

ಬಂಗಾರಪೇಟೆ : ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಕಲಾವಿದ ಯಲ್ಲಪ್ಪ. ಬಂಗಾರಪೇಟೆ ತಾಲ್ಲೂಕಿನ ಹೀರೆಕರಪ್ಪನಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಮೈಸೂರಿನಲ್ಲಿ ನಡೆದ ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ,
ಹಾಡುಗಾರಿಕೆಯನ್ನು ತನ್ನ ಜೀವನದ ಒಂದು ಭಾಗವಾಗಿ ಪರಿಗಣಿಸಿ ಬಡತನವನ್ನು ಲೆಕ್ಕಿಸದೆ ಹಲವು ಸಂಕಷ್ಟಗಳ ಮದ್ಯೆ ಎದೆ ಗುಂದದೆ ಗಾಯನವನ್ನು ತನ್ನ ಜೀವಾಳವನ್ನಾಗಿಸಿಕೊಂಡರು, ಆ ಮೂಲಕ ಅವರ ಪ್ರತಿಭೆಯನ್ನು ಕಂಡು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳು ಹರಿಸಿ ಬಂದವು ಆಮೂಲಕ ಜಿಲ್ಲಾದ್ಯಾಂತ ಮಿಂಚಿ ತನ್ನದೇಯಾದ ಚಾಪು ಸಾಧಿಸಿದ್ದರು,
ಇಷ್ಟಾದರೂ ಒಮ್ಮೆ ದಸರಾ ಉತ್ಸವದಲ್ಲಿ ಹಾಡಬೇಕು ತನ್ನ ಕಲಾ ಪ್ರತಿಭೆಯನ್ನು ಪ್ರದರ್ಶಿಸುವ ಕನಸುಕಂಡಿದ್ದರು, ವಿಪರ್ಯಾಸ 2024 ರ ವಿಶ್ವ ವಿಖ್ಯಾತ ದಸರಾ ಉತ್ಸವದಲ್ಲಿ ಅವಕಾಶ ಸಿಕ್ಕಿ ತನ್ನ ಗಾನ ಲಹರಿಯ ಮೂಲಕ ರಾಜ್ಯಾದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ,ಹಾಗೂ ರಾಜ್ಯಾದ್ಯಂತ ತಾಲೂಕಿನ ಕಿರ್ತಿಯನ್ನು ಸ್ಪಂದಿಸಿದ್ದಾರೆ.ಇವರ ತಂಡದಲ್ಲಿ ದೊಡ್ಡ ಮಲ್ಲೆರವಿ. ಮಾರುತಿ ಪ್ರಸಾದ್. ಸಿ ಮಂಜುನಾಥ್. ನವೀನ್. ಶಿವು. ಮಣಿ. ವಸಂತ. ತಸ್ಮೀಯಾ ಬಾನು ಭಾಗವಹಿಸಿದರು
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
Public power
R Hanumanthu
kogilu layout
Yelahanka
banglore
9845085793
7349337989
