











ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ ವತಿಯಿಂದ
4ನೇ ವರ್ಷದ ಬ್ಯಾಡ್ಮಿಂಟನ್ ಪಂದ್ಯಾವಳಿ :
ಯಲಹಂಕ : ಕ್ರೀಡಾ ಸ್ಪೂರ್ತಿ, ಸ್ನೇಹ ಸೌಹಾರ್ದತೆ ಮತ್ತು ಒಗ್ಗಟ್ಟಿನ ಸಂಭ್ರಮಾಚರಣೆಯ ದಿಸೆಯಲ್ಲಿ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ, ಯಲಹಂಕ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಎ.ಬಿ. ಕಾರ್ಟರ್ ಇಂಡಿಯಾ ಪ್ರೈವೇಟ್ ಲಿ. ಸಂಸ್ಥೆಯ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಶ್ರೀವರ್ಮಾ ಶೆಟ್ಟಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ‘ ಸಂಘದ ಸದಸ್ಯರು ಮತ್ತು ಅವರ ಕುಟುಂಬಸ್ಥರಲ್ಲಿ ಕ್ರೀಡಾ ಮನೋಭಾವ, ಸೌಹಾರ್ದತೆ ಮತ್ತು ಒಗ್ಗಟ್ಟು ಪ್ರದರ್ಶನದ ನಿಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ ಆಯೋಜಿಸಿರುವ ಪಂದ್ಯಾವಳಿ ಒಂದು ಮಾದರಿ ಪಂದ್ಯಾವಳಿಯಾಗಿದ್ದು, ಇತರರಿಗೆ ಅನುಕರಣೆಯವಾಗಿದೆ. ದೈನಂದಿನ ಬದುಕಿನ ಹೋರಾಟದ ಜೊತೆಗೆ ಸಂಘದ ಸದಸ್ಯರು ತಮ್ಮ ಕುಟುಂಬಸ್ಥರೊಂದಿಗೆ ಸಾಂಘಿಕವಾಗಿ ಒಗ್ಗಟ್ಟಾಗುವ ಹೊಸದೊಂದು ಪರಂಪರೆಯನ್ನು ಈ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೂಲಕ ದಕ್ಷಿಣ ಕನ್ನಡ ಸಾಂಸ್ಕೃತಿಕ ಸಂಘ ಹುಟ್ಟು ಹಾಕಿದೆ. ಇಂತಹ ಒಗ್ಗಟ್ಟು ಸಂಘ ಸಂಸ್ಥೆಗಳಲ್ಲಿ ಅತ್ಯಗತ್ಯವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡಿಗರ ಸಾಂಸ್ಕೃತಿ ಸಂಘ ಯಲಹಂಕದ ಅಧ್ಯಕ್ಷ ಶೇಖರ್ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿದ್ದರು.
4ನೇ ವರ್ಷದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿವಿಧ ವಯೋಮಾನದ ಸುಮಾರು 100ಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.
ಪಂದ್ಯಾವಳಿಯಲ್ಲಿ 12 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಅನ್ವಿಕಾ ಪ್ರಥಮ ಸ್ಥಾನ, ಆದಿತ್ ದ್ವಿತೀಯ ಸ್ಥಾನ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿನಯ್ ಕೆ. ಪ್ರಥಮ ಸ್ಥಾನ, ಆಕಾಂಕ್ಷ್ ದಾಸ್ ದ್ವಿತೀಯ ಸ್ಥಾನ, ಮಹಿಳೆಯರ ಸಿಂಗಲ್ ವಿಭಾಗದಲ್ಲಿ ಅದಿತಿರಾವ್ ಪ್ರಥಮ ಸ್ಥಾನ ಅಶ್ವಿತಾ ಶೆಟ್ಟಿ ದ್ವಿತೀಯ ಸ್ಥಾನ, ಮಿಕ್ಸ್ಡ್ ಡಬಲ್ಸ್ ವಿಭಾಗದಲ್ಲಿ ಆಕಾಂಕ್ಷ್ ದಾಸ್ ಮತ್ತು ಶೃತಿ ಸತೀಶ್ ಪ್ರಥಮ ಸ್ಥಾನ, ವಿಕೆಶ್ ಬಿ. ಮತ್ತು ಪಲ್ ಚೌಟ ದ್ವಿತೀಯ ಸ್ಥಾನ ಪಡೆದರು. ಉಳಿದಂತೆ 12-16 ವಯೋಮಾನದ ಮಕ್ಕಳ ಸಿಂಗಲ್ಸ್ ವಿಭಾಗದಲ್ಲಿ ಅದಿತಿ ರಾವ್ ಪ್ರಥಮ ಸ್ಥಾನ ಅನ್ಷ್ ಪಿ. ದ್ವಿತೀಯ ಸ್ಥಾನ, 50 ವರ್ಷ ಮೇಲ್ಪಟ್ಟ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಾಬರ್ಟ್ ಮೊನಿಸ್ ಪ್ರಥಮ ಸ್ಥಾನ, ಗಣೇಶ್ ದ್ವಿತೀಯ ಸ್ಥಾನ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ಯೋತಿ ಶೆಟ್ಟಿ ಮತ್ತು ಶೃತಿ ಸತೀಶ್ ಪ್ರಥಮ ಸ್ಥಾನ, ತನಿರಿಕಾ ಆರ್. ಪುತ್ರನ್ ಮತ್ತು ಸುಭಾಷಿಣಿ ದ್ವಿತೀಯ ಸ್ಥಾನ, ಪುರುಷರ ಡಬಲ್ಸ್ ವಿಭಾಗದಲ್ಲಿ ಕೀರ್ತನ್ ಶೆಟ್ಟಿ ಮತ್ತು ಪವನ್ ಶೆಟ್ಟಿ ಪ್ರಥಮ ಸ್ಥಾನ, ಶ್ರೀಹರ್ಷ ಉರಾಲಾ ಮತ್ತು ಪ್ರಶಾಂತ್ ದ್ವಿತೀಯ ಸ್ಥಾನ ಪಡೆದರು. ಪುರುಷರ ಜಂಬಲ್ 90+ ವಿಭಾಗದಲ್ಲಿ ಗಣೇಶ್ ಮತ್ತು ವಿನಯ್ ಕೆ ಪ್ರಥಮ ಸ್ಥಾನ, ಕಾಶಿನಾಥ್ ರೈ ಮತ್ತು ಅಭಿಷೇಕ್ ಎಂ.ಸಿ. ದ್ವಿತೀಯ ಸ್ಥಾನ ಪಡೆದರು.
