
ಬೆಂಗಳೂರಿನ ಅತಿದೊಡ್ಡ ಆಹಾರ ಮಳಿಗೆಯನ್ನು ಆರಂಭಿಸಿದ ನೇಚರ್ಸ್ ಬಾಸ್ಕೆಟ್, ಉದ್ಘಾಟಿಸಿದ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಬೆಂಗಳೂರು : 24 ನವೆಂಬರ್ 2024 - ಭಾರತದ ಪ್ರಮುಖ ಪ್ರೀಮಿಯಂ ರಿಟೇಲ್ ವ್ಯಾಪಾರಿ ಮತ್ತು ಆರ್‌ಪಿಎಸ್‌ಜಿ ಗ್ರೂಪ್ನ ಭಾಗವಾಗಿರುವ ನೇಚರ್ಸ್ ಬಾಸ್ಕೆಟ್, ಇಂದು ಬೆಂಗಳೂರಿನಲ್ಲಿ ತನ್ನ ಮೊದಲ ಪ್ರಮುಖ ಆಹಾರ ಮಳಿಗೆಯನ್ನು ಅನಾವರಣಗೊಳಿಸಿದೆ. ಬಾಲಿವುಡ್ ಐಕಾನ್ ಕರಿಷ್ಮಾ ಕಪೂರ್ ಅವರು ಉದ್ಘಾಟಿಸಿರುವ, 10,500 ಚದರ ಅಡಿಯ ಈ ಪಾಕ ತಾಣವು, ಪಾಕಶಾಲೆಯ ಆಯ್ದ ಅನುಭವಗಳಿಗೆ ಜೀವ ನೀಡುವ ಬ್ರ್ಯಾಂಡ್ನ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಬೆಂಗಳೂರಿನಲ್ಲಿ ಒಂಬತ್ತನೇ ಮಳಿಗೆಯಾಗಿದ್ದು, ದೇಶದ 35 ನೇ ಮಳಿಗೆಯಾಗಿದೆ. ನೇಚರ್ಸ್ ಬಾಸ್ಕೆಟ್ ದೇಶಾದ್ಯಂತ ಐಷಾರಾಮಿ ಕಿರಾಣಿ ರಿಟೇಲ್ ವ್ಯಾಪಾರದಲ್ಲಿ ಪ್ರವರ್ತಕನಾಗಿ ತನ್ನ ಅಸ್ತಿತ್ವವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ಸ್ಪೆನ್ಸರ್ಸ್ ರಿಟೇಲ್ ಮತ್ತು ನೇಚರ್ಸ್ ಬಾಸ್ಕೆಟ್ನ ಅಧ್ಯಕ್ಷ ಶಾಶ್ವತ್ ಗೋಯೆಂಕಾ ಪ್ರತಿಕ್ರಿಯಿಸುತ್ತಾ, “ಬೆಂಗಳೂರಿನಲ್ಲಿ ನಮ್ಮ ಮೊದಲ ಪ್ರಮುಖ ಆಹಾರ ಮಳಿಗೆಯ ಪ್ರಾರಂಭವು ನೇಚರ್ಸ್ ಬಾಸ್ಕೆಟ್ಗೆ ಮಹತ್ವದ ಮೈಲಿಗಲ್ಲಾಗಿದೆ. ಈ ಫ್ಲ್ಯಾಗ್ಶಿಪ್ ಮಳಿಗೆಯು ಬೆಂಗಳೂರಿನ ಬೆಳೆಯುತ್ತಿರುವ ಪ್ರೀಮಿಯಂ, ಕ್ಯುರೇಟೆಡ್ ಪಾಕಶಾಲೆಯ ಅನುಭವಗಳ ಬೇಡಿಕೆಗಳಿಗೆ ಸೂಕ್ತ ತಾಣವಾಗಲಿದೆ. ಅತ್ಯುತ್ತಮವಾದ ಜಾಗತಿಕ ಗೌರ್ಮೆಟ್ ತಿನಿಸುಗಳನ್ನು ಸ್ಥಳೀಯ ಪ್ರಾಶಸ್ತ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಈ ಫ್ಲ್ಯಾಗ್ಶಿಪ್ ಬೆಂಗಳೂರಿನ ರಿಟೇಲ್ ಭೂದೃಶ್ಯವನ್ನು ಮೇಲೆತ್ತುವುದು ಮಾತ್ರವಲ್ಲದೆ, ಪ್ರೀಮಿಯಂ ಕಿರಾಣಿ ವಲಯದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಇಂತಹ ನವೀನ ಪರಿಕಲ್ಪನೆಗಳೊಂದಿಗೆ ನೇಚರ್ಸ್ ಬಾಸ್ಕೆಟ್ನ ಹೆಜ್ಜೆಗುರುತನ್ನು ವಿಸ್ತರಿಸುವ ನಮ್ಮ ಬದ್ಧತೆಯು, ಭಾರತದಲ್ಲಿ ಐಷಾರಾಮಿ ರಿಟೇಲ್ ವ್ಯಾಪಾರವನ್ನು ಮರುವ್ಯಾಖ್ಯಾನಿಸುವ ನಮ್ಮ ದೂರ ದೃಷ್ಟಿಯ ಭಾಗವಾಗಿದೆ" ಎಂದರು. ಮತ್ತೊಂದು ಉದ್ಘಾಟಣೆಗೆ ಹಿಂತಿರುಗಿದ ಕರಿಷ್ಮಾ ಕಪೂರ್, ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ“ ಪ್ರಪಂಚದಾದ್ಯಂತದ ಅತ್ಯುತ್ತಮ ಪದಾರ್ಥಗಳನ್ನು ಇಲ್ಲಿ ಒಟ್ಟುಗೂಡಿಸುತ್ತಾರೆ, ನನಗಿದು ತುಂಬಾ ಇಷ್ಟ. ಬೆಂಗಳೂರಿನಲ್ಲಿ ಈ ಸುಂದರವಾದ ಪ್ರಮುಖ ಮಳಿಗೆಯನ್ನು ಉದ್ಘಾಟಿಸಲು ಮತ್ತು ನಗರದ ಉತ್ಸಾಹಿ ಆಹಾರಪ್ರಿಯರೊಂದಿಗೆ ಈ ಅದ್ಭುತ ಅನುಭವವನ್ನು ಹಂಚಿಕೊಳ್ಳುವುದು ನನಗೆ ಗೌರವದ ಸಂಗತಿಯಾಗಿದೆ" ಎಂದರು.