























ಯಲಹಂಕ ನಗರ ಮಂಡಲ ಓಬಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಜನ್ಮದಿನಾಚರಣೆ :
ಎಸ್ ಆರ್ ವಿಶ್ವನಾಥ್ ಸೇರಿ ಹಲವು ಗಣ್ಯರಿಂದ ಶುಭ ಹಾರೈಕೆ :
ಯಲಹಂಕ : ಯಲಹಂಕ ನಗರ ಮಂಡಲ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಅವರ ಜನ್ಮದಿನದ ಪ್ರಯುಕ್ತ ಯಲಹಂಕದ ಮಾರುತಿನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು, ಸ್ನೇಹಿತರು, ಹಿತೈಷಿಗಳು ಕೇಕ್ ಕತ್ತರಿಸಿ ಸಂದೀಪ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತನಾಡಿ ‘ಸಂದೀಪ್ ನಮ್ಮ ಪಕ್ಷದ ಮುಖಂಡ ಎನ್ನುವುದು ಹೆಮ್ಮೆಯ ವಿಷಯ. ಕನ್ನಡ ನಾಡು, ನುಡಿಯ ಹೋರಾಟಗಳಲ್ಲೂ ಸಕ್ರಿಯವಾಗಿರುವ ಸಂದೀಪ್ ಬಡವರಿಗೆ ನಿವೇಶನ, ಸಾಮಾಜಿಕ ನ್ಯಾಯ ದೊರಕಿಸಿ ಕೊಡಿಸುವಂತಹ ಜನಪರ ಹೋರಾಟಗಳಲ್ಲೂ ಪಾಲ್ಗೊಳ್ಳುವ ಮೂಲಕ ಬಡವರ ಸೇವೆ ಮಾಡುತ್ತಿದ್ದು, ಜನ್ಮದಿನದ ಈ ಶುಭ ಸಂದರ್ಭದಲ್ಲಿ ಸಂದೀಪ್ ಅವರಿಗೆ ದೇವರು ಆಯುರಾರೋಗ್ಯ, ಸಂಪತ್ತು, ಉನ್ನತ ಅಧಿಕಾರ ನೀಡಿ ಆಶೀರ್ವದಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಓಬಿಸಿ ಮೋರ್ಚಾ ಅಧ್ಯಕ್ಷ ವಿ.ಎಂ.ಚಂದ್ರಯ್ಯ, ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಎಂ.ಈಶ್ವರ್, ಅಟ್ಟೂರು ವಾರ್ಡ್ 7ರ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಕರವೇ ರಾಜ್ಯ ಕಾರ್ಯದರ್ಶಿ ಸಾತನೂರು ಸುರೇಶ್, ಪ್ರಜಾ ವಿಮೋಚನಾ ಸೇವಾ ಸಮಿತಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಯೂಬ್ ಖಾನ್, ಸಂಘಟನೆಯ ಮುಖಂಡ ವಸೀಮ್, ಬಿಜೆಪಿ ಮುಖಂಡರಾದ ದಾಮೋದರ್, ಚಂದ್ರಹಾಸ್, ಸುನಿಲ್, ಅಟ್ಟೂರು ವಿಶ್ವ, ಧನಂಜಯ, ಮಹಿಳಾ ಮುಖಂಡರಾದ ಪ್ರಭಾ, ಶ್ಯಾಮಲಾ ಸೇರಿದಂತೆ ಇನ್ನಿತರರಿದ್ದರು.
