Category: ರಾಜ್ಯ

31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರ ಬೆಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷಾರತ ಇಲಾಖೆ ಬೆಂಗಳೂರು ರವರ ಸಹಯೋಗ ದೊಂದಿಗೆ 31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರವನ್ನು ವಿಜ್ಞಾನ ಭವನ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಡಾ.ವಿ. ಎನ್. ನಾಯಕ್ ರವರು ನಿವೃತ್ತ ಪ್ರಾದ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ ಅವರು ಮಾತನಾಡಿ ಪ್ರತಿ ಶಾಲೆಗಳಿಂದ ವಿಜ್ಞಾನ ಶಿಕ್ಷಕರಿಗೆ ತಾವುಗಳು ತರಬೇತಿ ನೀಡಿದ ನಂತರ ವಿದ್ಯಾರ್ಥಿಗಳನ್ನು ನೊಂದಣಿ ಮಾಡಿಸುವುದು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ 10 ರಿಂದ 17 ವರ್ಷದ ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇವರಲ್ಲಿ ವಯಸ್ಸಿಗೆ ಮಾತ್ರ ಆದ್ಯತೆ ನೀಡುವುದು ಅಲ್ಲದೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಯೋಜನೆಗಳನ್ನು ಮಂಡಿಸುವಂತೆ ಜಿಲ್ಲಾ ಸಂಯೋಜನಕರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು. ರಾಜ್ಯಾಧ್ಯಕ್ಷರಾದ ಗಿರೀಶ್ ಬಿ. ಕಡ್ಳೆವಾಡರವರು ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಸಹ ನಾವು ಮಕ್ಕಳ ವಿಜ್ಞಾನ ಸಮಾವೇಶ ಕಾರ್ಯಕ್ರಮವನ್ನು ನಿಲ್ಲಿಸದೆ ಆನ್ಲೈನ್ ಮೂಲಕ ನಡೆಸಿಕೊಂಡು ಬಂದಿರುತ್ತೇವೆ. ಕ.ರಾ.ವಿ. ಪ ದಲ್ಲಿ ಹಣಕಾಸಿನ ಕೊರತೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನು ನಿಲ್ಲಿಸದೆ ನಡೆಸಿಕೊಂಡು ಬರುತ್ತಿರುವುದು ನಮ್ಮ ದೌರ್ಭಾಗ್ಯವಾಗಿರುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಹೆಚ್ಚಿನ ವಿಜ್ಞಾನ ಶಿಕ್ಷಕರು ಭಾಗವಹಿಸಿ ತರಬೇತಿಯನ್ನು ಪಡೆದು ಹೆಚ್ಚಿನ ಯೋಜನೆಗಳನ್ನು ನಿರ್ವಹಿಸಿ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತೆ ಜಿಲ್ಲಾ ಸಂಯೋಜಕರಲ್ಲಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಹ ಸಂಯೋಜಕರಾದ ಹೆಚ್. ಜಿ.ಹುದ್ದರ್ ರವರು, ರಾಜ್ಯ ಕೋಶಧ್ಯಕ್ಷರಾದ ಹೆಚ್. ಎಸ್ ಸ್ವಾಮಿ ರವರು, ಕ. ರಾ. ವಿ. ಪ ಕಛೇರಿ ವ್ಯವಸ್ಥಾಪಕರಾದ ಪ್ರಭು ಎಸ್.ಮಟ್ ರವರು ಜಿಲ್ಲಾ ಸಂಯೋಜಕರುಗಳಾದ ಕೆವಿ ಶ್ರೀಕಾಂತ, ರಾಜಶೇಖರ್, ಮಂಜುಳಾ ಬಾಯಿ ರವರು ಹಾಗೂ ವಿವಿದ ಜಿಲ್ಲೆಯ ಸಂಯೋಜಕರು ಬಾಗವಹಿಸಿದ್ದರು.

