
ಹೊಸಕೋಟೆ : ವಿಧಾನಸಭಾ ಕ್ಷೇತ್ರದ ಅನುಗೊಂಡನಹಳ್ಳಿ ಹೋಬಳಿಯ ಮೇಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನೂತನ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ಉಚಿತ ನೀರಿನ ಕ್ಯಾನ್ ವಿತರಣೆ, ಹಾಗೂ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಶಾಸಕರಾದ ಶರತ್ ಬಚ್ಚೇಗೌಡರವರು ಗಣ್ಯರೊಂದಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಣಅಧಿಕಾರಿ ನಾರಾಯಣಸ್ವಾಮಿ , ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಕೆಎಂಎಂ ಮಂಜುನಾಥ್ ,ಮುಖಂಡರುಗಳಾದ ಬೋಧನಾ ಹೊಸಹಳ್ಳಿ ಪ್ರಕಾಶ್ ,ಸಮೇತನಹಳ್ಳಿ ಸೊಣ್ಣಪ್ಪ, ಮುತ್ಸಂದ್ರ ಕೃಷ್ಣಾರೆಡ್ಡಿ, ಹಾರೋಹಳ್ಳಿ ದೇವರಾಜ್, ಮುತ್ಕೂರು ಮುನಿರಾಜು, ಸಂತೋಷ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್ , ಮೇಡಹಳ್ಳಿ ಎಂಸಿ ರಾಜೇಂದ್ರ, ಎಂಎಸ್ ರಾಮಮೂರ್ತಿ, ಭೈರಪ್ಪ, ನಟೇಶಪ್ಪ, ಅಶೋಕ್ ,ವಸಂತ್, ಹಾಗೂ ಲಕ್ಷ್ಮಿ ಡಿಸಿ, ಲತಾರೆಡ್ಡಿ, ಗುತ್ತಿಗೆದಾರರಾದ ಶ್ರವಣ್ ಕುಮಾರ್, ಬೇಟೆಗೌಡ್ರು , ಸೇರಿದಂತೆ ಹೋಬಳಿಯ ಎಲ್ಲಾ ಮುಖಂಡರುಗಳು, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
