ಬೆಂಗಳೂರು, 22 ಡಿಸೆಂಬರ್ 2023: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್, ಹೊಚ್ಚ ಹೊಸದಾದ ಇಂಟ್ರಾ V70, ಇಂಟ್ರಾ V20 ಗೋಲ್ಡ್ ಏಸ್ HT+ ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಮೊದಲ ಮತ್ತು ಕಟ್ಟ ಕಡೆಯ ಮೈಲಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಟಾಟಾ ಮೋಟರ್ಸ್ ಸುಧಾರಿತ ಇಂಟ್ರಾ V50 ಮತ್ತು ಏಸ್ ಡೀಸೆಲ್ ವಾಹನಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವಾಹನಗಳನ್ನು ಇಂಧನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಮಾಲೀಕರಿಗೆ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುತ್ತವೆ. ಈ ಹೊಸ ವಾಹನಗಳ ಬಿಡುಗಡೆಯೊಂದಿಗೆ ಟಾಟಾ ಮೋಟರ್ಸ್ ವ್ಯಾಪಕ ಶ್ರೇಣಿಯ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್ ಗಳನ್ನು ನೀಡುತ್ತದೆ. ಈ ವಾಹನಗಳ ಬುಕಿಂಗ್ ದೇಶಾದ್ಯಂತ ಇರುವ ಎಲ್ಲಾ ಟಾಟಾ ಮೋಟರ್ಸ್ ಸಿವಿ ಡೀಲರ್ ಶಿಪ್ ಗಳಲ್ಲಿ ಆರಂಭವಾಗಿದೆ.
ಈ ವಾಹನಗಳ ಬಿಡುಗಡೆ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಅವರು, “ವಿವಿಧ ರೀತಿಯ ಅಪ್ಲಿಕೇಶನ್ ಗಳಿಗೆ ಗರಿಷ್ಠ ಮಟ್ಟದ ಪರಿಹಾರಗಳನ್ನು ನೀಡುವುದರ ಜೊತೆಗೆ ನಮ್ಮ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್ ಗಳು ನಮ್ಮ ಗ್ರಾಹಕರ ಜೀವನೋಪಾಯಗಳು ಮತ್ತು ಜೀವನ ಮಟ್ಟವನ್ನು ಸುಧಾರಣೆ ಮಾಡುವಲ್ಲಿ ಸಹಕಾರಿಯಾಗಿವೆ. ಪ್ರತಿಯೊಂದು ವಾಹನವು ದೃಢವಾದ ಮತ್ತು ವಿಶ್ವಾಸಾರ್ಹವಾದ ಸರಕು ಸಾಗಣೆ ಪರಿಹಾರಗಳನ್ನು ಒದಗಿಸಲು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಗ್ರಾಹಕರು ಮತ್ತು ಫ್ಲೀಟ್ ಮಾಲೀಕರಿಗೆ ಹೆಚ್ಚಿನ ವಾಣಿಜ್ಯ ಪ್ರಯೋಜನಗಳ ಭರವಸೆಯನ್ನು ನೀಡುತ್ತದೆ. ಈ ಮೂಲಕ ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ’’ ಎಂದರು.
