ಗೆಟ್ ಸೆಟ್, ಗ್ರೋ ಶೃಂಗಸಭೆ 2024 ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಮತ್ತು ಬಾಂಧವ್ಯ ಇವೆರಡರ ಸಮತೋಲನ ಕಾಪಾಡಿಕೊಳ್ಳಲು ಕುಟುಂಬಗಳಿಗೆ ಕರೆ ನೀಡಿದ ಹ್ಯಾಪಿಯೆಸ್ಟ್ ಹೆಲ್ತ್

  • ಮೊಬೈಲ್ ಸ್ಕ್ರೀನ್ ಗಳಿಂದ ದೂರವಿರಿಸಿ ಮಕ್ಕಳು ಆಸಕ್ತಿಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದರಲ್ಲೇ ಗೆಲುವಿದೆ ಎಂದು ಸಾರಿದ ಸಮಾವೇಶ

ಬೆಂಗಳೂರು, ಶನಿವಾರ 14 ಡಿಸೆಂಬರ್ 2024: ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ‘ಡಿಜಿಟಲ್ ಡಿಟಾಕ್ಸ್’ ಎಂಬ ಥೀಮ್ ಅನ್ನು ಇಟ್ಟುಕೊಂಡು ಎರಡನೇ ಆವೃತ್ತಿಯ ಗೆಟ್ ಸೆಟ್, ಗ್ರೋ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಈ ಸಮಾವೇಶದಲ್ಲಿ ಪೋಷಕರು ಮತ್ತು ಮಕ್ಕಳು ಮೊಬೈಲ್ ಫೋನ್ ಸ್ಕ್ರೀನ್ ಗಳಿಂದ ದೂರವೇ ಇದ್ದು ವಿಶೇಷವಾಗಿ 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಗ್ಯಾಜೆಟ್ ಮುಕ್ತ ಕ್ಷಣಗಳನ್ನು ಒದಗಿಸುವ ಮೂಲಕ ಬಾಂಧವ್ಯ ಗಟ್ಟಿಗೊಳಿಸಲು ಕರೆ ನೀಡಿದೆ.

ಈ ಸಮಾವೇಶದಲ್ಲಿ ಪೌಷ್ಟಿಕತೆ, ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯ ಇತ್ಯಾದಿ ವಿಚಾರಗಳ ಕುರಿತು ಕುಟುಂಬಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಸಂವಾದಾತ್ಮಕ ಕಾರ್ಯಾಗಾರಗಳು, ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ, ಆಸಕ್ತಿಕರ ಶೈಕ್ಷಣಿಕ ಚಟುವಟಿಕೆಗಳು ನಡೆದುವು.

ಈ ಸಮಾವೇಶವನ್ನು ‘ಡಿಜಿಟಲ್ ಡಿಟಾಕ್ಸ್ ಎಡಿಷನ್’ ಎಂದೇ ಕರೆಯಲಾಗಿದ್ದು, ಇಲ್ಲಿ ಮೊಬೈಲ್ ನಿಂದ ದೂರವಿರುವ ಮಹತ್ವದ ಕುರಿತು ತಿಳಿಸುವ ಸಂವಾದ ಕಾರ್ಯಕ್ರಮ, ಆಸಕ್ತಿಕರ ಚಟುವಟಿಕೆಗಳನ್ನು ನಡೆಸಲಾಯಿತು. ಕುಟುಂಬಗಳು ತಂತ್ರಜ್ಞಾನ ಮುಕ್ತ ಕ್ಷಣಗಳನ್ನು ಕಳೆಯಲು ನೆರವಾಗುವ ಸಾಧನಗಳನ್ನು ಸಮಾವೇಶದಲ್ಲಿ ತಿಳಿಸಿಕೊಡಲಾಯಿತು. ಈ ಮೂಲಕ ಬಾಂಧವ್ಯ ಗಟ್ಟಿಗೊಳಿಸಲು, ಸಮತೋಲಿತವಾದ ಮತ್ತು ಗುಣಮಟ್ಟದ ಜೀವನ ಕಳೆಯಲು ಕರೆ ನೀಡಲಾಯಿತು. ಈ ಸಮಾವೇಶದಲ್ಲಿ 500 ಮಂದಿ ಭಾಗವಹಿಸಿದ್ದು, ಅವರಿಗೆ ಕುಟುಂಬ ಬಾಂಧವ್ಯ ಗಟ್ಟಿಗೊಳಿಸುವ ಅಭ್ಯಾಸಗಳನ್ನು, ತಂತ್ರಗಳನ್ನು ಹೇಳಿಕೊಡಲಾಯಿತು. ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡುವ ಆಸಕ್ತಿಕರ ಕಾರ್ಯಕ್ರಮಗಳು ನಡೆದುವು.

ಎರಡನೇ ಆವೃತ್ತಿಯ ಗೆಟ್ ಸೆಟ್ ಗ್ರೋ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಹ್ಯಾಪಿಯೆಸ್ಟ್ ಹೆಲ್ತ್ ನಾಲೆಡ್ಜ್ ಅಂಡ್ ಡಯಾಗ್ನೋಸ್ಟಿಕ್ಸ್‌ ನ ಸಿಇಓ ಶ್ರೀ ಅನಿಂಧ್ಯಾ ಚೌಧರಿ ಅವರು, “ಇದು ಕುಟುಂಬದ ವ್ಯಕ್ತಿಗಳು ಡಿಜಿಟಲ್ ಅಡೆತಡೆಗಳಿಲ್ಲದೆ ಪರಸ್ಪರರಿಗೆ ನೆರವಾಗುವುದನ್ನು ಮತ್ತು ಸಂತೋಷದಿಂದ ಇರುವುದನ್ನು ನೆನಪಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಈ ರೀತಿಯ ಕಾರ್ಯಕ್ರಮಗಳು ಕುಟುಂಬ ಬಾಂಧವ್ಯವನ್ನು ಜಾಸ್ತಿ ಮಾಡುವುದು ಮಾತ್ರವಲ್ಲದೆ ಬೆಳೆಯುತ್ತಿರುವ ಈ ಡಿಜಿಟಲ್ ಜಗತ್ತಿನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಉತ್ತಮ ತಂತ್ರಗಳನ್ನು, ಸಾಧನಗಳನ್ನು ಕಲಿಸಿಕೊಡುವ ಕೆಲಸ ಮಾಡಿದೆ. ಈ ಸಮಾವೇಶವು ಸಮತೋಲಿತ ಜೀವನಶೈಲಿಯನ್ನು ಪಾಲಿಸಲು ಸಣ್ಣದಾದರೂ ಅರ್ಥಪೂರ್ಣ ಹೆಜ್ಜೆಯನ್ನಿಡಲು ಹಲವು ಕುಟುಂಬಗಳಿಗೆ ಸ್ಫೂರ್ತಿ ನೀಡಲಿದೆ ಎಂದು ನಂಬಿದ್ದೇನೆ. ಇವತ್ತಿನ ವೇಗದ ಜಗತ್ತಿನಲ್ಲಿ ಬಾಂಧವ್ಯಗಳನ್ನು ಗಟ್ಟಿಗೊಳಿಸಲು ಮತ್ತು ಜೀವನ ಉತ್ತಮಗೊಳಿಸಲು ಪರಸ್ಪರ ಸಮಯ ಕೊಡುವುದು ಬಹಳ ಮುಖ್ಯವಾಗಿದೆ. ಈ ಸಮಾವೇಶವು ಸಣ್ಣ ಮತ್ತು ಅರ್ಥಪೂರ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಕುಟುಂಬಗಳಲ್ಲಿ ಹೇಗೆ ಸಂತೋಷ ಹೆಚ್ಚಿಸಬಹುದು ಎಂಬುದನ್ನು ತಿಳಿಸಿದೆ. ಜೊತೆಗೆ ನಮ್ಮ ದೈನಂದಿನ ಆಯ್ಕೆಗಳ ಕುರಿತು ಮರು ಯೋಚನೆ ಮಾಡಿಕೊಳ್ಳಲು ಪ್ರೇರೇಪಣೆ ನೀಡಿದೆ” ಎಂದು ಹೇಳಿದರು.

