**ಕನ್ನಡ ರಾಜ್ಯೋತ್ಸವದ ಕಹಳೆ ಮತ್ತು ಗುರು ವಂದನೆಯ ಸಂಸ್ಕೃತಿ **

ದಿನಾಂಕ 16.11.2026 ನವೆಂಬರ್ ತಿಂಗಳು ನಮ್ಮ ಶಾಲೆಯ ಕನ್ನಡದ ಮನಸುಗಳಿಗೆ ಮರೆಯಲಾಗದ ಕ್ಷಣ.ಏಕೆಂದರೆ ಈ ದಿನ ನಮ್ಮ ಶಾಲೆಯಲ್ಲಿ 71 ನೇ ರಾಜ್ಯೋತ್ಸವ ಆಚರಣೆಯನ್ನು ಮತ್ತು ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ. ಎಂ. ಶ್ರೀ. ಪ್ರತಿಷ್ಟಾನದ ಅಧ್ಯಕ್ಷರು ಶ್ರೀ ಡಾ. ರಾಮೇಗೌಡರು ಬಂದದ್ದು ಬಹಳ ವಿಶೇಷ. ಹಾಗೆ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ನಮ್ಮ ಕೆನ್ ಶ್ರೀ ಶಾಲೆಯ ಸಂಸ್ಥಾಪಕರಾದ ಶ್ರೀ ಶ್ರೀಶ್ ಕುಮಾರ್ ಸರ್ ರವರು ಮತ್ತು ಅವರ ಧರ್ಮಪತ್ನಿಯವರಾದ ನಮ್ಮೆಲ್ಲರ ನೆಚ್ಚಿನ ರೋಹಿಣಿ ಮೇಡಂರವರು.
ಕನ್ನಡದ ಮನಸುಗಳಿಗೆ ನಿಜಕ್ಕೂ ಇಂತ ಒಂದು ಕಾರ್ಯಕ್ರಮ ಬಹಳ ಉತ್ತೇಜನ ಕೊಡುವಂತದ್ದು ಹಾಗೂ ಇಂದಿನ ದಿನಗಳಲ್ಲಿ ಅಗತ್ಯ ಕೂಡ.ಏಕೆಂದರೆ ಹಲವು ಆoಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವ ನಿಯಮಗಳನ್ನು ಬೆಳೆಸುತ್ತಿರುವುದು ನಿಜಕ್ಕೂ ತುಂಬಾ ಆಘಾತಕಾರಿ ವಿಷಯ. ಇಂತ ದಿನಗಳಲ್ಲಿ ಮಕ್ಕಳಿಂದಲೇ ಮಕ್ಕಳಿಗಾಗಿ ಮಕ್ಕಳೇ ನಡೆಸಿ ಕೊಡುವ ಕನ್ನಡದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾದದ್ದು ನಮ್ಮೆಲ್ಲರ ಅವಿಸ್ಮರಣೀಯ ಕ್ಷಣಗಳೇ ಸರಿ. ಮೊದಲಿಗೆ ಮುಖ್ಯ ಅತಿಥಿಗಳ ಮತ್ತು ಇನ್ನಿತರ ಇಬ್ಬರ ಪಾದ ತೊಳೆದು ಪೂಜೆ ಮಾಡಲಾಯಿತು ನಂತರ.
