

ಬೆಂಗಳೂರು, 24 ಅಕ್ಟೋಬರ್, 2024: ಎಐ ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಬದಲಿಸುತ್ತಿದೆ. ಓಪನ್ ಸೋರ್ಸ್ ತಂತ್ರಜ್ಞಾನವು ಈ ಬದಲಾವಣೆಯ ಮೂಲವಾಗಿದೆ. ಭಾರತದಲ್ಲಿ ಈ ಮಿಷನ್ ಭಾರಿ ಮಹತ್ವದ್ದಾಗಿದೆ. ಯಾತೆಂದರೆ ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡೆವಲಪರ್ ಗಳ ತಂಡ ಇದೆ. ಪ್ರತಿಭಾವಂತರಿದ್ದಾರೆ. ಅವೆಲ್ಲರ್ರೂ ಎಐ ಐಧರಿತ ಡಿಜಿಟಲ್ ಬದಲಾವಣೆ ಕ್ರಾಂತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ನಾವು ಬೆಂಗಳೂರಿನಲ್ಲಿ ಬಿಲ್ಡ್ ವಿತ್ ಎಐ ಸಮಾವೇಶವನ್ನು ಆಯೋಜಿಸಿರುವುದು ಯಾಕೆಂದರೆ ನಾವು ದೇಶದ ಡಿಜಿಟಲ್ ವ್ಯವಸ್ಥೆಯ ಅಗಾಧ ಸಾಮರ್ಥ್ಯವನ್ನು ಗಮನಿಸಿದ್ದೇವೆ. ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಐ ಅಳವಡಿಕೆ ಮತ್ತು ಸಂಯೋಜನೆ ಬಹಳ ವೇಗವಾಗಿ ನಡೆಯಬಹುದಾಗಿದೆ. ಓಪನ್ ಸೋರ್ಸ್ ಮಾಡೆಲ್ ಗಳು ಈ ಕ್ರಾಂತಿಗೆ ಹೆಚ್ಚಿನ ಕೊಡುಗೆ ನೀಡಬಲ್ಲವು. ಜೊತೆಗೆ ಡೆವಲಪರ್ಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮತ್ತು ಉದ್ಯಮಗಳಿಗೆ ಭಾರತದಲ್ಲಿ ಎದುರಾಗುವ ಸವಾಲುಗಳನ್ನು ಸೂಕ್ತವಾಗಿ ಎದುರಿಸಲು ಕಡಿಮೆ ವೆಚ್ಚದ, ಅತ್ಯುತ್ತಮ ಉತ್ಪನ್ನಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಮೆಟಾದ ವಿಪಿ, ಪ್ರಧಾನ ಎಐ ವಿಜ್ಞಾನಿ ಯಾನ್ ಲೆಕುನ್ ಅವರು , “ಓಪನ್ ಸೋರ್ಸ್ ತತ್ವಗಳ ಜೊತೆಗೆ ಮೆಟಾದ ಎಐ ವಿಷನ್ ಬೆರೆತುಕೊಂಡಿದೆ. ಆ ಮೂಲಕ ಜಾಗತಿಕ ಮಟ್ಟದ ಸೃಜನಶೀಲತೆ ಮತ್ತು ನಾವೀನ್ಯತೆಯ ವಲಯವನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇನ್ಫರೆನ್ಸ್ ಆಪ್ಟಿಮೈಸೇಶನ್ ನಿಂದ ಹಿಡಿದು ನ್ಯಾಚುರಲ್ ಲ್ಯಾಂಗ್ವೇಚ್ ಪ್ರೊಸೆಸಿಂಗ್ ವರೆಗಿನ ಕ್ಷೇತ್ರಗಳಲ್ಲಿ ಓಪನ್ ಸೋರ್ಸ್ ಅನೇಕ ಅಭಿವೃದ್ಧಿ ಸಾಧಿಸುವ ಮೂಲಕ ಸತತವಾಗಿ ಅಚ್ಚರಿ ಉಂಟು ಮಾಡಿದೆ. ಎಐ ವ್ಯವಸ್ಥೆಗಳನ್ನು ನಿರ್ಮಿಸುವುದರ ಹಿಂದೆ ಜಗತ್ತಿನ ಭಾಷೆಗಳು, ಸಂಸ್ಕೃತಿಗಳು ಮತ್ತು ಮೌಲ್ಯಗಳನ್ನು ಒಳಗೊಂಡ ಎಐ ಮೂಲಸೌಲಭ್ಯ ವ್ಯವಸ್ಥೆಯನ್ನು ರಚಿಸುವ ಮೂಲಕ ವ್ಯಕ್ತಿಗಳ ಬೆಳವಣಿಗೆ ಜೊತೆಗೆ ಸಾಮಾಜಿಕ ಬದಲಾವಣೆ ಮಾಡುವುದು ನಮ್ಮ ಆಶಯವಾಗಿದೆ” ಎಂದು ಹೇಳಿದರು.