ಬೆಂಗಳೂರಿನ ಮದರ್‌ಹುಡ್ ಹಾಸ್ಪಿಟಲ್ಸ್‌ ನ ಪೀಡಿಯಾಟ್ರಿಶಿಯನ್ ಮತ್ತು ನಿಯೋನಾಟಾಲಜಿಸ್ಟ್ ಸೀನಿಯರ್ ಕನ್ಸಲ್ಟೆಂಟ್ ಮತ್ತು ವಿಭಾಗ ಮುಖ್ಯಸ್ಥ ಡಾ ಸಂತೋಷ್ ಕುಮಾರ್ ಅವರು, “ಈ ಡಿಜಿಟಲ್ ಜಗತ್ತಿನಲ್ಲಿ ಸ್ಕ್ರೀನ್ ಟೈಮ್ ಹೆಚ್ಚಾಗುತ್ತಿರುವುದನ್ನು ಸೂಕ್ತವಾಗಿ ನಿಭಾಯಿಸಲು ಮಕ್ಕಳು ಮತ್ತು ಪೋಷಕರ ಮಧ್ಯೆ ಉತ್ತಮ ಸಂವಹನ ಇರಬೇಕಾದುದು ಬಹಳ ಮುಖ್ಯ. ಗ್ಯಾಜೆಟ್‌ ಗಳು ಮಕ್ಕಳ ಸಂಕೇತ ಭಾಷಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ ಮತ್ತು ಮಕ್ಕಳ ಕಲ್ಪನಾ ಶಕ್ತಿಯನ್ನು ಕುಂದಿಸುತ್ತವೆ. ಅದರಿಂದ ಸಾಮಾಜಿಕ ಮತ್ತು ಭಾವನಾತ್ಮಕ ಅಭಿವೃದ್ದಿ ಹೊಂದುವ ವಿಚಾರದಲ್ಲಿ ಹಿನ್ನೆಡೆ ಉಂಟಾಗಬಹುದಾಗಿದೆ. ಪೋಷಕರು ಗ್ಯಾಜೆಟ್ ಗಳನ್ನು ಬದಿಗಿರಿಸುವ ಮೂಲಕ ಮತ್ತು ಮಕ್ಕಳ ಜೊತೆ ಅರ್ಥಪೂರ್ಣ ಸಂವಾದ ನಡೆಸುವ ಶ್ರೀಮಂತ ವಾತಾವರಣವನ್ನು ಸೃಷ್ಟಿಸುವ ಮೂಲಕ ಆರೋಗ್ಯಕರ ಮಾದರಿಯನ್ನು ಹಾಕಿಕೊಡಬಹುದು. ಕಥೆ ಹೇಳುವಿಕೆ, ಕಲೆಗಳ ಪರಿಚಯ ಅಥವಾ ಕೌಟುಂಬಿಕ ಚರ್ಚೆಗಳು ಮಕ್ಕಳನ್ನು ಭಾವನಾತ್ಮಕವಾಗಿ ಗಟ್ಟಿಗೊಳಿಸುತ್ತವೆ ಮತ್ತು ಅವರಿಗೆ ಸ್ಫೂರ್ತಿ ನೀಡುತ್ತವೆ. ಮುಖ್ಯವಾಗಿ, ಮಕ್ಕಳು ಹಿರಿಯರನ್ನು ಅನುಕರಿಸುತ್ತಾರೆ. ಹಾಗಾಗಿ ಸೂಕ್ತ ರೀತಿಯ ನಡವಳಿಕೆ ಬಹಳ ಮುಖ್ಯ. ಉತ್ತಮ ಸಂವಹನ ಮತ್ತು ಸಕಾರಾತ್ಮಕ ವರ್ತನೆಯಿಂದ ಮಕ್ಕಳ ಗ್ಯಾಜೆಟ್ ಆಸಕ್ತಿಯನ್ನು ಕಡಿಮೆ ಮಾಡಬಹುದು ಮತ್ತು ಅವರನ್ನು ಆಸಕ್ತಿಕರ ಚಟುವಟಿಕೆಗಳ ಕಡೆಗೆ ಗಮನ ಸೆಳೆಯಬಹುದು” ಎಂದು ಹೇಳಿದರು.

ರೇನ್‌ ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ ನ ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ ವಿಭಾಗದ ಕ್ಲಿನಿಕಲ್ ಡೈರೆಕ್ಟರ್ ಡಾ.ಅರವಿಂದ್ ಶೆಣೈ ಅವರು, “ಇವತ್ತಿನ ಮಕ್ಕಳು ವಾಸ್ತವ, ಕನಸು ಮತ್ತು ವರ್ಚುವಲ್ ಎಂಬ ಮೂರು ವಿಭಿನ್ನ ಜಗತ್ತಲ್ಲಿ ಅಡ್ಡಾಡುತ್ತಿದ್ದಾರೆ. ಸೈಬರ್ ಜಗತ್ತು ಹೊಸ ಅವಕಾಶಗಳನ್ನು ಒದಗಿಸುತ್ತಿದೆ. ಆದರೆ ವಾಸ್ತವ ಜಗತ್ತಿನ ಅನುಭವಗಳಿಂದ ದೂರ ಇರಿಸುವುದರಿಂದ ಮತ್ತು ನಿದ್ರೆಯನ್ನು ಕಸಿಯುವುದರಿಂದ ಜೀವನದ ಪ್ರಮುಖ ಹಂತಗಳನ್ನು ಅಡ್ಡಿಪಡಿಸುತ್ತದೆ. ಈ ಅಸಮತೋಲನವು ದೈಹಿಕ ಮತ್ತು ಭಾವನಾತ್ಮಕತೆ ಸಮಸ್ಯೆಗೆ ಕಾರಣವಾಗುತ್ತದೆ. ನಿದ್ರಾ ಹೀನತೆ, ಸ್ಥೂಲಕಾಯತೆ ಮುಂತಾದ ಸಮಸ್ಯೆ ಉಂಟಾಗುತ್ತದೆ. ಪೋಷಕರು ಡಿಜಿಟಲ್ ನಿಂದ ದೂರ ಇರುವ ಮೂಲಕ, ಮಕ್ಕಳನ್ನು ದೂರ ಇರುವಂತೆ ಮಾಡುವ ಮೂಲಕ ಅರು ವಾಸ್ತವ ಜಗತ್ತಿನ ಅನುಭವಗಳಿಗೆ ಎದುರಾಗುವಂತೆ ನೋಡಿಕೊಳ್ಳಬೇಕು. ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವ ಮೂಲಕ ಮತ್ತು ಡಿಜಿಟಲ್ ಜಗತ್ತಿನ ಹೊರಗೆ ಆಟವಾಡಲು ಅನುವು ಮಾಡಿಕೊಡುವ ಮೂಲಕ ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುವಂತೆ ಪೋಷಕರು ಮಾಡಬಹುದು” ಎಂದು ಹೇಳಿದರು.

ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ಪೀಡಿಯಾಟ್ರಿಕ್ ಆಪ್ತಮಾಲಜಿ, ಸ್ಟ್ರಾಬಿಸ್ಮಸ್ ಮತ್ತು ನ್ಯೂರೋ ಆಪ್ತಮಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ.ಸೌಮ್ಯ ಆರ್ ಅವರು, “ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ಮೂರು ವರ್ಷದೊಳಗಿನ ಮಕ್ಕಳು ದೀರ್ಘಕಾಲ ಡಿಜಿಟಲ್ ಸ್ಕ್ರೀನ್ ಗಳನ್ನು ನೋಡುವುದರಿಂದ ಅವರ ಕಣ್ಣಿನ ಆರೋಗ್ಯಕ್ಕೆ ತೊಂದರೆ ಆಗಬಹುದು. ಸಮೀಪದೃಷ್ಟಿ, ಕಣ್ಣಿನ ಸಮಸ್ಯೆ ಮತ್ತು ಕಣ್ಣಿನ ಒತ್ತಡ ಇತ್ಯಾದಿ ತೊಂದರೆಗಳು ಉಂಟಾಗಬಹುದು. ಹಾಗಾಗಿ ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು ಮತ್ತು ಹೊರಾಂಗಣದಲ್ಲಿ ಆಡುವಂತೆ ಮಾಡುವುದು ಬಹಳ ಮುಖ್ಯವಾಗಿದೆ. ಅದರಿಂದ ಕಣ್ಣಿನ ಆರೋಗ್ಯ ಹೆಚ್ಚುತ್ತದೆ. ತಲೆನೋವು ಅಥವಾ ಫೋಕಸ್ ಸಮಸ್ಯೆ ಇತ್ಯಾದಿಗಳನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು. ಪೋಷಕರು ಮಕ್ಕಳ ಡಿಜಿಟಲ್ ಅಭ್ಯಾಸಗಳನ್ನು ನಿಯಂತ್ರಿಸುವುದು ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸಾ ಸಲಹೆ ಪಡೆಯುವುದರಿಂದ ದೀರ್ಘ ಕಾಲದ ಸಮಸ್ಯೆ ಪರಿಹರಿಸಬಹುದು. ಇಂದು ನಿಮ್ಮ ಮಗುವಿನ ಕಣ್ಣುಗಳನ್ನು ರಕ್ಷಿಸುವುದರಿಂದ ಆರೋಗ್ಯಕರ ನಾಳೆಗೆ ದಾರಿ ಮಾಡಿಕೊಡಬಹುದು” ಎಂದು ಹೇಳಿದರು.

ಸಮಾವೇಶದಲ್ಲಿ ಮಕ್ಕಳು ಕುಟುಂಬ ಮತ್ತು ಸ್ನೇಹಿತರ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ಜುಂಬಾ ಡ್ಯಾನ್ಸ್, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಮಾವೇಶದಲ್ಲಿ ನಡೆದ ಕಾರ್ಯಕ್ರಮಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ:

• ಸಂವಾದಾತ್ಮಕ ಕಾರ್ಯಾಗಾರಗಳು: ಅಡುಗೆ ಕಾರ್ಯಕ್ರಮ, ಯೋಗ, ಕಲಾ ಪ್ರಾಜೆಕ್ಟ್ ಗಳ ಮೂಲಕ ಪೋಷಕರಿಗೆ ಪೌಷ್ಟಿಕತೆ, ಫಿಟ್‌ ನೆಸ್ ಮತ್ತು ಮಾನಸಿಕ ಸ್ವಾಸ್ಥ್ಯ ವಿಚಾರಗಳ ಮಹತ್ವ ತಿಳಿಸುವ ಕಾರ್ಯಕ್ರಮಗಳು ನಡೆದುವು.
• ಫ್ಯಾಮಿಲಿ ಆಕ್ಟಿವಿಟಿ ಝೋನ್ ಗಳು: ಪೋಷಕರು ಮತ್ತು ಮಕ್ಕಳು ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯಲು ಆನಂದಿಸಲು ವಿನ್ಯಾಸಗೊಳಿಸಲಾದ ವಿಶಿಷ್ಟ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
• ಸ್ಪರ್ಧೆಗಳು ಮತ್ತು ಸವಾಲುಗಳು: ಅತ್ಯಾಕರ್ಷಕ ಆಟಗಳು ಮತ್ತು ಚಟುವಟಿಕೆಗಳನ್ನು ನಡೆಸಲಾಗಿದ್ದು, ಆ ಮೂಲಕ ಟೀಮ್ ವರ್ಕ್, ಸೃಜನಶೀಲತೆ ಮತ್ತು ಆರೋಗ್ಯಕರ ಸ್ಪರ್ಧೆಯ ಮಹತ್ವ ತಿಳಿಸಿಕೊಡಲಾಯಿತು.

Leave a Reply

Your email address will not be published. Required fields are marked *