
ಬದಾಮಿ.
ಸ್ಥಳಿಯ ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜ ವತಿಯಿಂದ ಇದೇ ಸಪ್ಟೆಂಬರ್ 5 ರಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಪ್ರೌಢ ಶಾಲಾ ಶಿಕ್ಷಕಿ ಸಮಾಜದವರೇಆದ ಶ್ರೀಮತಿ ವಿಜಯ ಲತಾ. ಈರಪ್ಪ. ಮಬ್ರುಮಕರ ಅವರನ್ನು ಸಮಾಜದ ಪರವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾಲಾ ಹೊಸಮನಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ವಿಜಯ ಲತಾ ಮಬ್ರುಮಕರ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ ರಾಗುವಂತಾಗಲೆಂದು ಇದೇ ಸಂದರ್ಭದಲ್ಲಿ ಸಮಾಜದ ಅದ್ಯಕ್ಷ ನಾಗರಾಜ ಹ ಹೊಸಮನಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜ ಬಾಂಧವರಾದ ರವಿ ಮುಂಡೇವಾಡಿ.ವಿಜಯ ದೊಡಮನಿ ಶನಶಪ್ಪ ಸಾನಕ್ಯಾನವರ ರಮೇಶ್ ಕುಂದರಗಿ ಸಂಜಯ ಮಬ್ರುಮಕರ ಮಹಿಳಾ ಸದಸ್ಯರಾದ ಶ್ರೀಮತಿ ರತ್ನವ್ವ ದುತ್ತರಗಿ. ರೇಣುಕಾ ದೊಡಮನಿ ಈರಮ್ಮ ಮಬ್ರುಮಕರ. ಮೊದಲಾದ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu
kogilu layout
Yelahanka
Bangalore
,9845085793
7349337989
9035282296
