
ಚಿಕ್ಕಬಳ್ಳಾಪುರ ತಾಲ್ಲೂಕು ಬೊಮ್ಮನಹಳ್ಳಿ ವಾಸಿ ವಕೀಲ ಮುನಿವೆಂಕಟಸ್ವಾಮಿ ತನುಜಾ ರವರ ಗೃಹ ಪ್ರವೇಶಕ್ಕೆ ಆಗಮಿಸಿದ್ದ ಅವರು ಚಿಕ್ಕಬಳ್ಳಾಪುರ ನಗರದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹರಿಸ್ಥಳ ಚಿಕ್ಕಗೆರಿಗರೆಡ್ಡಿ ಮನೆಯ ಆಥಿತ್ಯ ಸ್ವೀಕರಿಸಲು ಬಂದಿದ್ದರು. ಇಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರನ್ನ ಆಶೀರ್ವದಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಲಜ್ಞಾನಿಗಳು ಹೇಳಿದ್ದು ಯಾವತ್ತೂ ಸುಳ್ಳಾಗೊಲ್ಲ ಅವರು ಹೇಳಿದಂತೆ ಜಗತ್ತು ನಡೆಯುತ್ತಿದೆ ಅವರೇಳಿಂದಂತೆ ಎಣ್ಣೆ ಇಲ್ಲದೆ ದೀಪ ಉರಿಯುತ್ತಿದೆ,ಕಾಲಿಲ್ಲದೆ ಕಬ್ಬಿಣದ ಚಕ್ರಗಳಿಂದ ರೈಲು ಓಡುತ್ತಿದೆ ಗಾಳಿಯಲ್ಲಿ ಮಾತಾಡೋ ಮೋಬೈಲ್ ಬಂದಿದೆ ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು.ನಾಯಿಗೆ ಊಟ ಕೊಡಿ ಇಲ್ಲಾಂದರೆ ಅವು ನಮ್ಮನ್ನೆ ತಿಂದು ಬಿಡುತ್ತವೆ ಮನುಷ್ಯ ಜನ್ಮ ಎಷ್ಟು ಶ್ರೇಷ್ಟವೋ ಅಷ್ಟೆ ಕೆಲಸಕ್ಕೆ ಬಾರದ್ದು ಹಾಗಿರುತ್ತದೆ. ನೂರು ವರ್ಷ ಬದುಕಿ ಸಾಕಷ್ಟು ಸಂಪತ್ತು ಗಳಿಸಿದ್ದ ಮನುಷ್ಯ ಸತ್ತರೆ ಮೂರು ದಿನಾನು ಆ ಶವವನ್ನ ಯಾರು ಮನೆಯಲ್ಲಿ ಇಟ್ಟುಕೊಳ್ಳಲ್ಲ ಆದರೆ ನೂರು ವರ್ಷ ಬದುಕಿದ ಮರವೊಂದು ಉರುಳಿ ಬಿದ್ದರೆ ಅದು ಸತ್ತ ಮೇಲೆ ನೂರು ವರ್ಷ ಬದುಕುತ್ತೆ ಅದು ಬಾಗಿಲಾಗಿಯೋ ಕಿಟಕಿಯಾಗಿಯೆ ಇರುತ್ತೆ ಎಂದು ಕಾಲಜ್ಞಾನ ಹೇಳಿದ ಅವರು ನಾನು ಮೂರು ತಿಂಗಳ ಹಿಂದೆ ಇದೆ ಗೆರಿಗರೆಡ್ಡಿಯವರ ಮನೆಯಲ್ಲಿ ಕುಳಿತು ಹೇಳಿದ್ದ ಭವಿಷ್ಯ ನಿಜವಾಗಿದೆ ಅದೆಲ್ಲವೂ ನಿಮಗೆ ಗೊತ್ತಿದೆ ಈಗಲೂ ದೇಶಕ್ಕೆ ಬಹುದೊಡ್ಡ ಗಂಡಾಂತರ ಇದೆ ಅದನ್ನ ಮುಂದೆ ಹೇಳುತ್ತೇನೆ ಎಂದರು.ಗೆರಗರೆಡ್ಡಿ ಕುಟುಂಬ ಅವರ ಬಂದು ಮಿತ್ರರು ಕೆಲವು ಮುಖಂಡರು ಸ್ವಾಮಿಜಿ ಆಶೀರ್ವಾದ ಪಡೆದ ಪುನೀತರಾದರು.
