ಯಲಹಂಕ.  ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಮಾಜಿ ತಾ.ಪಂ.ಸದಸ್ಯರು, ದಾನಿಗಳಾದ ಬಿ.ನಾಗರಾಜ್ ಬಾಬು ಮತ್ತು ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಶ್ರೀನಿವಾಸಮೂರ್ತಿ ಇವರ ವತಿಯಿಂದ ನೀಡಲಾಗಿದ್ದ ಉಚಿತ ನೋಟ್ ಪುಸ್ತಕ, ಲೇಖನ ಪರಿಕರಗಳು, ಅಂಬೇಡ್ಕರ್ ರವರ ಭಾವಚಿತ್ರ ಮತ್ತು ಸೈಕಲ್ ಗಳಿಗೆ ಹವಾ ತುಂಬುವ ಪಂಪ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು ಸೋಮವಾರ ವಿತರಿಸಿದರು.

ಇದೇ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯ ನಾಗರಾಜ್ ಬಾಬು ಬೆಟ್ಟಹಲಸೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್‌, ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ‘ಹಸಿರೇ ಉಸಿರು ಟ್ರಸ್ಟ್’ ನ ಸಂಸ್ಥಾಪಕ ಅಧ್ಯಕ್ಷ ಬಿ.ಎಂ. ಶ್ರೀನಿವಾಸಮೂರ್ತಿ, ಗ್ರಾ.ಪಂ. ಸದಸ್ಯರಾದ ರಾಮಾಂಜಿನಪ್ಪ, ಮಮತಾ ಪ್ರಶಾಂತ್, ತುಳಸಮ್ಮ, ಮೋಹನ್ ಸಿದ್ದರಾಜು, ಮಂಜುನಾಥ್, ನಾಗರತ್ನಮ್ಮ, ಸಮಾಜ ಸೇವಕರಾದ ದೇವರಾಜ್, ಮುಖ್ಯಶಿಕ್ಷಕಿ ಸುಮಿತ್ರ, ಶಿಕ್ಷಕರಾದ ಹರೀಶ್, ಪಿಡಿಓ ಲೋಕನಾಥ್, ಕಾರ್ಯದರ್ಶಿ ಸುಬ್ರಮಣಿ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *