ಸಹಕಾರ ನೀಡಿದ ಶಾಸಕ ಎಸ್ ಆರ್ ವಿಶ್ವನಾಥ್ ರವರಿಗೆ ಮಾದಿಗ ಜನಾಂಗದಿಂದ ಅಭಿನಂದನೆ :

ಯಲಹಂಕ : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪು ಸ್ವಾಗತಿಸಿರುವ ಯಲಹಂಕ ಕ್ಷೇತ್ರದ ಮಾದಿಗ ಜನಾಂಗದ ಮುಖಂಡರು, ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾದಿಗ ಜನಾಂಗದ ಹಿತಕ್ಕಾಗಿ ಒಳಮೀಸಲಾತಿ ಜಾರಿಗೆ ಮನವಿ ಸಲ್ಲಿಸುವ ಮೂಲಕ ಸಹಕರ ನೀಡಿದ್ದ ಶಾಸಕ ಎಸ್ ಆರ್ ವಿಶ್ವನಾಥ್ ರವರನ್ನು ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಮಾದಿಗ ಜನಾಂಗದ ಮುಖಂಡರು ಗೌರವ ಸನ್ಮಾನ ನೀಡಿ ಅಭಿನಂದಿಸಿದರು.

ಈ ವೇಳೆ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಲಿಂಗನಹಳ್ಳಿ ವೆಂಕಟೇಶ್ ಮಾತನಾಡಿ ”ಜನಸಂಖ್ಯೆ ಆಧಾರಿತ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಮೂಲಕ ಸೂಚಿಸಿರುವುದು ಸ್ವಾಗತಾರ್ಹ ವಾದ ಬೆಳವಣಿಗೆ. ಸುಪ್ರೀಂ ಕೋರ್ಟ್ ಗೆ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಗಳಾಗಿದ್ದ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಒಳ ಮೀಸಲಾತಿ ಜಾರಿ ಕುರಿತು ಅರ್ಜಿ ಸಲ್ಲಿಸಲಾಗಿತ್ತು, ಇದೀಗ ತೀರ್ಪು ಹೊರಬಿದ್ದಿದ್ದು, ಒಳ ಮೀಸಲಾತಿ ಜಾರಿಗಾಗಿ ಅಂದು ಮಾಧುಸ್ವಾಮಿ ನೇತೃತ್ವದಲ್ಲಿ ರಚಿಸಲಾಗಿದ್ದ ಉಪಸಮಿತಿಗೆ ಒಳ ಮೀಸಲಾತಿ ಜಾರಿಗೆ ಶಿಫಾರಸ್ಸು ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ರವರು ಮಾದಿಗ ಜನಾಂಗದ ಪರವಾಗಿ ಪ್ರತ್ಯೇಕವಾಗಿ ಮನವಿ ಸಲ್ಲಿಸುವ ಮೂಲಕ ಮಾದಿಗ ಜನಾಂಗದ ಹಿತಕ್ಕಾಗಿ ಸಹಕಾರ ನೀಡಿದ್ದರು ಈ ಹಿನ್ನೆಲೆಯಲ್ಲಿ ಇಂದು ಎಸ್ ಆರ್ ವಿಶ್ವನಾಥ್ ರವರಿಗೆ ಯಲಹಂಕ ತಾಲ್ಲೂಕು ವ್ಯಾಪ್ತಿಯ ಮಾದಿಗ ಜನಾಂಗದ ಪರವಾಗಿ ಸನ್ಮಾನಿಸಲಾಗುತ್ತಿದೆ.

ಒಳ ಮೀಸಲಾತಿ ಜಾರಿ ಕುರಿತಂತೆ ಮಾಜಿ ಕೇಂದ್ರ ಸಚಿವ ನಾರಾಯಣ ಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಇತ್ತೀಚೆಗೆ ನಿಧನರಾದ ಎಸ್ಸಿ ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಬೆಟ್ಟಹಳ್ಳಿ ಜಗದೀಶ್ ರವರ ಕೊಡುಗೆ ಸ್ಮರಣೀಯ, ಈ ಸಂದರ್ಭದಲ್ಲಿ ಅವರಿಗೂ ಸಹ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನ ತೀರ್ಪಿನ ಮೇರೆಗೆ ಕೂಡಲೇ ಜನಸಂಖ್ಯೆ ಆಧಾರಿತ ಒಳಮೀಸಲಾತಿ ಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಾದಿಗ ಸಮಯದಾಯದ ಮುಖಂಡರಾದ ಆವಲಹಳ್ಳಿ ಸುರೇಶ್, ವೀರಸಾಗರ ನಾಗೇಶ್, ದೇವಿಕುಮಾರ್ ಸೇರಿದಂತೆ ಹಲವರು ಮಾತನಾಡಿ ದರು. ಇದೇ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ ಕುಂಬಾರಹಳ್ಳಿ ಶ್ರೀನಿವಾಸ್, ಮುತ್ತುಗದಹಳ್ಳಿ ಮುನಿರಾಜು, ಮಾರಸಂದ್ರ ಮುನಿದಾಸಪ್ಪ, ರಾಮಕೃಷ್ಣಪ್ಪ, ಮೈಲಾರಪ್ಪ, ಸೀತಕೆಂಪನಹಳ್ಳಿ ಚಂದ್ರಶೇಖರ್, ಸಿಂಗನಾಯಕನಹಳ್ಳಿ ಮಲ್ಲೇಶ್, ಮುನಿಕೃಷ್ಣ, ಮಾದಪ್ಪನಹಳ್ಳಿ ನರಸಿಂಹಯ್ಯ, ವೆಂಕಟಾಲ ಮುನಿರಾಜು, ಯಲಹಂಕ ಜಯಣ್ಣ, ಅಟ್ಟೂರು ವಿಶ್ವ, ಡಿ.ಕುಮಾರ್, ನಾಗದಾಸನಹಳ್ಳಿ ಚಂದ್ರು, ಜೈಲಿಂಗಯ್ಯ, ಮಾರಸಂದ್ರ ಅಶೋಕ್, ಮಾಕಳಿ ರವಿಚಂದ್ರ, ಮಾಚೋಹಳ್ಳಿ ಹನುಮಂತರಾಜು, ಪಿಳ್ಳಹಳ್ಳಿ ಚಂದ್ರಶೇಖರ್, ಮಾದಪ್ಪನಹಳ್ಳಿ ರಾಜಶೇಖರ್ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹಿರಾತು ಗಾಗಿ. ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *