ಜಮಖಂಡಿಯ ರಮಾ ನಿವಾಸದಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಸೂಕ್ಷೇತ್ರ ಮೂಲ ಬಬಲಾದಿ ಮಠದ ಸಿದ್ರಾಮಯ್ಯ ಶ್ರೀಗಳು.
ಜಮಖಂಡಿ: ಇಂದಿನ ಕಾಲದಲ್ಲಿ ಸ್ವಯಂ ಘೋಷಿತ ಡೊಂಗಿ ಸ್ವಾಮಿಗಳು, ಮಠಾಧಿಶರು ಪ್ರತಿನಿತ್ಯ ಹೆಚ್ಚಾಗುತ್ತಿದ್ದಾರೆ,ಅದೇ ರೀತಿ ಜಮಖಂಡಿಯ ಆಲಗೂರ ಪುನರ್ವಸತಿ ಕೇಂದ್ರದಲ್ಲಿ ಇತ್ತೀಚಿಗೆ ಒಂದು ವರ್ಷದಲ್ಲಿ ಹೊಸ ಬಬಲಾದಿ ಮಠ ಎಂದು ಸ್ಥಾಪಿಸಿ ಭಕ್ತರನ್ನು ಅಂಧರನ್ನಾಗಿ ಮಾಡಿದ್ದು,ಅತೀಕ್ರಮಣದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ಮೇಲೆ ಹಲ್ಲೆಯ ಘಟನೆ ನಡೆದಿದೆ,ಬಬಲಾದಿ ಮೂಲಮಠಕ್ಕೂ ಜಮಖಂಡಿಯ ಹೊಸ ಬಬಲಾದಿ ಮಠಕ್ಕೆ ಯಾವುದೇ ಸಂಬಂದವಿಲ್ಲ ಮೂಲ ಮಠಕ್ಕೆ ಧಕ್ಕೆ ಯಾಗುತ್ತದೆ ಎಂದು ಮೂಲ ಮಠದ ಸಿದ್ರಾಮಯ್ಯ ಶ್ರೀಗಳು ಸ್ಪಷ್ಟನೆ ನೀಡಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂತಹ ಅನರ್ಹ ಮಠಾಧೀಶರು,ಪೂಜಾರಿಗಳು ಮೂಲ ಮಠದ ಸಂಸ್ಕೃತಿಗಳನ್ನು ಹಾಳು ಮಾಡುವುದು ಅಲ್ಲದೆ,ಮಠದ ಹೆಸರಿನಲ್ಲಿ ಕೋವಿಡ-19 ರ ನಂತರ ಹಣ ವಸೂಲಿ ಮಾಡುವುದು,ಬಂದ ಭಕ್ತರಿಗೆ ದೆವ್ವ ಭೂತ ಬಿಡಿಸುವ ಹೆಸರಲ್ಲಿ ಅಂಧ ಭಕ್ತಿಯಡೆ ದೂಗಿಸುತ್ತಿದ್ದಾರೆ,ಮಠದ ಮಠಾಧೀಶರು ಜಾತ್ರಾಕಮೀಟಿ ಗುರು ಹಿರಿಯರ ಅಪ್ಪಣೆ ಇಲ್ಲದೆ ತಮ್ಮ ಮನಸ್ಸಿಗೆ ಬಂದ ರೀತಿ ಭಕ್ತರಿಂದ ಜಾಗೆ ದೇಣಿಗೆ ಪಡೆದು ಹೊಸ ಬಬಲಾದಿ ಮಠ ಎಂದು ಹೆಸರಿಟ್ಟು ಭಕ್ತರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ.
