ಯಲಹಂಕ ; ತಾಲ್ಲೂಕು ಬ್ರಾಹ್ಮಣ: ಸಂಘದ ಸದಸ್ಯರುಗಳು ಸಂಘಕ್ಕೆ ಧನ ಸಹಾಯದ ನೆರವು ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ವೈ, ಜಿ, ವೈದ್ಯನಾಥ ಶಾಸ್ತ್ರಿ ಮನವಿ ಮಾಡಿದರು.

ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ 2023-24 ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ತ್ರಿಮಸ್ತ ಬ್ರಾಹ್ಮಣರು ಒಗ್ಗೂಡಿ ಸಮೂದಯಕ್ಕೆ ಅನನ್ಯ ಕೊಡುಗೆ ನೀಡುತ್ತಿದ್ದು, ಪ್ರಸ್ತುತ ಹಿಂದುಳಿದ ಬ್ರಾಹ್ಮಣ ಕುಟುಂಬಗಳ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಬೇಕಾಗಿದೆ, ಅಲ್ಲದೇ ಶೈಕ್ಷಣಿಕವಾಗಿ ಪ್ರಗತಿ ಹೊಂದಿದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಬೇಕು. ಹಾಲಿ ಸಂಘದ ಕಟ್ಟಡದ ವಿಸ್ತರಣೆಗೆ, ಸುಮಾರು 40 ಲಕ್ಷ ವೆಚ್ಚದಲ್ಲಿ ನೀಲಿ ನಕ್ಷೆ ಸಿದ್ಧವಾಗಿದ್ದು ಸಂಘವು ಕೇವಲ ಧಾರ್ಮಿಕ ಸಮಾರಂಭಗಳಿಗೆ ನೀಡುವ ಆಧ್ಯತೆಯ ಜೊತೆಗೆ ಬ್ರಾಹ್ಮಣ ಮಹಿಳಾ ಸಬಲೀಕರಣ, ಯುವಕ ಯುವತಿಯರ ಉದ್ಯೋಗ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವಂತಹ ಸಾಮಾಜಿಕ ಚಟುವಟಿಕೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಗಮನ ಹರಿಸಲುದೆ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್,ಭೀಮಾಸೇನಾಚಾಯ೯ , ಉಪಾಧ್ಯಕ್ಷರಾದ ವೈ.ಜಿ. ರಾಘವೇಂದ್ರರಾವ್, ಆರ್.ನಾಗರಾಜ್, ಜಂಟಿ ಕಾರ್ಯದರ್ಶಿ, ಟಿ ಎಲ್ ಅರುಣಕುಮಾರ್,ಸಂಘಟನಾ ಕಾರ್ಯದರ್ಶಿ ಎಲ್ ಸಂಜೀವ ರಾಯ ಸೇರಿದಂತೆ ಸಂಘದ ನಿರ್ದೇಶಕರು, ನೂರಾರು ಸದಸ್ಯರು ಉಪಸ್ಥಿತರಿದ್ದರು

ಸುದ್ದಿ ಹಾಗೂ ಜಾಹಿರಾತುವಾಗಿ

ಆರ್ ಹನುಮಂತು

9845085793

9035282296

7349337989

Leave a Reply

Your email address will not be published. Required fields are marked *