





ವೈಯುಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ ಉತ್ತಮ ಆರೋಗ್ಯದ ಮೂಲ ಸಾಧನಗಳು :ಡಾ.ಬಿ.ಆರ್.ಗುಲಾಟಿ
ಯಲಹಂಕ : ವೈಯಕ್ತಿಕ ಸ್ವಚ್ಛತೆ ಮತ್ತು ಪರಿಸರ ಸ್ಬಚ್ಛತೆ ಪ್ರತಿ ಮನುಷ್ಯನ ಉತ್ತಮ ಆರೋಗ್ಯದ ಮೂಲ ಸಾಧನಗಳಾಗಿದ್ದು, ಇವುಗಳನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ಎಂದು ಐಸಿಎಆರ್- ನಿವೇದಿ ಸಂಸ್ಥೆಯ ನಿರ್ದೇಶಕ ಡಾ.ಬಲದೇವ್ ರಾಜ್ ಗುಲಾಟಿ ತಿಳಿಸಿದರು.
ಯಲಹಂಕದ ರಾಮಗೊಂಡನಹಳ್ಳಿ ಯಲ್ಲಿರುವ ಐಸಿಎಆರ್-ನಿವೇದಿ ಸಂಸ್ಥೆಯ ವತಿಯಿಂದ ಡಿ.16ರಿಂದ 31ರವರೆಗೆ ಆಯೋಜಿಸಿದ್ದ ಸ್ವಚ್ಛತಾ ಪಖ್ವಾಡಾ(ಸ್ವಚ್ಛತೆಯ 15 ದಿನಗಳು)ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ‘ಸ್ವಚ್ಛತಾ ಪಖ್ವಾಡಾ’ ಅಭಿಯಾನದ ಅಂಗವಾಗಿ ನಿವೇದಿ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸ್ವಚ್ಛತೆಯನ್ನೇ ಪ್ರಮುಖ ಧ್ಯೇಯವಾಗಿ ಸಿಕೊಂಡು ಕಳೆದ ಹದಿನೈದು ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಶ್ರದ್ಧೆಯಿಂದ ಕೈಗೊಂಡಿದ್ದಾರೆ.
ಪ್ರಮುಖವಾಗಿ ನಿವೇದಿ ಸಂಸ್ಥೆಯ ಆವರಣ ಸ್ವಚ್ಛತೆ, ಆವರಣದಲ್ಲಿ ಸಾವಿರ ಸಸಿ ನೆಟ್ಟಿರುವುದು, ಕಚೇರಿ ಯಲ್ಲಿನ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಿರುವುದು, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್, ಸುಸ್ಥಿರ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರು, ಶಾಲಾ ಮಕ್ಕಳಿಗೆ ಕಿರುನಾಟಕ ಮತ್ತು ಚಿತ್ರಕಲೆಯ ಮೂಲಕ ಅರಿವು ಮೂಡಿಸಿರು ವುದು, ಅಡಿಗೆ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಅಭಿಯಾನ, ವಸತಿ ಕಾಲೋನಿ ಗಳು, ಶಾಲೆಗಳು ಮತ್ತು ಅಂಗನ ವಾಡಿಗಳಲ್ಲಿ ಶ್ರಮದಾನ ಮಾಡಿರು ವುದು, ಪ್ರತಿ ನಾಗರೀಕರು ಸ್ವಚ್ಛತೆ ಬಗ್ಗೆ ಬದ್ಧರಾಗುವಂತೆ ಮಾಡಲು ಸಹಿ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸ್ವಚ್ಛತಾ ಪಖ್ವಾಡಾ ಅಭಿಯಾನವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿ ಸಿರುವುದು ಸಂತೋಷ ಉಂಟು ಮಾಡಿದೆ ಎಂದರು.
ಇದೇ ವೇಳೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಸ್ಪರ್ಧಾ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಸಂಶೋಧನಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ನಿವೇದಿ ಸಂಸ್ಥೆಯ ವಿಜ್ಞಾನಿ ಗಳಾದ ಡಾ.ನಾರಾಯಣನ್, ಡಾ.ಚೇತನ್ ಕುಮಾರ್, ಡಾ.ಸತೀಶ್ ಗೌಡ, ಡಾ.ಪುನೀತ್ ರಾಜ್, ಡಾ.ಪ್ರೇಮ್ ಕಿಶೋರ್, ಸಂಶೋಧನಾ ವಿದ್ಯಾರ್ಥಿಗಳಾದ ಪವನ್ ಕಲ್ಯಾಣ್, ಮಹೇಶ್ ಕುಮಾರ್, ವರ್ಷಿತಾ, ಐಶ್ವರ್ಯ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu
Kogilu layout Yelahanka
9845085793