ಬಳ್ಳಾರಿ,ಸೆ.12,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಳ್ಳಾರಿ ಕಚೇರಿಯ ಪ್ರಭಾರಿ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ, ಚಿತ್ರದುರ್ಗ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ತುಕಾರಾಂ ರಾವ್ ಬಿ.ವಿ ಅವರಿಗೆ ಮಂಗಳವಾರದಂದು ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಕಚೇರಿ ಸಿಬ್ಬಂದಿಗಳಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಚೇರಿಯ ಸಿಬ್ಬಂದಿಗಳಾದ ಪ್ರಥಮ ದರ್ಜೆ ಸಹಾಯಕ ಗುರುರಾಜ.ವಿ.ಸಿ, ಗ್ರೂಪ್ ಡಿ ನೌಕರರಾದ ಹೆಚ್.ವಿಜಯಕುಮಾರ, ರೋಜ್ ಮೇರಿ, ಹನುಮಂತಪ್ಪ, ಶ್ರೀಧರ್ ಕವಾಲಿ, ಮಲ್ಲೇಶಪ್ಪ, ಹನುಮೇಶ್.ಹೆಚ್, ಲಿಂಗಯ್ಯ ಎಲ್ಲರೂ ಅವರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಹಿರಿಯ ಸಹಾಯಕ ನಿರ್ದೇಶಕರಾಗಿ ಜಡಿಯಪ್ಪ.ಜಿ ಅವರನ್ನು ಸ್ವಾಗತಿಸಲಾಯಿತು.

Sep 12, 2023

1ನೇ ಸುದ್ದಿ ಸಾರ್,

Leave a Reply

Your email address will not be published. Required fields are marked *