ದಿನಾಂಕ 18-1-2024ರ ಗುರುವಾರ 11-30 ಗಂಟೆಗೆ. ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿ ಎನ್ ಎಸ್ ಎಸ್ ಹಾಗೂ ಕನ್ನಡ ಸಂಘ ಮಹಾಮನೆ ಸಹಯೋಗದಲ್ಲಿ 7 ದಿವಸದ ಯುವ ಸಪ್ತಾಹದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಶ್ರೀ ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ ನಿಯಮಿತ ಅಧ್ಯಕ್ಷರೂ ಕಾಲೇಜಿನ ಆಡಳಿತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದ ಶ್ರೀ ಎಸ್ ಎಸ್ ದೊಡ್ಡಣ್ಣನವರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇಂತಹ ಸಮಾರಂಭಗಳಿಂದ ವಿವೇಕಾನಂದರ ತತ್ವಾದರ್ಶಗಳ ಪ್ರಯೋಜನವನ್ನು ಪಡೆದುಆಚರಣೆಗೆ ತರಬೇಕೆಂದು ಯುವಕರಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸೃಜನವೇದಿಕೆಯ ಅಭಿನಯ ದಿವಾಕರ ಹಾಗೂ ಶ್ರೀಡಾ. ಅನಿಲ್ ಕುಮಾರ ವಿದ್ಯಾಂಸರು ಚಾಣಕ್ಯ ವಿಶ್ವವಿದ್ಯಾಲಯ. ಇವರು ವಿದೇರ್ಶಕಾಂದರ ಆದರ್ಶಗಳನ್ನು ತಿಳಿಸಿದರು. ಕಾರ್ಯಕ್ರಮದಸ್ವಾಗತವನ್ನು ಕುನಿಖಿತಾ. ನಡೆಯಿಸಿಕೊಟ್ಟರು. ವರದಿಗಾರಿಕೆಯನ್ನು ಶ್ರೀ ವೈ. ಗಿರೀಶರವರು ತಿಳಿಸಿದರು ವಂದನಾರ್ಪಣೆಯನ್ನು ಶ್ರೀ ಗಿರೀಶ ಪಿ ಹೆಚ್ ನಿರ್ವಹಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಎನ್ಎಸ್ಎಸ್ ಸ್ವಯಂ ಸೇವಕರು ಹಾಗೂ ಕನ್ನಡ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠ ರವರ ಚಿಂತನೆಗಳು ಯುವಸಪ್ತಾಹ ವನ್ನು ಆಯೋಜಿಸಲು ಪ್ರೇರಣೆ ಆಯಿತ್ತೆಂದು ವಿದಾರ್ಥಿಗಳು ಪ್ರತಿಕ್ರಿಯಿಸಿದರು. ಯುವ ಸಪ್ತಾಹ 7 ದಿನಗಳಲ್ಲಿ 12 – 1- 2024 ರಿಂದ ಉದ್ಘಾಟನೆ – ಆನ್ ಲೈನ್ ನಲ್ಲಿ ವಿವೇಕಾನಂದರಬಗ್ಗೆ ಸಂವಾದ ಕಾರ್ಯಕ್ರಮ – – ಭಾಷಣ ಸ್ಪರ್ಧೆ – ಕೋಲಾಜ್ ಸ್ಪರ್ಧೆ – ರಸ ಪ್ರಶ್ನೆ – ವಿದ್ಯಾರ್ಥಿಗಳ ಪ್ರಬಂಧ ಮಂಡನೆ, 18-1-2024 ರಂದು ಸಮಾರೋಪ ಸಮಾರಂಭಯಶಸ್ವಿಯಾಗಿ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *