ಎಐ ಮತ್ತು ಕೋಡಿಂಗ್‌ನಲ್ಲಿ ಯುವಜನತೆಯ ಕೌಶಲ್ಯ ವರ್ಧಿಸಲು ಆರ್ ಎನ್‌ಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಸ್ಯಾಂಸಂಗ್ ಇನೋವೇಶನ್ ಕ್ಯಾಂಪಸ್” ಪ್ರೊಗ್ರಾಮ್ ಪ್ರಾರಂಭಿಸಿದ ಸ್ಯಾಂಸಂಗ್ R&D ಇನ್ಸ್‌ಟಿಟ್ಯೂಟ್ ಇಂಡಿಯಾ, ಬೆಂಗಳೂರು

ಬೆಂಗಳೂರು, ಭಾರತ – ನವಂಬರ್ 21, 2024: ಸ್ಯಾಂಸಗ್ R&D ಇನ್ಸ್‌ಟಿಟ್ಯೂಟ್ ಇಂಡಿಯಾ-ಬೆಂಗಳೂರು(SRI-B), ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಅತ್ಯಾವಶ್ಯಕ ಕೌಶಲ್ಯಗಳೊಂದಿಗೆ ಯುವಜನತೆಯನ್ನು ಸಜ್ಜುಗೊಳಿಸಲು ಬೆಂಗಳೂರಿನ ಆರ್ ಎನ್‌ಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಸ್ಯಾಂಸಂಗ್ ಇನೋವೇಶನ್ ಕ್ಯಾಂಪಸ್”( SIC)ನಲ್ಲಿ ತನ್ನ ಪ್ರಧಾನ ಸಿಎಸ್‌ಆರ್ ಪ್ರೊಗ್ರಾಮ್ ಪ್ರಾರಂಭಿಸಿದೆ.

ಹಿಂದಿನ ವರ್ಷಗಳ ಯಶಸ್ಸಿನ ಮೇಲೆ ನಿರ್ಮಾಣ ಮಾಡುತ್ತಾ, RNSITದಲ್ಲಿ ಪ್ರಾರಂಭಿಸಲಾಗಿರುವ ಎಸ್‌ಐಸಿ, ಎಐ ಮತ್ತು ಕೋಡಿಂಗ್ ಮತ್ತು ಪ್ರೊಗ್ರಾಮಿಂಗ್ ಮುಂತಾದ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಮಗ್ರವಾದ ತರಬೇತಿ ಒದಗಿಸುವ ಮೂಲಕ 100ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಸಬಲಗೊಳಿಸುವುದಕ್ಕಾಗಿಯೇ ವಿನ್ಯಾಸಗೊಂಡಿದೆ.

“ಸ್ಯಾಂಸಂಗ್ ಇನೋವೇಶನ್ ಕ್ಯಾಂಪಸ್, ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಮ್ಮ ಯುವಜನತೆಯ ಕೌಶಲ್ಯ ವರ್ಧನೆ ಮಾಡಿ ಅವರು ತಮ್ಮ ಭವಿಷ್ಯತ್ತಿಗಾಗಿ ಇನ್ನೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿಕೊಡುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಆರ್ ಎನ್‌ಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗಿನ ನಮ ಸಹಯೋಗದ ಬಗ್ಗೆ ನಾವು ಅತ್ಯಂತ ಉತ್ಸುಕರಾಗಿದ್ದೇವೆ ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು, ಸಾಮರ್ಥ್ಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಮತ್ತು ಸ್ವತಃ ತಮಗಾಗಿ ಹೊಸ ಮಾರ್ಗ ಕಂಡುಕೊಳ್ಳಲು ವಿದ್ಯಾರ್ಥಿಗಳನ್ನು ಈ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಬಯಸುತ್ತಿದ್ದೇವೆ.” ಎಂದು ಹೇಳಿದರು, SRI-B ದ ಚೀಫ್ ಟೆಕ್ನಾಲಜಿ ಆಫಿಸರ್ ಮೋಹನ್ ರಾವ್ ಗೋಲಿ .

ಈ SIC ಉಪಕ್ರಮದ ಮೂಲಕ, ಡಿಜಿಟಲ್ ಕೌಶಲ್ಯಗಳ ಅಂತರಗಳನ್ನು ಕಡಿಮೆ ಭವಿಷ್ಯತ್ತು ಸಿದ್ಧವಾದ ಕಾರ್ಯಪಡೆಯನ್ನು ಸೃಷ್ಟಿಸಿ, ಡಿಜಿಟಲ್ ಭಾರತಕ್ಕೆ ಬಲ ಒದಗಿಸುವ ತನ್ನ ಬದ್ಧತೆಯನ್ನು ಸ್ಯಾಂಸಂಗ್ ಪುನರುಚ್ಚರಿಸುತ್ತದೆ. ಈ ಉಪಕ್ರಮವು, ಕೇವಲ ಉದ್ಯೋಗಶೀಲತೆಯನ್ನು ವರ್ಧಿಸುವುದು ಮಾತ್ರವಲ್ಲದೆ, ದೇಶಾದ್ಯಂತ ಯುವಮನಸ್ಸುಗಳಲ್ಲಿ ಆವಿಷ್ಕಾರದ ಚೈತನ್ಯವನ್ನು ಪ್ರೇರೇಪಿಸುವ ಗುರಿಯನ್ನೂ ಹೊಂದಿದೆ.

“ಸ್ಯಾಂಸಂಗ್ ಮತ್ತು RNSIT ನಡುವಿನ ಈ ಸಹಯೋಗವು ನಮ್ಮ ಅತಿದೊಡ್ಡ ಮೈಲಿಗಲ್ಲುಗಳ ಪೈಕಿ ಒಂದಾಗಿದ್ದು, ಯಾವುದೇ ಇತರ ಉಪಕ್ರಮವನ್ನೂ ಇದು ಮೀರಿಸುತ್ತದೆ. ಇದು, “ಉದ್ಯಮ ಶೈಕ್ಷಣಿಕ ಸಂಸ್ಥೆಗಳ ಸಹಯೋಗ”ದ ನಿಜವಾದ ವಿವರಣೆಯಾಗಿದೆ. ಈ ಪ್ರಯತ್ನದ ಕಾರಣದಿಂದಾಗಿ ನಮ್ಮ ವಿದ್ಯಾರ್ಥಿಗಳು ಉದ್ಯಮ-ಸಿದ್ಧರಾಗಿರುತ್ತಾರೆ ಮತ್ತು ಅವರ ಭವಿಷ್ಯವು ಸುರಕ್ಷಿತವಾದ ಕೈಗಳಲ್ಲಿದೆ.” ಎಂದು ಹೇಳಿದರು, ಆರ್ ಎನ್‌ಎಸ್ ಗ್ರೂಪ್ ಆಫ್ ಇನ್ಸ್‌ಟಿಟ್ಯೂಶನ್ಸ್‌ನ ಸಿಟಿಒ ಮುರಳಿಕೃಷ್ಣ ಕೆ ಮೈಸೂರು.

ಸ್ಯಾಂಸಂಗ್ ನ್ಯೂಸ್‌ರೂಮ್ ಇಂಡಿಯಾ Samsung R&D Institute India – Bangalore Launches ‘Samsung Innovation Campus’ Programme at RNS Institute of Technology to Upskill Youth in AI and Coding

Leave a Reply

Your email address will not be published. Required fields are marked *