



ಯತ್ರ ನಾರ್ಯಸ್ತು ಪೂಜ್ಯಂ ತೇ ರಮಂತೇ ತತ್ರ ದೇವತಾಃ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೊ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಇದು ಸನಾತನ ಧರ್ಮ ಸ್ತ್ರೀಯರನ್ನು ಗೌರವಿಸಿದ ರೀತಿ. ಸ್ತ್ರೀಯನ್ನು ಶಕ್ತಿಯ ರೂಪವಾಗಿ ಪಾರ್ವತಿಯನ್ನಾಗಿ, ಧನ ಮತ್ತು ಐಶ್ವರ್ಯದ ಸ್ವರೂಪವಾಗಿ ಲಕ್ಷೀಯನ್ನಾಗಿ, ವಿದ್ಯೆಯ ಸಂಖೇತವಾಗಿ ಸರಸ್ವತಿಯನ್ನಾಗಿ ತೋರಿಸಿ ಸ್ತ್ರೀ ಗೌರವವನ್ನು ವಿಶ್ವಕ್ಕೆ ವಿಸ್ತರಿಸಿದ ಏಕೈಕ ನಾಗರೀಕತೆ ಎಂಬುವುದು ಇದ್ದರೆ ಅದು ನಮ್ಮ ಸನಾತನ ಭಾರತೀಯ ನಾಗರೀಕತೆ ಮಾತ್ರ. ಪ್ರಾಚೀನ ಕಾಲದಿಂದಲೂ ನಾವು ಭಾರತೀಯರು ಸ್ತ್ರೀಯರನ್ನು ಗೌರವಿಸುತ್ತಲೆ ಬಂದಿದ್ದೇವೆ. ಮತ್ತು ಸ್ತ್ರೀಯರನ್ನು ಗೌರವಿಸುವುದು ನಮ್ಮ ಸನಾತನ ಧರ್ಮದ ಒಂದು ಭಾಗವಾಗಿತ್ತು. ಆದರೆ ಕೆಲವೊಮ್ಮೆ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ, ಸ್ತ್ರೀ ಸ್ವಾತಂತ್ರ್ಯದ ಹರಣದಂತಹ ಘಟನೆಗಳು ನಡೆದದ್ದು ಇದೆ. ಅದಕ್ಕೆ ಅಂದಿನ ಕೆಲವು ಪುರುಷರಲ್ಲಿನ ಸ್ತ್ರೀ ದ್ವೇಷದ (ತಾತ್ಸಾರದ )ಮಾನಸಿಕತೆಯೆ ಕಾರಣವೆ ಹೊರತು ಅದು ಸನಾತನ ಸಂಸ್ಕೃತಿಯಲ್ಲಿನ ದೋಷವಲ್ಲ. ಪ್ರಾಚೀನ ಕಾಲದಲ್ಲಿ ಸ್ತ್ರೀ ತಾತ್ಸಾರ ಮಾನಸಿಕತೆಯನ್ನು ಹೊಂದಿರುವ ಮಹಿಷಾಸುರ, ಕಂಹಾಸುರರಂತಹ ದುಷ್ಠರು ತಮ್ಮ ಘೋರವಾದ ತಪಸ್ಸಿನ ಮೂಲಕ ವರಬಲವನ್ನು ಪಡೆದು ಸಮಾಜಕ್ಕೆ ಕಂಠಕರಾಗಿ ಬೆಳೆದು ಪ್ರಜಾಪೀಡಕರಾಗಿದ್ದರು. ಆಗ ಇವರನ್ನು ನಿಗ್ರಹಿಸಲು ತ್ರಿಮೂರ್ತಿಗಳಾದ ಅಂದರೆ ಪುರುಷ ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಅಸಾಧ್ಯವಾಗಿತ್ತು. ಅಂದು ಮಹಿಷಾಸುರನೆಂಬ ದುಷ್ಠನ ಶಕ್ತಿಯ ಎದುರು ಪುರುಷ ಸಮಾಜವೆ ಸೋತು ತಲೆತಗ್ಗಿಸಿ ನಿಂತಿತ್ತು.