




ಚಲ್ಲಹಳ್ಳಿ ಡೈರಿ ನೂತನ ಕಟ್ಟಡ ಉದ್ಘಾಟನೆ :
ಯಲಹಂಕ : ಯಲಹಂಕ ಕ್ಷೇತ್ರದ ಚಲ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿದ್ದ ಹಾಲಿನ ಡೈರಿ ನೂತನ ಕಟ್ಟಡವನ್ನು ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಚಲ್ಲಹಳ್ಳಿಯಲ್ಲಿ ನೂತನ ಡೈರಿ ಕಟ್ಟಡ ನಿರ್ಮಿಸಬೇಕೆಂಬ ಗ್ರಾಮದ ಹಾಲು ಉತ್ಪಾದಕರ ಮನವಿಗೆ ಓಗೊಟ್ಟು ಅತ್ಯಾಧುನಿಕ ಶೈಲಿಯಲ್ಲಿ ನೂತನ ಡೈರಿ ಕಟ್ಟಡ ನಿರ್ಮಿಸಲಾಗಿದ್ದು, ಇದರೊಂದಿಗೆ ಗ್ರಾಮಸ್ಥರ ಮನವಿಗೆ ಸ್ಪಂದಿಸಲಾಗಿದೆ. ಇದು ಸುಮಾರು 2 ಸಾವಿರ ಲೀಟರ್ ಹಾಲು ಸಂಗ್ರಹಣೆಯ ಸಾಮರ್ಥ್ಯವನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ಹೈನು ಉತ್ಪಾದಕರ ಪ್ರಗತಿಗಾಗಿ ಹೆಚ್ಚಿನ ಸವಲತ್ತು ಮತ್ತು ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಮೂಲ್ ಅಧಿಕಾರಿಗಳು, ಡೈರಿಯ ಪದಾಧಿಕಾರಿಗಳು, ಗ್ರಾಮದ ಗಣ್ಯರು, ಅಕ್ಕಪಕ್ಕದ ಗ್ರಾಮಗಳ ರೈತ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
