೀಜಿ ಮುಂತಾದ ಹರಗುರು ಚರಮೂರ್ತಿಗಳು ಪಾಲ್ಗೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಕಾರ್ಯಕ್ರಮಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ರವಿ, ಸದಾಶಿವನಗರದ ಬಿ.ಜಿ.ಚನ್ನಪ್ಪ, ಎಂ.ಆರ್.ಶಿವರುದ್ರಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬ್ಯಾಟರಾಯನಪುರ ಕ್ಷೇತ್ರ ಘಟಕದ ಅಧ್ಯಕ್ಷ ಡಾ.ಕೆ.ಪಿ.ಗುರುಸ್ವಾಮಿ, ಯಲಹಂಕ ಕ್ಷೇತ್ರ ಘಟಕದ ಅಧ್ಯಕ್ಷೆ ಹೇಮಲತಾ ಚಿದಾನಂದ, ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಅಧ್ಯಕ್ಷರಾದ ಬಿ.ಎಂ.ನಾಗೇಶ್, ರಜನಿ ಪ್ರಕಾಶ್, ಬಿ.ಆರ್.ರಾಮಾಂಜಿನಪ್ಪ, ಸಾವಿತ್ರಮ್ಮ ಮುನಿರಾಜು, ಬಾಲರಾಜ್ ಸೇರಿದಂತೆ ಹಲವು ಗಣ್ಯಮಾನ್ಯರು ಆಗಮಿಸಿ ಶ್ರೀ ಬಸವಣ್ಣ ದೇವರ ಕೃಪೆಗೆ ಪಾತ್ರರಾದರು.