ನವವಧುವಿನಂತೆ ಸಿಂಗಾರ ಗೊಂಡ ಕೆನ್ ಶ್ರೀ ಶಾಲೆಯ ಮೈದಾನದ ಕ್ರೀಡಾoಗಣದಲ್ಲಿ ಹರಿಶಿನ ಕುಂಕುಮದ ಬಣ್ಣದಲ್ಲಿ ಮಿಂಚುತಿದ್ದ ವೇದಿಕೆಗೆ, ಆಗಮಿಸಿದ್ದ ಗಣ್ಯರೆಲ್ಲ ಆಸೀನರಾದರು. ಆಮೇಲೆ ದೀಪ ಬೆಳಗುವುದರ ಮೂಲಕ ಎಲ್ಲರೂ ಎದ್ದು ನಿಂತು, ನಮ್ಮ ನಾಡ ಗೀತೆಯನ್ನು ಹಾಡಿ ಕನ್ನಡಾoಬೆಗೆ ಗೌರವ ಸಲ್ಲಿಸಿದರು. ಸಂಗೀತ ಸರಸ್ವತಿಯ ಮಕ್ಕಳು ಮಲೆನಾಡ ಕನ್ನಡದ ಹಬ್ಬದ ಐಸಿರಿಯನ್ನು ತಮ್ಮ ಹಾಡಿನ ಮೂಲಕ “ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ ” ಎಂಬ ಅತ್ಯoತ ಸುಶ್ರಾವ್ಯ ” ಗೀತೆಯೊಂದನ್ನು ಹಾಡಿದರು. ನಂತರ ನಮ್ಮ ಪಿ. ಯೂ. ಸಿ. ಪ್ರಾಂಶುಪಾಲರಾದ, ಹೆಮ್ಮೆಯ ಕನ್ನಡದ ಕಣ್ಮಣಿ ಪುಟ್ಟರಾಜು ಸರ್ ರವರು, ಸ್ವಾಗತ ಭಾಷಣ ಮಾಡಿ ಬಂದಿದ್ದ ಎಲ್ಲ ಗಣ್ಯರೇಣ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತ, ಎಲ್ಲರಿಗು ಸುಸ್ವಾಗತ ಹೇಳಿದರು..
ತದ ನಂತರ ಏಳನೇ ತರಗತಿಯ ವಿದ್ಯಾರ್ಥಿನಿಯರೆಲ್ಲ ಕೇಳಿಸದೇ ಕಲ್ಲು ಕಲ್ಲಿನಲಿ ಎಂಬ ಹಾಡಿದೆ ನೃತ್ಯ ಮಾಡಿದರು.

ಬೈರಮಂಗಲ ರಾಮೇಗೌಡರ ಕಿರುಪರಿಚಯದೊಂದಿಗೆ ಅವರ ಮಾತಿಗೆ ಕಿವಿಯಾದೆವು. ಅವರು ತಮ್ಮ ಭಾಷಣದಲ್ಲಿ ಪ್ರಸ್ತುತ ಆoಗ್ಲ ಶಾಲೆಗಳಲ್ಲಿ ಕನ್ನಡದ ಪರಿಸ್ಥಿತಿಯ ಬಗ್ಗೆ, ಮಾತನಾಡುತ್ತಾ, ಅವರ ಕೆಲವು ಅಭಿಪ್ರಾಯಗಳನ್ನು, ತಮ್ಮ ಶ್ರೇಷ್ಠ ನುಡಿಗಳ ಮೂಲಕ, ನಮ್ಮೊoದಿಗೆ ಹಂಚಿಕೊoಡರು. ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಭಾಷೆ ಬೆಳೆದು ಬಂದ ಹಾದಿ, ರನ್ನ ಪೊನ್ನ ಪಂಪ, ಕವಿರಾಜ ಮಾರ್ಗ, ಶ್ರೀವಿಜಯ, ಹಲ್ಮಿಡಿ ಶಾಸನ, ನಮ್ಮ ಕಲೆ ಸಂಸ್ಕೃತಿ, ಮಕ್ಕಳ ಕಲಿಕೆ, ಇಂದಿನ ದಿನದ ಅಧ್ಯಾಪಕರಲ್ಲಿನ ಕುಂದು ಕೊರತೆಗಳು, ಹೀಗೇ ಹಲವಾರು ವಿಷಯಗಳ ಸಂಕ್ಷಿಪ್ತ ಮಾಹಿತಿಗಳನ್ನು, ನಮಗೆ ಸವಿಯಲು ಅನುವು ಮಾಡಿಕೊಟ್ಟರು. ಇನ್ನಷ್ಟುಹೊತ್ತು ಅವರ ಮಾತುಗಳನ್ನು ಕೇಳಬಹುದಿತ್ತು ಅನಿಸಿದ್ದು ಮಾತ್ರ ಸತ್ಯ..ಅವರ ಆಗಾಧ ಜ್ಞಾನ, ಕನ್ನಡದ ಬಗೆಗಿನ ಅಭಿಮಾನಕ್ಕೆ, ನಾವೆಲ್ಲ ಅಕ್ಷರ ಸಹ ಸೋತಿದ್ದೆವು.

