






ಯಲಹಂಕ : ಗ್ರಾಮಾಡಳಿತ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೊರೆಯುವ ಸವಲತ್ತುಗಳು ಸೇರಿದಂತೆ ಪಂಚಾಯತ್ ರಾಜ್ ಇಲಾಖೆಯ ವಿವಿಧ ವಿಷಯಗಳ ಕುರಿತು ತಿಳಿದುಕೊಳ್ಳುವ ದಿಸೆಯಲ್ಲಿ ಜನತೆ ಗ್ರಾಮಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ತಿಳಿಸಿದರು.
ಸಿಂಗನಾಯಕನಹಳ್ಳಿ ಗ್ರಾ.ಪಂ.ವತಿಯಿಂದ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸಿಂಗನಾಯಕನಹಳ್ಳಿ ಗ್ರಾ.ಪಂ. ವತಿಯಿಂದ ಇಂದು ಆಯೋಜಿಸಿ ರುವ ಗ್ರಾಮಸಭೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡಿರುವುದು ಸಂತೋಷದ ಸಂಗತಿ, ಗ್ರಾಮಸಭೆಗಳು ಈ ರೀತಿಯ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆ ಯಿಂದ ಯಶಸ್ವಿಯಾಗುತ್ತವೆ.
ಗ್ರಾಮಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಗ್ರಾ.ಪಂ.ವ್ಯಾಪ್ತಿಯ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 5 ಸಾವಿರ ರು.ಗಳ ಪ್ರೋತ್ಸಾಹಧನ ವಿತರಣೆ, ವಿಶ್ವವಾಣಿ ಫೌಂಡೇಷನ್ ನೆರವಿನಿಂದ ಶಾಲಾ ಮಕ್ಕಳಿಗ ಉಚಿತ ಸಮವಸ್ತ್ರ, ಬ್ಯಾಗ್, ಕ್ರೀಡಾ ಸಾಮಗ್ರಿಗಳ ವಿತರಣೆ, ಗ್ರಾಮ ಪಂಚಾಯತಿಯ ಕೆಳ ಹಂತದ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರಿಗೆ ವರಮಹಾಲಕ್ಷ್ಮಿ ಹಬ್ಬಕ್ಕಾಗಿ 2 ಸಾವಿರ ರು.ಗಳ ವಿಶೇಷ ಕಿಟ್ ಗಳ ವಿತರಣೆ, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಹಾಯಧನದ ಚೆಕ್ ವಿತರಣೆ ಸೇರಿದಂತೆ ಹಲವಾರು ಸವಲತ್ತುಗಳನ್ನು ವಿತರಿಸಿರುವುದು ಸಾರ್ಥಕ ಭಾವ ಉಂಟು ಮಾಡಿದೆ. ಗ್ರಾಮಸಭೆಯ ಈ ಯಶಸ್ಸಿನ ಹಿಂದೆ ಗ್ರಾ.ಪಂ.ಸದಸ್ಯರು ಮತ್ತು ಸಿಬ್ಬಂದಿಗಳ ಪರಿಶ್ರಮವಿರುವುದು ಎದ್ದು ಕಾಣುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮಸಭೆಯಲ್ಲಿ ಯಲಹಂಕ ತಾ.ಪಂ.ಕಾರ್ಯ ನಿರ್ವಹಣಾ ಅಧಿಕಾರಿ ಅಪೂರ್ವ ಕುಲಕರ್ಣಿ, ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಮಾಜಿ ಅಧ್ಯಕ್ಷರಾದ ಟಿ.ಮುನಿರೆಡ್ಡಿ, ಚಂದ್ರಶೇಖರ್, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ, ಗ್ರಾ.ಪಂ.ಸದಸ್ಯರಾದ ಶಾಂತಲಾ ರಾಜಣ್ಣ, ಪದ್ಮಶ್ರೀ ನಾಗರಾಜ ರೆಡ್ಡಿ, ಕೆ.ಬಾಬು, ಸಿ.ಮಲ್ಲೇಶ್, ಸುಧಾರಣಿ, ಜೀವಿತ ಮುನಿಕೃಷ್ಣ, ಶೋಭಾಗೋಪಾಲ್, ಹರೀಶ್ ಎನ್., ಚೈತ್ರ ಕೆಂಪೇಗೌಡ, ಟಿ.ನಂಜೇಗೌಡ, ಜಿ.ಸಿ.ಮಂಜು ನಾಥ್, ಭಾಗ್ಯಲಕ್ಷ್ಮಿ, ವೀಣಾ, ಮುನಿಯಪ್ಪ, ರವಿಚಂದ್ರ, ಸುನಂದ, ಶೋಭಾ, ಮುನಿರತ್ನಮ್ಮ, ಪಿಡಿಓ ದಾಮೋದರ್, ಕಾರ್ಯದರ್ಶಿ ಕುಮಾರಸ್ವಾಮಿ ಸೇರಿದಂತೆ ಗ್ರಾ.ಪಂ.ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
9845085793
7349337989
9035282296
R Hanumanthu
RAHUL