31ನೇ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಪ್ರಯುಕ್ತ ಜಿಲ್ಲಾ ಮಟ್ಟದ ಸಂಯೋಜಕರಿಗೆ ತರಬೇತಿ ಕಾರ್ಯಗಾರ ಬೆಂಗಳೂರು : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಹಾಗೂ…

ರೂ.10 ಮುಖಬೆಲೆಯ ನಾಣ್ಯ ಚಲಾವಣೆ, ಅಧೀಕೃತವಾಗಿ ಸ್ವೀಕರಿಸುವಂತೆ ಸೂಚನೆ: ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ

ಬಳ್ಳಾರಿ,ಆ.29ಆರ್.ಬಿ.ಐ.ವು ಸಾರ್ವಜನಿಕರ ವಹಿವಾಟಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕಾಲಕಾಲಕ್ಕೆ ನಾಣ್ಯಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ರೂ.10 ಮುಖ ಬೆಲೆಯ ನಾಣ್ಯ ಚಲಾವಣೆಯಲ್ಲಿದ್ದು, ಅಧೀಕೃತವಾಗಿ ಅವುಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.ವಹಿವಾಟು ಮತ್ತು ಪಾವತಿಗಾಗಿ ರೂ.10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು…

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಅಧಿಕಾರಿಗಳು ಕ್ಷೇತ್ರ ಭೇಟಿ ನಡೆಸಿ: ಡಾ.ತ್ರಿಲೋಕ ಚಂದ್ರ

ಬಳ್ಳಾರಿ,ಆ.29ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಐದು ತಾಲೂಕಿನಲ್ಲಿ ಕ್ಷೇತ್ರ ಭೇಟಿ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು, ಬಳ್ಳಾರಿ ಜಿಪಂ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ…

“ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ- ಶಾಸಕ ಎಸ್ ಮುನಿರಾಜು”

(ವರದಿಗಾರರು ವೈ ಜಿ ನರಸಿಂಹ ಮೂರ್ತಿ ಬಯಲು ಸಿಂಹ ಪೀಣ್ಯ ದಾಸರಹಳ್ಳಿ) ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಪೀಣ್ಯ ಕೈಗಾರಿಕಾ ವಾರ್ಡ್ನಲ್ಲಿ ಹಳೆ ಪೊಲೀಸ್ ಠಾಣಾ ಪಕ್ಕದ ರಸ್ತೆಯಲ್ಲಿ ಕುಡಿಯುವ ನೀರಿನ ಕಾಮಗಾರಿ, ಫ್ರೆಂಡ್ಸ್ ಸರ್ಕಲ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಶಿವಪುರದಲ್ಲಿ…

ಪುಟ್ಟಣ್ಣಯ್ಯ ಬಣದ ರೈತ ಸಂಘನೆಯವರಿಂದ ಬೆಸ್ಕಾಂಗೆ ಮುತ್ತಿಗೆ.

ಶಿಡ್ಲಘಟ್ಟ..ಕರ್ನಾಟಕ ರಾಜ್ಯ ರೈತ ಸಂಘ (ಕೆ ಎಸ್ ಪುಟ್ಟಣ್ಣಯ್ಯ ಬಣ) ವತಿಯಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ..ತಾಲೂಕಿನ ದಿಬ್ಬೂರಹಳ್ಳಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ನಡೆಸಿದರು.. ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ರೈತರಿಗೆ 25 ಕೆವಿ ಟ್ರಾನ್ಸ್ ಫಾರ್ಮರ್…

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸೋಣ :-ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಮುನಿರಾಜು

ಶಿಡ್ಲಘಟ್ಟ: ಜಿಲ್ಲೆ ಹಾಗೂ ತಾಲ್ಲೂಕಿನಾದ್ಯಂತ ಏಕಬಳಕೆ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವುದು ಇದರ ಮೊದಲ ಹೆಜ್ಜೆಯಾಗಿದೆ. ಇದರೊಂದಿಗೆ ಸಮರ್ಪಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಹಸಿ ತ್ಯಾಜ್ಯದೊಂದಿಗೆ ಒಣ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯದೇ ಸಮರ್ಪಕವಾಗಿ ವಿಂಗಡಿಸುವುದು ಮುಖ್ಯ ಎಂದು ಮಾನ್ಯ…

ಚಿಕ್ಕಬಳ್ಳಾಪುರ: ಪಿಪಿಎಚ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಮಾಡಲಾಯಿತು.

ಚಿಕ್ಕಬಳ್ಳಾಪುರ: ಪಿಪಿಎಚ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಮಾಡಲಾಯಿತು.ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರ ಹುಟ್ಟು ಹಬ್ಬದ ಉದ್ಘಾಟನೆಯನ್ನು ಕೆ. ವಿ. ವಿಪಂಚಗಿರಿ ದತ್ತಿಯ ಮೆನೇಜರ್ ಲಕ್ಷ್ಮಣ ಸ್ವಾಮಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಬಿಪಿಎಡ್ ಶಿಕ್ಷಣಾರ್ಥಿಗಳು ತಮ್ಮ ನೃತ್ಯಗಳ ಮೂಲಕ ಕ್ರೀಡೆಗಳ ಬಗ್ಗೆ…

ಅನುದಾನ ದುರುಪಯೋಗ, ಕಲಾವಿದರಿಗೆ ಪಿಂಚಣಿ 10 ಸಾವಿರಕ್ಕೇರುಸುವುದು ಮತ್ತು ಜೋಳದರಾಶಿ ದೊಡ್ಡನಗೌಡ ರಂಗಮಂದಿರವನ್ನು ಶೀಘ್ರ ಆರಂಭಿಸುವಂತೆ ಕಲಾವಿದರಿಂದ ಪ್ರತಿಭಟನೆ

ಬಳ್ಳಾರಿ ಆ,28ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಲಾವಿದರಿಗೆ ಸಲ್ಲಬೇಕಾದ ಲಕ್ಷಾಂತರ ರೂಪಾಯಿಗಳ ಅನುದಾನವನ್ನು ಗುಳುಂ ಮಾಡಿರುವುದು ಕಂಡು ಬಂದಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ವರ್ಗಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಇದರಿಂದ ನಿಜವಾದ ಮತ್ತು ಬಡ…

ರಾಜ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ..ಬಸ್ ನಿಗಮಗಳಿಗೆ ಶಕ್ತಿ ತುಂಬಿದ ಯೋಜನೆ

ಬಳ್ಳಾರಿ,ಆ.28ರಾಜ್ಯದ ನೂತನ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದು ನೂರು ದಿನ ಪೂರೈಸಿದೆ. ನೂರು ದಿನಗಳ ತನ್ನ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಶತದಿನಗಳಲ್ಲಿ ತಮ್ಮ ಚುನಾವಣಾ ಭರವಸೆಯ ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.ನೂರು ದಿನಗಳಲ್ಲಿ ಆಡಳಿತದ…

ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಾ.ಯಲ್ಲಾ ರಮೇಶ ಬಾಬು ಅಧಿಕಾರ ಸ್ವೀಕಾರ

ಬಳ್ಳಾರಿ,ಆ.28ಜಿಲ್ಲೆಯ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಡಾ.ಯಲ್ಲಾ ರಮೇಶ ಬಾಬು ಅವರು ಅಧಿಕಾರ ಸ್ವೀಕರಿಸಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲಾ ಕ್ಷಯರೋಗ ನಿರ್ಮೂನಾಧಿಕಾರಿ ಹುದ್ದೆಯಲ್ಲಿ 2013 ರಿಂದ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಬಳ್ಳಾರಿಗೆ ವರ್ಗಾವಣೆಯಾಗಿದ್ದಾರೆ.1993 ರಲ್ಲಿ ಹರಪನಹಳ್ಳಿ ತಾಲೂಕಿನ ಹಲವಾಗಲು ಪ್ರಾಥಮಿಕ…