ಶ್ರೀ ಧಡೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ.
ಭಾಲ್ಕಿ (ಬೀದರ್): ತಾಲ್ಲೂಕಿನ ಬೋಳೆಗಾಂವ್ ಗ್ರಾಮದ ಶ್ರೀ ಬಸವಣ್ಣ ದೇವಸ್ಥಾನದಲ್ಲಿ ಕಳೆದ ಏಳು ದಿನಗಳಿಂದ ಅತ್ಯಂತ ಭಕ್ತಿ-ಭಾವದಿಂದ ನಡೆದುಕೊಂಡು ಬಂದ ಸಪ್ತಾಹ ಹಾಗೂ ‘ಶ್ರೀ ಧಡ್ಡೇಶ್ವರ ಜಾತ್ರಾ ಮಹೋತ್ಸವ-2026’ರ ಅಂಗವಾಗಿ ಮಂಗಳವಾರ (ನ. 17) ಸಂಜೆ ಬಸವ ಪುರಾಣ ಮಂಗಲೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಆಗಮಿಸಿ, ನೆರೆದಿದ್ದ ಭಕ್ತಸಮೂಹಕ್ಕೆ ದಿವ್ಯ ದರ್ಶನ ಹಾಗೂ ಆಶೀರ್ವಚನ ನೀಡಿದರು. ಏಳು ದಿನಗಳ ಕಾಲ ನಡೆದ ಬಸವ ಪುರಾಣ ಪ್ರವಚನ ಹಾಗೂ ಸಪ್ತಾಹದ ಸಮಾರೋಪದ ಅಂಗವಾಗಿ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಕಾರ್ಯಕ್ರಮದ ಬಳಿಕ ದೇವಸ್ಥಾನದ ಆವರಣದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ಹಾಗೂ ಮಹಾಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *