






















ಯಲಹಂಕ ಸುದ್ದಿ
ಯಲಹಂಕ ಶಾಸಕರಾದ ಮಾನ್ಯ ಶ್ರೀ ಎಸ್ ಆರ್ ವಿಶ್ವನಾಥ್ ಸರ್ ರವರ ಹುಟ್ಟುಹಬ್ಬದ ಪ್ರಯುಕ್ತ ಇವರ ಮತ್ತು ಡಾ. ವಾಣಿಶ್ರೀ ವಿಶ್ವನಾಥ್ ಮೇಡಂ ರವರ ಅಧ್ಯಕ್ಷತೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಮೈ ಸ್ಮೈಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಗತ್ಯವಿರುವ ಜನರಿಗೆ ಉಚಿತವಾಗಿ ಔಷಧಿ ಕೊಡಿಸುವ ಮೂಲಕ ಶಾಸಕರಾದ ಶ್ರೀ ಎಸ್ ಆರ್ ವಿಶ್ವನಾಥ್ ಸರ್ ಅವರ ಹುಟ್ಟು ಹಬ್ಬ ಆಚರಣೆಯನ್ನು ಮತ್ತು ಮೃತುಂಜಯ ಕಾರ್ಯಕ್ರಮದ 5ನೇ ವರ್ಷದ ವಾರ್ಷಿಕೋತ್ಸವನ್ನು ಮತ್ತು ಆಶಾ ಕಿರಣ ಕಾರ್ಯಕ್ರಮದ ಮೂಲಕ ರಾಮಕೃಷ್ಣ ಶಾಲೆಯ ಮಕ್ಕಳಿಗೆ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕ ಮತ್ತು ಸ್ಕೂಲ್ ಬ್ಯಾಗ್ ಅನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಉಚಿತ ಆರೋಗ್ಯ ತಪಾಸಣೆಗಾಗಿ ಚೈತನ್ಯ ಮೆಡಿಕಲ್ ಸೆಂಟರ್ ಮತ್ತು ಶ್ರೀ ಕೃಷ್ಣದೇವರಾಯ ದಂತ ಚಿಕಿತ್ಸಾಲಯ ಇವರ ಸಹಯೋಗದಲ್ಲಿ ಸ್ತ್ರೀರೋಗ ತಜ್ಞರು, ಮೂಳೆ ಕೀಲು ತಜ್ಞರು, ಮಕ್ಕಳ ತಜ್ಞರು ಹಾಗೂ ಇತರೆ ಹಲವು ತಜ್ಞರು ಸೇರಿ ಇಸಿಜಿ ಪರೀಕ್ಷೆ, ಕಣ್ಣಿನ ತಪಾಸಣೆ, ದಂತ ಚಿಕಿತ್ಸೆ ಸೇರಿದಂತೆ ಪರಿಪೂರ್ಣ ಆರೋಗ್ಯ ತಪಾಸಣೆಯನ್ನು ಇಂದು ಅದ್ದೂರಿಯಾಗಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
ಸುದ್ದಿ ಹಾಗೂ ಜಾಹೀರಾತುಗಾಗಿಸಂಪರ್ಕಿಸಿ
ಆರ್ ಹನುಮಂತು
ರಾಹುಲ್
9845085793
7349337989
9035282296
