ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ 76ನೇ ಶಾಖೆ ಸಹಕಾರ ನಗರದಲ್ಲಿ ಉದ್ಘಾಟನೆ
ಬೆಂಗಳೂರು: ಯಲಹಂಕ. ಮುಧೋಳದ ಪ್ರತಿಷ್ಠಿತ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ನೂತನ 76ನೇ ಶಾಖೆಯು ಬೆಂಗಳೂರಿನ ಸಹಕಾರ ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು.
ಸೋಮವಾರ (ನ. 16) ಸಂಜೆ 5 ಗಂಟೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಶ್ರೀ ಮಹಾಲಕ್ಷ್ಮಿ, ಸರಸ್ವತಿ ಹಾಗೂ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ನೆರವೇರಿತು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಡಾ. ಮುರುಗೇಶ್ ಆರ್. ನಿರಾಣಿ. ಹಾಗೂ ತಮೈಶ್ ಗೌಡ ಹೆಚ್.ಸಿ.
ರಾಜ್ಯ ಕಾರ್ಯದರ್ಶಿ, ಬಿಜೆಪಿ ಕರ್ನಾಟಕ. ಸೇರಿದಂತೆ ಹಲವು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಸಂಸ್ಥೆಯ ಆಶಯ:
ಸಹಕಾರ ಕ್ಷೇತ್ರದ ಮೂಲಕ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುತ್ತಾ, ಜನಸಾಮಾನ್ಯರಿಗೆ ಉತ್ತಮ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿರುವ ಈ ಸಂಸ್ಥೆಯ ನೂತನ ಶಾಖೆಯು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಜನರ ವಿಶ್ವಾಸ ಮತ್ತು ಅಭಿವೃದ್ಧಿಯ ಸಂಕೇತವಾಗಿ ಮೂಡಿಬರಲಿ ಎಂದು ಗಣ್ಯರು ಹಾರೈಸಿದರು. ಈ
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಬಂಧುಗಳು ತಾನಾಜಿ ಮಾನೆ ನಾಗಪ್ಪ ರವರು ಸೇರಿದಂತೆ. ಮತ್ತು ಹಿತೈಷಿಗಳು ಪಾಲ್ಗೊಂಡಿದ್ದರು. ವಿಳಾಸ. ಸಹಕಾರ ನಗರದ ಎ ಬ್ಲಾಕ್, 20ನೇ ಮೇನ್, 20ನೇ ಕ್ರಾಸ್, ನಂ. 571 ರಲ್ಲಿರುವ ಈ ಶಾಖೆಯು ಸ್ಥಳೀಯ ಗ್ರಾಹಕರಿಗೆ ಅತ್ಯುತ್ತಮ ಸಹಕಾರಿ ಸೇವೆಗಳನ್ನು ನೀಡಲಿದೆ.

Leave a Reply

Your email address will not be published. Required fields are marked *