ಅಂದಿನ ಪುರುಷ ಸಿಂಹಗಳಾದ ಇಂದ್ರ, ಚಂದ್ರ, ಗಂಧರ್ವರುಗಳು ಮಹಿಷಾಸುರನ ಹೊಡೆತವನ್ನು ತಡೆಯಲಾರದೆ ತಮ್ಮ ತಮ್ಮ ಸಿಂಹಾಸನಗಳನ್ನೇ ಬಿಟ್ಟು ಪರಾರಿಯಾಗಿದ್ದರು. ಈ ಪುರುಷ ಸಿಂಹಗಳೆಣಿಸಿಕೊಂಡವರೆ ತಮ್ಮನ್ನು ತಾವು ಮಹಿಷಾಸುರನಿಂದ ಕಾಪಾಡಿಕೊಳ್ಳಲು ಆಗದ ಮೇಲೆ ಇವರನ್ನೇ ನಂಬಿದ ಸಾಮಾನ್ಯ ಪ್ರಜೆಗಳ ಪಾಡೇನು…? ಒಬ್ಬ ದುಷ್ಠ ರಾಕ್ಷಸನ ಎದುರು ತ್ರಿಮೂತ್ರಿಗಳ ಸಹಿತವಾಗಿ ಗಂಡು ಕುಲವೆ ಸೋತು ಅವಮಾನಿತರಾದಾಗ ಸಮಸ್ತ ಸ್ತ್ರೀ ಶಕ್ತಿಯ ಪ್ರತಿರೂಪವಾಗಿ ನವದುರ್ಗೆಯಾಗಿ ಬಂದವಳು ನಮಮ್ಮ ಚಾಮುಂಡೇಶ್ವರಿ. ಅಂದು ತಾಯಿ ಪಾರ್ವತಿ ನವದುರ್ಗೆಯಾಗಿ ಮಹಿಷಾಸುರನೆಂಬ ರಾಕ್ಷಸನಿಗೆ ನವರಾತ್ರಿಗಳ ಘೋರ ಯುದ್ಧವನ್ನು ನೀಡಿ ಸಂಹಾರ ಮಾಡಿದ್ದರ ಜೊತೆಗೆ ಸ್ತ್ರೀ ಶಕ್ತಿಯಿಂದ ಎಲ್ಲವೂ ಸಾಧ್ಯವಿದೆ ಎಂಬ ಸಂದೇಷವನ್ನು ಮಹಿಷನಂತಹ ಅಂದಿನ ಸ್ತ್ರೀ ತಾತ್ಸಾರಕರಿಗೆ ನೀಡಿದ್ದಳು.ಇಂದಿನ ಕಾಲದಲ್ಲಿ ಸ್ತ್ರೀ ಶಕ್ತಿ ತುಂಬಾ ಪ್ರಬಲವಾಗಿ ಬೆಳೆದಿದೆ ಮತ್ತು ಎಲ್ಲಾ ಕ್ಷೇತ್ರದಲ್ಲಿಯೂ ಪುರುಷರೊಂದಿಗೆ ಸಮಾನವಾದ ಸ್ಥಾನಮಾನವನ್ನು ಹಂಚಿಕೊಂಡಿದೆ. ಹಾಗೆ ಅಲ್ಲಲ್ಲಿ ಸ್ತ್ರೀ ದ್ವೇಷದ ಮಾನಸಿಕತೆಯ ಮಹಿಷ ಸುರರು ಇಂದು ಕೂಡ ಇದ್ದಾರೆ. ಉದಾಹರಣೆಯಾಗಿ ಕರ್ನಾಟಕದಲ್ಲಿ ಇತ್ತೀಚೆಗೆ ವಿವಾದವನ್ನು ಸೃಷ್ಟಿಸಿದ ಮಹಿಷದಸರಾ ಆಚರಣೆ.ಹೌದು ಒಬ್ಬ ಸ್ತ್ರೀ ತಾತ್ಸಾರಕ ಹಾಗು ಸ್ತ್ರೀ ದ್ವೇಷಿಯಾದ ಮಹಿಷನ ಹೆಸರಿನಲ್ಲಿ ದಸರವನ್ನು ಆಚರಿಸಲು ಬಯಸುವ ಸ್ತ್ರೀ ದ್ವೇಷಿಗಳ ಮಾನಸಿಕತೆಯೆ ಈ ಮಹಿಷ ದಸರಾ ಆಚರಣೆ. ಇವರ ಉದ್ದೇಶ ಕೇವಲ ಸ್ತ್ರೀ ದ್ವೇಷ ಎಂಬುವುದು ಸ್ಪಷ್ಟವಾಗಿದೆ. ಸ್ತ್ರೀಯನ್ನು ಶಕ್ತಿಯ ಪ್ರತಿರೂಪವಾದ ನವದುರ್ಗೆಯರನ್ನಾಗಿ ಗೌರವಿಸಿ ಆಚರಿಸುವ ದುರ್ಗಾದೇವಿಯ ದಸರಾವನ್ನು ಇಂದಿನ ಕೆಲವು ಸ್ತ್ರೀ ದ್ವೇಷಿಗಳ ಗುಂಪು ಮಹಿಷದಸರವನ್ನಾಗಿ ಬದಲಾಯಿಸಿ ಆಚರಣೆಗೆ ತರುವ ಸಂಚುಮಾಡಿಕೊಂಡಿದೆ. ಮತ್ತು ಇದು ಈ ನಾಡಿನ ಸ್ತ್ರೀ ಕುಲಕ್ಕೆ ಮಾಡುತ್ತಿರುವ ಅಪಮಾನವಾಗಿದೆ. ಅಂದು ಸ್ತ್ರೀ ತಾತ್ಸಾರಕ ದುಷ್ಠ ಮಹಿಷನ ವಿರುದ್ಧ ಸ್ತ್ರೀ ಶಕ್ತಿ ಹೇಗೆ ಹೋರಾಡಿ ಗೆದ್ದಿತ್ತೊ… ಹಾಗೆ ಇಂದು “ಮಹಿಷ ದಸರಾ” ಎಂಬ ಸ್ತ್ರೀ ದ್ವೇಷವನ್ನು ಬಿತ್ತುವ ಆಚರಣೆಗಳನ್ನು ಪ್ರೇರಿಸುವ ಕೆಲವು ಆದುನಿಕ ಮಹಿಷಾಸುರರುಗಳ ವಿರುದ್ಧ ನಾಡಿನ ಸಮಸ್ತ ಸ್ತ್ರೀಕುಲಗಳು ಒಂದಾಗಿ ತಕ್ಕ ಪ್ರತ್ಯುತ್ತರವನ್ನು ನೀಡಬೇಕಾಗಿದೆ…..
ಜಯಪ್ರಕಾಶ್ ಜೋಡ್ಕಟ್ಟೆ ಬೈಂದೂರ್
