
ಕೊನೆಯ ಹಂತದ ಸಾಗಣಿಕಾ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡುತ್ತಿರುವ ಟಾಟಾ ಮೋಟಾರ್ಸ್ ಮತ್ತು ಮೆಜೆಂಟಾ ಮೊಬಿಲಿಟಿ
ಬೆಂಗಳೂರು, 22ನೇ ನವೆಂಬರ್ 2024: ವಿತರಣಾ ಕೇಂದ್ರದಿಂದ ಗ್ರಾಹಕನಿಗೆ ಸಾಮಾಗ್ರಿಗಳನ್ನು ತಲುಪಿಸುವ ಭಾರತದ ಕೊನೆಯ ಹಂತದ ಸಾಗಾಣಿಕಾ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಉಂಟಾಗುತ್ತಿದೆ. ದಕ್ಷ, ಕಡಿಮೆ ವೆಚ್ಚದಲ್ಲಿ ಕಾರ್ಯ ನಿರ್ವಹಿಸುವ ಮತ್ತು ಸುಸ್ಥಿರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈ ಬದಲಾವಣೆ ಉಂಟಾಗುತ್ತಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿ ಇಂಟಿಗ್ರೇಟೆಡ್ ಎಲೆಕ್ಟ್ರಿಕ್ ಮೊಬಿಲಿಟಿ ಸೊಲ್ಯೂಶನ್ಸ್ ಪ್ರೊವೈಡರ್ ಆಗಿರುವ ಮೆಜೆಂಟಾ ಮೊಬಿಲಿಟಿ ಸಂಸ್ಥೆಯು ನಿಂತಿದೆ. ಈ ಸಂಸ್ಥೆಯು ಟಾಟಾ ಮೋಟಾರ್ಸ್ ನ ಅತ್ಯಂತ ಜನಪ್ರಿಯ, ಹೆಚ್ಚು ಗಳಿಕೆ ಒದಗಿಸುವ ಸಾಮರ್ಥ್ಯ ಹೊಂದಿರುವ, ಕಡಿಮೆ ಮಾಲೀಕತ್ವ ವೆಚ್ಚ ಹೊಂದಿರುವ, ಭಾರತದ ಅತ್ಯಾಧುನಿಕ, ಝೀರೋ ಎಮಿಷನ್, ಫೋರ್ ವೀಲ್ ಸಣ್ಣ ವಾಣಿಜ್ಯ ವಾಹನವಾಗಿರುವ ಟಾಟಾ ಏಸ್ ಇವಿಯನ್ನು ಬಳಸಿಕೊಂಡು ಈ ಬದಲಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಟಾಟಾ ಏಸ್ ಇವಿಯನ್ನು ತಮ್ಮ ವಾಹನ ಬಳಗಕ್ಕೆ ಸೇರಿಸುವ ಮೂಲಕ ಮೆಜೆಂಟಾ ಮೊಬಿಲಿಟಿಯು ಕಾರ್ಯಾಚರಣೆಯ ದಕ್ಷತೆ ಮತ್ತು ಸುಸ್ಥಿರತೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಕೊನೆಯ ಹಂತದ ಸಾಗಾಣಿಕಾ ಕ್ಷೇತ್ರವನ್ನೇ ಬದಲಿಸುತ್ತಿದೆ.
ಟಾಟಾ ಏಸ್ ಇವಿ ಹೆಚ್ಚಿನ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುತ್ತಲೇ ತನ್ನ ಕಾರ್ಯಾಚರಣೆಗಳಲ್ಲಿ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುತ್ತಾ ಕಾರ್ಯ ನಿರ್ವಹಿಸುತ್ತಿದ್ದು ಮೆಜೆಂಟಾ ಮೊಬಿಲಿಟಿ ಸಂಸ್ಥೆಗೆ ಬಲ ತುಂಬಿದೆ. ಎಲ್ಲಾ ರೀತಿಯ ಮಾರ್ಗಗಳಲ್ಲಿ ಸ್ಥಿರವಾದ, ವೆಚ್ಚ ಪರಿಣಾಮಕಾರಿ ಮತ್ತು ಸಮಯಕ್ಕೆ ಸರಿಯಾಗಿ ವಿತರಣೆಗಳನ್ನು ಮಾಡುವ ಕೊನೆಯ ಹಂತದ ಸಾಗಾಣಿಕಾ ವಲಯದ ಬೇಡಿಕೆಗಳನ್ನು ಸೂಕ್ತವಾಗಿ ನಿರ್ವಹಿಸಲು ಏಸ್ ಇವಿ ಸೂಕ್ತವಾಗಿದೆ.
ಈ ಕುರಿತು ಮೆಜೆಂಟಾ ಮೊಬಿಲಿಟಿಯ ಸಂಸ್ಥಾಪಕ ಮತ್ತು ಸಿಇಓ ಶ್ರೀ ಮ್ಯಾಕ್ಸನ್ ಲೆವಿಸ್ ಅವರು, “ಬಹಳ ಹಿಂದಿನಿಂದಲೇ ಸಾಮಾಗ್ರಿ ಸಾಗಾಣಿಕಾ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ನಾವು ಈ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸರಿಯಾದ ವಾಹನಕ್ಕಾಗಿ ಕಾಯುತ್ತಿದ್ದೆವು. ಈ ಸಂದರ್ಭದಲ್ಲಿ ಟಾಟಾ ಏಸ್ ಇವಿ ನಮ್ಮ ಅಗತ್ಯಕ್ಕೆ ಸಂಪೂರ್ಣವಾಗಿ ಸರಿಹೊಂದುತ್ತದೆ. ಹೆಚ್ಚು ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 4 ಚಕ್ರದ ಎಲೆಕ್ಟ್ರಿಕ್ ವಿಭಾಗಕ್ಕೆ ಅವಶ್ಯವಾಗಿ ಬೇಕಾಗಿದ್ದ ಹೆಚ್ಚಿನ ರೇಂಜ್ ಅನ್ನು ಒದಗಿಸುತ್ತದೆ. ಆ ಮೂಲಕ ನಮ್ಮ ಕಾರ್ಯಾಚರಣೆಯನ್ನು ಜಾಸ್ತಿ ಮಾಡಿದೆ. ಟಾಟಾ ಏಸ್ ಇವಿ ಸುಸ್ಥಿರ ಉತ್ಪನ್ನವಾಗಿದ್ದು, ಹೆಚ್ಚು ಪೇಲೋಡ್ ಸಾಮರ್ಥ್ಯ, ಅತ್ಯುತ್ತಮ ದಕ್ಷತೆ, ಹೆಚ್ಚಿನ ಸಮಯ ಕಾರ್ಯನಿರ್ವಹಿಸುವ ಸಾಮರ್ಥ್ಯ, ಅತಿ ಹೆಚ್ಚು ರೇಂಜ್ ಮತ್ತು ಹೆಚ್ಚು ಲಾಭದಾಯಕತೆ ಒದಗಿಸುತ್ತದೆ. ಆದ್ದರಿಂದ ಟಾಟಾ ಏಸ್ ಇವಿ ಬಳಸುವ ಮೂಲಕ ನಾವು ನಮ್ಮ ವ್ಯಾಪಾರವನ್ನು ಉತ್ತಮಗೊಳಿಸುವುದರಲ್ಲಿ ಯಶಸ್ಸು ಸಾಧಿಸಿದ್ದೇವೆ. ಸಾಗಾಣಿಕಾ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರಿಂದ ಸುಸ್ಥಿರತೆ ಕಾಪಾಡಿಕೊಳ್ಳುತ್ತಿದ್ದೇವೆ. ಟಾಟಾ ಮೋಟಾರ್ಸ್ ಜೊತೆಗಿನ ಈ ಸಹಯೋಗವು ಭವಿಷ್ಯದಲ್ಲಿ ಇಂಗಾಲ ಮುಕ್ತವನ್ನಾಗಿ ಮಾಡಬೇಕು ಎಂಬ ಉದ್ಯಮ ಗುರಿಗೆ ಸೂಕ್ತವಾಗಿ ಸರಿಹೊಂದುತ್ತದೆ” ಎಂದು ಹೇಳಿದರು.
ಟಾಟಾ ಏಸ್ ಇವಿಯನ್ನು ಅದರ ಗ್ರಾಹಕರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಹೊಸತನ ಒದಗಿಸುವ, ಶೂನ್ಯ ಇಂಗಾಲದ ಹೊರಸೂಸುವಿಕೆ ಸಾಧಿಸುವ ಮತ್ತು ಆಧುನಿಕ ಉದ್ದಿಮೆಗಳ ಅಗತ್ಯವನ್ನು ಪೂರೈಸುವ ಸೂಕ್ತ ರೀತಿಯ ಉತ್ಪನ್ನಗಳನ್ನು ಒದಗಿಸುವ ಟಾಟಾ ಮೋಟಾರ್ಸ್ ನ ಬದ್ಧತೆಗೆ ಪುರಾವೆಯಾಗಿದೆ. ರಾಷ್ಟ್ರವ್ಯಾಪಿ 200ಕ್ಕೂ ಹೆಚ್ಚು ಮೀಸಲಾದ ಎಲೆಕ್ಟ್ರಿಕ್ ವಾಹನ ಸರ್ವೀಸ್ ಸೆಂಟರ್ ಗಳನ್ನು ಹೊಂದಿರುವ ಟಾಟಾ ಏಸ್ ಇವಿ ಅತ್ಯಾಧುನಿಕ ಬ್ಯಾಟರಿ ನಿರ್ವಹಣಾ ವ್ಯವಸ್ಥೆ ಮತ್ತು ‘ಫ್ಲೀಟ್ ಎಡ್ಜ್’ ಟೆಲಿಮ್ಯಾಟಿಕ್ಸ್ ಅನ್ನು ಹೊಂದಿದೆ. ವಾಹನದ ಸ್ಟೇಟಸ್, ಆರೋಗ್ಯ, ಲೊಕೇಷನ್ ಮತ್ತು ಚಾಲಕರಿಗೆ ವಾಸ್ತವ ಸಮಯದ ಒಳನೋಟಗಳನ್ನು ಒದಗಿಸುವ ಮೂಲಕ ವಾಹನದ ಕಾರ್ಯ ನಿರ್ವಹಣೆ ಹೆಚ್ಚಿಸಲು ಮತ್ತು ರಸ್ತೆಯಲ್ಲಿ ಸುರಕ್ಷಿತವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ಮಾಡಲು ಅತ್ಯಾಧುನಿಕ ಸ್ಮಾರ್ಟ್ ತಂತ್ರಜ್ಞಾನಗಳನ್ನು ಬಳಸುತ್ತದೆ. ಟಾಟಾ ಏಸ್ ಇವಿಗಳು ಇದುವರೆಗೂ ಶೇ.99ರಷ್ಟು ಅಪ್ ಟೈಮ್ ನೊಂದಿಗೆ 5 ಕೋಟಿ ಕಿಮೀಗಿಂತ ಹೆಚ್ಚು ದೂರವನ್ನು ಕ್ರಮಿಸಿದ ಸಾಧನೆ ಮಾಡಿದ್ದು, ವಾಸ್ತವ ಜಗತ್ತಿನ ಕಾರ್ಯಾಚರಣೆಗಳಲ್ಲಿ ಅವುಗಳ ವಿಶ್ವಾಸಾರ್ಹತೆ ಮತ್ತು ದಕ್ಷತೆಯನ್ನು ಪ್ರದರ್ಶಿಸಿವೆ. ಏಸ್ ಇವಿ 600 ಕೆಜಿ ಮತ್ತು 1000 ಕೆಜಿ ಪೇಲೋಡ್ ಆಯ್ಕೆಗಳಲ್ಲಿ ಲಭ್ಯವಿದ್ದು, ಗ್ರಾಹಕರ ವೈವಿಧ್ಯಮಯ ಅಗತ್ಯತೆಗಳು ಮತ್ತು ಕಾರ್ಯ ನಿರ್ವಹಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಟಾಟಾ ಏಸ್ ಇವಿ ತನ್ನ ಗ್ರಾಹಕರಿಂದ ಗಮನಾರ್ಹ ಮೆಚ್ಚುಗೆ ಪಡೆದುಕೊಂಡಿದೆ ಮತ್ತು ಯಶಸ್ಸು ಸಾಧಿಸಿದೆ. ವಿಶೇಷವಾಗಿ ಭಾರತದ ಅತ್ಯಂತ ಪ್ರೀತಿಯ ಎಲೆಕ್ಟ್ರಿಕ್ ಎಸ್ ಸಿ ವಿ ಆಗಿ ಉಳಿದಿದೆ.