ನಮ್ಮ ಬಬಲಾದಿ ಮಠದ ಯಾವುದೇ ಶಾಖಾ ಮಠಗಳಿಲ್ಲ ಅಷ್ಟೇ ಅಲ್ಲದೆ ಮಠದ ಜಾಗೆ ಬಿಟ್ಟು ರಸ್ತೆ ಬಂದಿರುವ ಅತೀಕ್ರಮಣದ ಜಾಗೆಯ ವಿರುದ್ದ ಪ್ರಶ್ನಿಸಿದ ಪತ್ರಕರ್ತ ಶಿವಯ್ಯಾ ಪೂಜಾರಿ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ ಇದರ ಬಗ್ಗೆ ಕಾನೂನು ಮತ್ತು ಗುರು ಹಿರಿಯರ ಸಮ್ಮುಖದಲ್ಲಿ ಸೂಕ್ತ ಕ್ರಮ ತಗೆದುಕೊಳ್ಳುತ್ತೆವೆ ಎಂದರು.ಕುಂಚನೂರ ಗ್ರಾಮ ಪಂಚಾಯತ ಅದ್ಯಕ್ಷ ಶಂಕರ ಕಾಂಬಳೆ ಮಾತನಾಡಿ, ನಾನು ಬಬಲಾದಿ ಮಠದ ಭಕ್ತನಾಗಿ ಮನವಿ ಮಾಡುತ್ತೆನೆ ಎರಡನೆ ಬಬಲಾದಿ ಮಠ ಎಲ್ಲಿಯೂ ಇಲ್ಲ ಇರುವುದು ಒಂದೇ ಬಬಲಾದಿ ಮಠ ಅದು ಬಬಲಾದಿಯಲ್ಲಿದೆ ಆದುದರಿಂದ ಎರಡನೆ ಬಬಲಾದಿ ಮಠ ಎಂದು ಯಾರು ಹೇಳಬೇಡಿ ಎಂದರು,2000 ನೇ ಇಸ್ವಿಯಲ್ಲಿ ಚಿನಗುಂಡಿ ಗ್ರಾಮದಲ್ಲಿ ಏಳುತ್ತದೆ ಎಂದು ಸುದ್ದಿ
ಹರಡಿಸಿದರು ಆದ ಕಾರಣ ಎತಡು ಲಕ್ಷ ಜನ ಭಕ್ತರು ಸೇರಿದ್ದ ಘಟನೆ ಆದುದರಿಂದ ಹಾಗೆ ಯಾರು ಬಬಲಾದಿ ಮಠದ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಹೇಳಿದರು.
ನನ್ನ ಮನೆ ಹೊಸ ಬಬಲಾದಿ ಮಠದ ಹತ್ತಿರ ಇದ್ದು ಮಠದ ಜಾಗೆಯನ್ನು ಬಿಟ್ಟು ಸುಮಾರು 5-6 ಫೂಟ್ ಅತಿಕ್ರಮಣ ಮಾಡಿಕೊಂಡು ರಸ್ತೆ ಮೇಲೆ ಬಂದಿದೆ ಪ್ರತಿ ಸೋಮವಾರ ದಾಸೋಹ ನಡೆಯುವುದರಿಂದ ಭಕ್ತರ ಎಲ್ಲ ವಾಹನಗಳು ರಸ್ತೆಯಲ್ಲಿ ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರಶ್ನಿಸಿದಾಗ ಏಕಾ ಏಕಿ ಹಲ್ಲೆ ಮಾಡಿ ನನಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ,ಅತೀಕ್ರಮಣದ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದೆನೆ ಎಂದು ಹಲ್ಲೆ ಗೊಳಗಾದ ಪತ್ರಕರ್ತ ಶಿವಯ್ಯಾ ಪೂಜಾರಿ ಘಟನೆಯ ಸ್ಪಷ್ಟನೆ ನೀಡಿದರು, ಇದೇ ಸಂಧರ್ಭದಲ್ಲಿ ಮೂಲ ಬಬಲಾದಿ ಮಠದ ಸದಾಶಿವ ಶ್ರೀಗಳು,ಕುಂಚನೂರ ಗ್ರಾಮ ಪಂ.ಅದ್ಯಕ್ಷ ಶಂಕರ ಕಾಂಬಳೆ,ಸೂರಜ ಕುಡ್ರಾಣಿ,ಶ್ರವಣ ಸುತಾರ,ಹಲವರು ಇದ್ದರು.
ವರದಿ: ಮುತ್ತು ಮೈಹಿಸವಾಡಗಿ, ಬಾಗಲಕೋಟೆ