ಅಷ್ಟೇ ಅಲ್ಲ. ಇಂದಿನ ಮತ್ತೊಂದು ವಿಶೇಷವೇನೆಂದರೆ, ಈ ಸುದಿನ ಸಮಯದಲ್ಲಿ
ಹಲವು ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಪ್ರಾoಶುಪಾಲರು, ಸಾಧಕರು ನಮ್ಮೊಂದಿಗಿದ್ದು ನಮ್ಮ ಆಹ್ವಾನವನ್ನು ಮನ್ನಿಸಿ,ನಮ್ಮ ಶಾಲೆಗೆ ಬಂದು ನಮ್ಮ ಆತಿಥ್ಯವನ್ನು ಸ್ವೀಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು, ಬಹಳ ಸಂತೋಷದ , ಸಂಭ್ರಮದ ಕ್ಷಣ. ಈ ಗುರುವಂದನಾ ಸಮಾರಂಭದ
ಸನ್ಮಾನಿತರು
ಡಾ. ಎ. ಸುರೇಶ್, ಸಂಸ್ಥಾಪಕರು ಎಸ್ .ಜೆ.ಎಂ ಪಬ್ಲಿಕ್ ಶಾಲೆ.
ಡಾ. ಗೋಣಿಹಳ್ಳಿ ಬಸವರಾಜ್, ಸಂಸ್ಥಾಪಕರು ನ್ಯೂ ಪ್ರಿಯದರ್ಶಿನಿ ಶಾಲೆ.
ಶ್ರೀ ಸುಹಾಸ್ ಸುಬ್ಬರಾಜು, ನಿರ್ದೇಶಕರು ಎಸ್ .ವಿ.ಎನ್ ಆಂಗ್ಲ ಶಾಲೆ.
ಶ್ರೀಮತಿ ಮಾರ್ಗರೆಟ್ ಪುಷ್ಪ, ಕಾರ್ಯದರ್ಶಿಗಳು ಲಿಟಲ್ ಗ್ಲಾಡಿಯಸ್ ಪ್ರೌಢ ಶಾಲೆ.
ಡಾ. ಪ್ರಶಾಂತ್ ಜಿ.ಆರ್, ಕಾರ್ಯದರ್ಶಿಗಳು ಆರ್ ಆರ್ ಗ್ಲೋಬಲ್ ಶಾಲೆ.
ಶ್ರೀ ಸಿ. ಬಿ. ಅಪ್ಪಯ್ಯ, ನಿರ್ದೇಶಕರು ಲಿಟಲ್ ಎಂಜೆಲ್ಸ್ ಪಬ್ಲಿಕ್ ಶಾಲೆ.
ಶ್ರೀಮತಿ ಸುರಭಿ ಯಾಮಿನಿ ಅಯ್ಯಂಗಾರ್, ಪ್ರಾಂಶುಪಾಲರು ಯಂಗ್ ಸ್ಟಾರ್ ಅಕಾಡೆಮಿ.
ಶ್ರೀಮತಿ ಶಂಷದ್ ಹನೀಫ್, ಪ್ರಾಂಶುಪಾಲರು ಎಲ್. ಎ. ಇಂಟರ್ ನ್ಯಾಷನಲ್ ಶಾಲೆ
ಶ್ರೀಮತಿ ಪ್ರತ್ಯೂಷ ಮಿಡುತುರಿ ಪ್ರಾಂಶುಪಾಲರು ಜೆ .ಎಸ್.ಎಸ್ ಪಬ್ಲಿಕ್ ಶಾಲೆ
ಶ್ರೀಮತಿ ಜಿ.ಬಿ. ಭಾರ್ಗವಿ, ಪ್ರಾಂಶುಪಾಲರು ಇಂಡಿಯನ್ ಪಬ್ಲಿಕ್ ಶಾಲೆ.
ಶ್ರೀಮತಿ ದಿವ್ಯ ಕಿರಣ್, ಪ್ರಾಂಶುಪಾಲರು ಶಾರದಾ ವಿದ್ಯಾಲಯ.
