
















ಯಲಹಂಕ. ದಿನಾಂಕ. 06. 10. 2024. ರಂದು
ಬ್ಯಾಟರಾಯನಪುರ :
ಬ್ಯಾಟರಾಯನಪುರ ಕ್ಷೇತ್ರದ ಕಟ್ಟಿಗೇನಹಳ್ಳಿಯಲ್ಲಿ ಅಗಲಿದ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ರವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಸಂತೋಷ್ ಬೆಳ್ಳೂಟಿ ಅವರು ಬ್ಯಾಟರಾಯನಪುರ ಕ್ಷೇತ್ರದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ, ಮುಖಂಡರಾಗಿ ಪಕ್ಷದ ಬಲವರ್ಧನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರ ಸ್ಮರಣಾರ್ಥವಾಗಿ ಬ್ಯಾಟರಾಯನಪುರ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಬಡವರಿಗೆ ಆರೋಗ್ಯದ ನೆರವು ನೀಡುವ ಕಾರ್ಯವನ್ನು ಕೈಗೊಂಡಿದ್ದೇವೆ. ಈ ಕಾರ್ಯದಲ್ಲಿ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಶ್ರದ್ಧೆಯಿಂದ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುತ್ತಿರುವ ಬಗ್ಗೆ ಸಂತೋಷ ಭಾವವಿದೆ, ಈ ಸತ್ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಮುಖಂಡರಿಗೂ ಅನಂತ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ.
ಮತ್ತು ಕಾಂಗ್ರೆಸ್ ಮುಖಂಡರಾದ H A ಶಿವಕುಮಾರ್, ಬಿ.ವೆಂಕಟೇಶಯ್ಯ, ಈರಣ್ಣ
ರಾಜಣ್ಣ, ಮುನಿ ಆಂಜಿನಪ್ಪ.
ಕೃಷ್ಣಪ್ಪ, .ಮೋಹನ್ ರಾಜು,
ರಾಮಮೂರ್ತಿ, ಲೋಕೇಶ್,
ಶಿವರಾಜ್, ಬೆಂ. ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂದೀಪ್, ಕೇಶವ್,ವಾರ್ಡ್ ಮಹಿಳಾ ಅಧ್ಯಕ್ಷೆ
ಮಂಜುಳಾ,ಅನಿತಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿ
Public power
R Hanumanthu
kogilu layout
Yelahanka
banglore
9845085793
7349337989
9035282296