ಮೆಟಾ ಇಂಡಿಯಾದ ಉಪಾಧ್ಯಕ್ಷೆ ಮತ್ತು ಮುಖ್ಯಸ್ಥೆ ಸಂಧ್ಯಾ ದೇವನಾಥನ್ ಅವರು ಮಾತನಾಡಿ, “ಮೊಬೈಲ್ ಇಂಟರ್ ನೆಟ್ ಕ್ರಾಂತಿ ಮಾಡಿದಂತೆ ಎಐನಲ್ಲಿ ಕೂಡ ದಾರಿ ತೋರುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದು ಮೆಟಾ ನಂಬಿಕೆಯಾಗಿದೆ. ನಾವು ಭಾರತದ ಬೆಳವಣಿಗೆಯಲ್ಲಿ ಜೊತೆಯಾಗಿ ನಡೆಯುತ್ತಿದ್ದೇವೆ. ಸರ್ಕಾರಿ ಇಲಾಖೆಗಳೊಂದಿಗೆ ಪಾಲುದಾರಿಕೆಯಿಂದ ಹಿಡಿದು ಲಕ್ಷಾಂತರ ಸಣ್ಣ ವ್ಯಾಪಾರಗಳನ್ನು ಬೆಳೆಯನು ಅನುವು ಮಾಡಿಕೊಡುತ್ತಿದ್ದೇವೆ ಎಂದು ಹೇಳಿದರು.
ಸರ್ಕಾರಿ ಸೇವೆಗಳ ಸಬಲೀಕರಣ
ಸರ್ಕಾರಿ ಇಲಾಖೆಗಳೊಂದಿಗೆ ಕೆಲಸ ಕಾರ್ಯ ನಡೆಯುತ್ತಿದ್ದು, ಆಡಳಿತ ಕಾರ್ಯ ಸುಧಾರಿಸಲು ಓಪನ್ ಸೋರ್ಸ್ ಅನ್ನು ಹೇಗೆ ಬದಲಿಸಿಕೊಳ್ಳಬಹುದು ಎಂಬ ಚಿಂತನ ಮಂಥನ ನಡೆದಿದೆ. ಈ ಮೂಲಕ ಸಾರ್ವಜನಿಕ ಕೆಲಸಗಳು ಮತ್ತು ನಾಗರೀಕರ ಅಗತ್ಯಗಳನ್ನು ಪೂರೈಸುವ ಕೆಲಸಗಳು ಉತ್ತಮಗೊಳಿಸುವ ಕೆಲಸ ಉಂಟಾಗಲಿದೆ.
ಮೆಟಾದ ವಾಟ್ಸಪ್ ಬಿಸಿನೆಸ್ ಸೊಲ್ಯೂಷನ್ ಮತ್ತು ಲಾಮಾದಂತಹ ಓಪನ್ ಸೋರ್ಸ್ ಜೆನ್ ಎಐ ಅನ್ನು ಬಳಸಿಕೊಂಡು ವಾಟ್ಸಪ್ ಮೂಲಕ ನಾಗರಿಕ- ಕೇಂದ್ರಿತ ಸೇವೆಗಳನ್ನು ಒದಗಿಸಲು, ಸರ್ಕಾರಿ-ನಾಗರಿಕ ಸಂವಹನವನ್ನು ಅತ್ಯುತ್ತಮಗೊಳಿಸಲು, ಸಾರ್ವಜನಿಕ ಸೇವಾ ಕೆಲಸಗಳನ್ನು ವೇಗಗೊಳಿಸಲು ನಾವು ಇತ್ತೀಚೆಗೆ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ. ಜೊತೆಗೆ ತೆಲಂಗಾಣ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವಾ ಕೆಲಸವನ್ನು ತೀವ್ರಗೊಳಿಸಲು, ಸರ್ಕಾರಿ ಇಲಾಖೆಗಳ ಕೆಲಸವನ್ನು ವೇಗಗೊಳಿಸಲು ಲಾಮಾ ಮಾಡೆಲ್ ಗಳನ್ನು ಬಳಸಲಾಗುತ್ತಿದೆ.
ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಬದಲಾವಣೆ
ವೇಗವಾಗಿ ಜಾಸ್ತಿ ಆಗುತ್ತಿರುವ ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವು ಜಾಗತಿಕ ಆರ್ಥಿಕತೆಯಲ್ಲಿ ಅಭಿವೃದ್ಧಿ ಸಾಧಿಸಲು ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಬಹಳ ಮಹತ್ವದ್ದಾಗಿದೆ. ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ (ಎಂ ಎಸ್ ಡಿ ಇ) ಸಹಭಾಗಿತ್ವದಲ್ಲಿ ಪ್ರಾರಂಭಿಸಲಾದ ಸ್ಕಿಲ್ ಎಐ ಚಾಟ್ ಬಾಟ್ ನಂತಹ ಯೋಜನೆಗಳು ಎಐ ಆಧರಿತ ಶಿಕ್ಷಣವು ಜನಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳುತ್ತಿದೆ. ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಈ ಚಾಟ್ಬಾಟ್, ಉದ್ಯೋಗ ಅವಕಾಶಗಳು, ಕೌಶಲ್ಯ ಕೇಂದ್ರಗಳು ಮತ್ತು ಕಲಿಕೆಯ ಸಂಪನ್ಮೂಲಗಳನ್ನು ಪಡೆಯಲು ನಾಗರಿಕರಿಗೆ ಸಹಾಯ ಮಾಡುತ್ತದೆ.
ಭಾರತದ ಮೊದಲ ಸಂಪೂರ್ಣ ಸ್ವಯಂಚಾಲಿತ ಆನ್ಲೈನ್ ಕಲಿಕಾ ವೇದಿಕೆಯಾದ ಅರಿವಿಹಾನ್ ನಂತಹ ಶಿಕ್ಷಣ-ಕೇಂದ್ರಿತ ಯೋಜನೆಗಳಲ್ಲಿ ನಮ್ಮ ಓಪನ್ ಸೋರ್ಸ್ ಮಾಡೆಲ್ ಗಳನ್ನು ಬಳಸಲಾಗುತ್ತಿದೆ
ಭಾರತೀಯ ಉದ್ಯಮಗಳ ಸಬಲೀಕರಣ
ಭಾರತದಲ್ಲಿನ ಉದ್ಯಮಗಳು ಅದರಲ್ಲೂ ಸ್ಟಾರ್ಟ್ ಅಪ್ ಗಳಿಂದ ಹಿಡಿದು ದೊಡ್ಡ ಕಂಪನಿಗಳವರೆಗೆ ತಮ್ಮ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು, ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ವ್ಯಾಪಾರದ ಬೆಳವಣಿಗೆಯನ್ನು ಸಾಧಿಸಲು ಎಐ ಕಡೆಗೆ ಮುಖಮಾಡಿವೆ. ಎಐ ಮಾಡೆಲ್ ಗಳು ಈ ಬದಲಾವಣೆ ಪರ್ವದಲ್ಲಿ ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ. ಉದ್ಯಮಗಳಿಗೆ ಕಸ್ಟಮೈಸ್ ಮಾಡಬಹುದಾದ ಟೂಲ್ ಗಳನ್ನು ಒದಗಿಸುವ ಮೂಲಕ ಅವುಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತವೆ ಮತ್ತು ಅವುಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅನುವು ಮಾಡಿ ಕೊಡುತ್ತವೆ.