ಹೊಸಕೋಟೆಯ ಚಾರ್ವಿ ಎಸ್ ಗೌಡ, ಜಾನ್ಹಾವಿ, ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಹೊಸಕೋಟೆ : ದಿನಾಂಕ 2- 9 -2023 ರಂದು ಅಂಬೇಡ್ಕರ್ ಸ್ಟೇಡಿಯಂನಲ್ಲಿ ಕೇಲೋ ಇಂಡಿಯಾ ಟೇಕ್ವಾಂಡೋ ಕ್ರೀಡೆಗೆ ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಟೇಕ್ವಾಂಡೊ ಅಸೋಸಿಯೇಷನ್ ಹಮ್ಮಿಕೊಂಡಿದ್ದರು. ಈ ಒಂದು ಆಯ್ಕೆ ಪ್ರಕ್ರಿಯೆಗೆ ಕರ್ನಾಟಕದ ನಾನಾ ಭಾಗದಿಂದ ಕ್ರೀಡಾಪಟುಗಳು ಭಾಗವಹಿಸಿದ್ದು ಹೊಸಕೋಟೆಯ ಗ್ಲೋಬಲ್ ಟೇಕ್ವಾಂಡೊ ಅಕಾಡೆಮಿ ವತಿಯಿಂದ ಚಾರ್ವಿ ಎಸ್ ಗೌಡ ಯು -42ಕೆಜಿ, ಜಾನ್ಹಾವಿ ಯು- 46 ಕೆಜಿ , ವಿದ್ಯಾರ್ಥಿನಿಯರು ಭಾಗವಹಿಸಿ ಆಯ್ಕೆಯಾಗಿರುತ್ತಾರೆ ಇದೇ ಸೆಪ್ಟೆಂಬರ್ ತಿಂಗಳು 2023ರಲ್ಲಿ ಕೇರಳದಲ್ಲಿ ನಡೆಯುವ ಕೆಲೋ ಇಂಡಿಯಾ ದಕ್ಷಿಣ ವಿಭಾಗದಲ್ಲಿ ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸುತ್ತಿರುತ್ತಾರೆ. ವಿದ್ಯಾರ್ಥಿನಿಯರಿಗೆ ಪೋಷಕರು ಮತ್ತು ಗ್ಲೋಬಲ್ ಟೇಕ್ವಾಂಡೊ ಅಕಾಡೆಮಿಯ ಮುಖ್ಯ ಶಿಕ್ಷಕರಾದ ಕೋಮಲ ಮತ್ತು ಕಾರ್ತಿಕ್ ರವರು ಶುಭವನ್ನು ಹಾರೈಸಿದರು.

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.