















ಯಲಹಂಕ ಸುದ್ದಿ
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾ.ಪಂ.ವತಿಯಿಂದ ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ನಂತರ ಗ್ರಾ.ಪಂ.ಅಧ್ಯಕ್ಷ ರಾಹುಲ್ ಪಿ. ಮಾತನಾಡಿ ‘ಕಂದಾಯ ಸಚಿವರು, ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ ರವರ ಮಾರ್ಗದರ್ಶನದಲ್ಲಿ ಗ್ರಾಮಸಭೆ ನಡೆಸಲಾಗಿದ್ದು, ಗ್ರಾಮಸಭೆಯಲ್ಲಿ 42 ಅಂಗವಿಕಲರಿಗೆ ಶೇ. 5% ಯೋಜನೆಯ ಅಡಿಯಲ್ಲಿ ಪ್ರೋತ್ಸಾಹ ಧನದ ಚೆಕ್ ವಿತರಣೆ, ಶೇ.25% ಯೋಜನೆಯ ಅಡಿಯಲ್ಲಿ ಪ.ಜಾತಿ,ಪ.ಪಂಗಡಕ್ಕೆ ಸೇರಿದ, ಮರಣ ಹೊಂದಿರುವ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಸಹಾಯಧನ ವಿತರಣೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಣೆ, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಬಹುಮಾನ ವಿತರಣೆ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಿಸಲಾಗಿದ್ದು, ಗ್ರಾಮಸಭೆಯ ಪ್ರಯುಕ್ತ ಮಹಿಳಾ ಒಕ್ಕೂಟದ ಸದಸ್ಯರಿಂದ ಗ್ರಾಮೀಣ ಸಂತೆ ಏರ್ಪಡಿಸಲಾಗಿದೆ. ಇದರಲ್ಲಿ 52ಕ್ಕೂ ಹೆಚ್ಚು ಸ್ಟಾಲ್ ಗಳನ್ನು ತೆರೆಯಲಾಗಿದ್ದು, ಆಹಾರ ಉತ್ಪನ್ನಗಳು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಲ್ಲಿ ಪಾಲ್ಗೊಂಡು, ತಮ್ಮ ಇಲಾಖೆಗಳಲ್ಲಿ ದೊರೆಯುವ ನಾಗರೀಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರಾಮಸಭೆಗೆ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದು, ಸಮಸ್ಯೆಗಳ ಪರಿಹಾರಕ್ಕೆ ಗ್ರಾ.ಪಂ.ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮಸಭೆಯಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್, ಗ್ರಾ.ಪಂ.ಉಪಾಧ್ಯಕ್ಷೆ ನಂಜಮ್ಮ ಬಲ್ಲಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಬಿ.ಎ.ಪ್ರೇಮ, ಶೃತಿ ಮೂರ್ತಿ, ಆಂಜಿನಮ್ಮ ನಾಗರಾಜ್, ಸುಮಿತ್ರ ಮಂಜುನಾಥ್, ಮಾಜಿ ಉಪಾಧ್ಯಕ್ಷೆ ಕಮಲಮ್ಮ ಮುನಿರಾಮಣ್ಣ, ಗ್ರಾ.ಪಂ.ಸದಸ್ಯರಾದ ಗೀತಾ ಆನಂದಕುಮಾರ್, ವಿ.ನಾರಾಯಣಸ್ವಾಮಿ, ರತ್ನಮ್ಮ ವೆಂಕಟಸ್ವಾಮಿ, ಕೃಷ್ಣಪ್ಪ, ಸಂಧ್ಯಾ ಸುಂದರೇಶ್, ಜಿ.ಲಕ್ಷ್ಮೀನಾರಾಯಣ, ಶ್ರೀರಾಮ್, ಸಿ.ಎಂ.ನಾಗರಾಜು, ಜ್ಯೋತಿ, ರಾಮಚಂದ್ರ, ಶಿಲ್ಪ, ಸ್ಮಿತಚಂದ್ರು, ಮುನಿಮದ್ದೂರಪ್ಪ, ಮುಖಂಡರಾದ ಡಿ.ಎಂ.ಚೌಡಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ಜಗದೀಶ್, ಕೃಷ್ಣಮೂರ್ತಿ, ಚಾಗಲಟ್ಟಿ ಚಿಕ್ಕಪ್ಫಯ್ಯ, ಪಿಡಿಓ ಟಿ.ಪಿ.ಸುಮ, ಪಂಚಾಯಿತಿ ಸಿಬ್ಬಂದಿಗಳಾದ ರಮೇಶ್ ನಾಯ್ಕ್, ಗಿರೀಶ್, ಸೋಮಶೇಖರ್, ಅನಿಲ್, ನವೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu
Kogilu layout
Yelahanka
9845085793
7349337989
9035282296