ಶ್ರೀಮತಿ ಶಿರಿಷ ರಾಮನ್.ಪಿ, ಪ್ರಾಂಶುಪಾಲರು ಕೆನ್ನೆತ್ ಜಾರ್ಜ್ ಆಂಗ್ಲ ಶಾಲೆ
ಸ್ವೀಟಿ ಜಿ ಜೆ , ಪ್ರಾಂಶುಪಾಲರು, ಬೆಥೆಲ್ ಎಜುಕೇಶನ್ ಅಕಾಡೆಮಿ.

ಇವರುಗಳೆಲ್ಲ ನಮ್ಮ ಶಾಲೆಗೆ ಬಂದು ತಮ್ಮ ಅತ್ಯಮೂಲ್ಯ ಕ್ಷಣಗಳನ್ನು ನಮ್ಮೊಂದಿಗೆ ಕಳೆದದ್ದು ಬಹಳ ಖುಷಿ ಕೊಟ್ಟ ವಿಚಾರ. ನಂತರ ನಮ್ಮ ಪದವಿ ಓದುವ ಮಕ್ಕಳು ಹಲವು ಸುಮಧುರವಾದ ಗೀತೆಗಳಿಗೆ ಹೆಜ್ಜೆ ಹಾಕಿದರು. ಕುವೆಂಪು, ಬೇಂದ್ರೆ, ಜಿ. ಪಿ ರಾಜರತ್ನo, ಜಾನಪದ ಕಲೆಯ ಬಳೆಗಾರ, ಜನಪದ ಹೆಣ್ಣು, ಕೊರವಂಜಿ, ಸರ್ವಜ್ಞ, ಛದ್ಮವೇಷಧಾರಿಗಳಾಗಿ ಬಂದು, ಬಹಳ ಅಚ್ಚುಕಟ್ಟಾಗಿ ತಮ್ಮ ಪ್ರತಿಭೆಯನ್ನು ಬೆಳಗಿದರು. ಗುರುವಂದನೆಗಾಗಿ ಬಂದಿದ್ದ ಹಿರಿಯರಿಬ್ಬರು ನಮ್ಮ ಶಾಲೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು, ಹಂಚಿಕೊಂಡರು. ನಾವೆಲ್ಲರೂ ಕಾತುರದಿಂದ ಕಾಯುತಿದ್ದ ಸಮಯ, ನಮ್ಮ ಶಾಲೆಯ ಸಂಸ್ಥಾಪಕರ ನುಡಿಗಳು, ತಮ್ಮ ಹಿತನುಡಿಗಳಿಂದ ನಮ್ಮನ್ನು ಮತ್ತಷ್ಟು ಉತ್ತೇಜಸಿದರು. ನಮ್ಮ ಹಿಂದೂ ಸಂಸ್ಕೃತಿ, ಸನಾತನ ಧರ್ಮ, ವಸುದೈವ ಕುಟುಂಬಕo ಇದಕ್ಕೆ ಅನುಸಾರವಾಗಿ, ತಮ್ಮ ತಾಯಿಯವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಇಂತ ಸಂಸ್ಥೆಯನ್ನು ಕಟ್ಟಿ ಅನೇಕರಿಗೆ ಉದ್ಯೋಗವಕಾಶವನ್ನು ಕಲ್ಪಿಸಿ, ಸಾವಿರಾರು ಮಕ್ಕಳನ್ನು ಸಾಧಕರನ್ನಾಗಿ ಮಾಡಿ, ಇಂದು ನಮ್ಮ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟ ಪರಿ ಅನನ್ಯ. ನಂತರ ಮಕ್ಕಳು ಹಲವಾರು ಜನಪ್ರಿಯ ಹಾಡುಗಳ ಪಲ್ಲವಿಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ನಂತರ ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದವರಿಗೆ ಬಹುಮಾನಗಳನ್ನು ನೀಡಲಾಯಿತು. ಕೊನೆಯದಾಗಿ, ನಮ್ಮ ಡಿ. ಎಸ್. ಕರ್ಕಿಯವರ ಹಚ್ಛೇವು ಕನ್ನಡದ ದೀಪ ಹಾಡನ್ನು ಹಾಡಿ ಎಲ್ಲರನ್ನೂ ಬೀಳ್ಕೊಡಲಾಯಿತು.

Leave a Reply

Your email address will not be published. Required fields are marked *