ಮಣಿಪಾಲ ಹೈಯರ್ ಎಜುಕೇಷನ್ ಅಕಾಡೆಮಿಯಲ್ಲಿ ಎರಡನೇ ಆವೃತ್ತಿಯ ಶಾಲಾ ಮಟ್ಟದ ಕ್ವಿಜ್ :

 ಯಲಹಂಕ : ಮಣಿಪಾಲ ಹೈಯರ್ ಎಜುಕೇಷನ್ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಬೆಂಗಳೂರು ಎರಡನೇ ಆವೃತ್ತಿಯ ಶಾಲಾ ಮಟ್ಟದ ಕ್ವಿಜ್ ಸ್ಪರ್ಧೆ MIQ 2.0 ವನ್ನು ‘ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್’ ಬೆಂಗಳೂರು(MAHE Blr) ಉಪಕುಲಪತಿಗಳಾದ ಪ್ರೊ.ಮಧು ವೀರರಾಘವನ್ ಉದ್ಘಾಟಿಸಿದರು.

ಶಾಲಾ ಮಕ್ಕಳಿಗೆ ಜ್ಞಾನಾರ್ಜನೆಯ ವೇಗವನ್ನು ಹೆಚ್ಚಿಸುವ ದಿಸೆಯಲ್ಲಿ ಆಯೋಜಿದ್ದ ಈ ಮಹತ್ವದ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 1,50,000 ರುಪಾಯಿಗಳು, ದ್ವಿತೀಯ ಸ್ಥಾನಕ್ಕೆ 1,00,000 ರುಪಾಯಿಗಳು ಮತ್ತು ತೃತೀಯ ಸ್ಥಾನಕ್ಕೆ 50,000 ರುಪಾಯಿಗಳು ಬಹುಮಾನ ನೀಡಲಾಯಿತು.

ಈ ಕ್ವಿಜ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 4,200ಕ್ಕೂ ಹೆಚ್ಚು ಶಾಲೆಗಳಿಂದ ಯುವ ಮನಸ್ಸುಗಳನ್ನು ಒಟ್ಟುಗೂಡಿಸಿ, ಬೌದ್ಧಿಕ ಸ್ಪರ್ಧೆಯ ವಾತಾವರಣ ಸೃಷ್ಟಿಸುವ ಕಾರ್ಯಕ್ರಮ ಇದಾಗಿತ್ತು.

ಮಹಾ ಅಂತಿಮ ಸುತ್ತನ್ನು ಕುಯಿಜ್ ಮಾಸ್ಟರ್ ವೇಂಕಟೇಶ್ ಎಸ್ (ವೆಂಕಿ) ಅವರ ನೇತೃತ್ವದಲ್ಲಿ ನಡೆಸಲಾಯಿತು, ಇದರಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ 1 ಮತ್ತು  ದಕ್ಷಿಣ 2 ಎಂಬ ಐದು ವಿಭಿನ್ನ ವಲಯಗಳಿಂದ ಬಂದ 6 ಅಂತಿಮ ಸ್ಪರ್ಧಾರ್ಹರು ತೀವ್ರ ಸ್ಪರ್ಧೆ ಎದುರಿಸಿದರು.

ಜೈಪುರದ ಕ್ಯಾಮ್ಬ್ರಿಡ್ಜ್ ಕೋರ್ಟ್ ಹೈ ಸ್ಕೂಲ್ ನ ಧಾರಿಯಾ ಮತ್ತು ವೈಭವ್ ರೈ ಅವರು ವಿಜೇತರಾಗಿ ಹೊರಹೊಮ್ಮಿ, ರೂ 1.5 ಲಕ್ಷ ನಗದು, ಪ್ರಶಸ್ತಿ ಫಲಕಗಳನ್ನು ಪಡೆದರು. ಎರಡನೇ ಸ್ಥಾನವನ್ನು ಕೊಚಿನ್ ನ ಅಸ್ಸಿಸಿ ವಿದ್ಯಾ ನಿಕೇತನ ಪಬ್ಲಿಕ್ ಸ್ಕೂಲ್ ನ ಜಿಯಾನ್ ಜೊಮಿ ಮತ್ತು ಅಖಿಲ್ ಕೃಷ್ಣನ್ ಯು.ಆರ್. ಪಡೆದುಕೊಂಡು, 1ಲಕ್ಷ ರು. ನಗದು ಪ್ರಶಸ್ತಿ ಫಲಕಗಳನ್ನು ಪಡೆದರು. ಮೂರನೇಸ್ಥಾನವನ್ನು ದೆಹಲಿ ಪಬ್ಲಿಕ್ ಸ್ಕೂಲ್ ನ ಪರ್ವ ಜೈನ್ ಮತ್ತು ಅರ್ಘ ಜೈನ್ ರೂ 50 ಸಾವಿರ ರು ನಗದು ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿಪಿಎಚ್.ಡಿ., ಮುಖ್ಯಾಧಿಕಾರಿ(ವಿದ್ಯಾರ್ಥಿ ಹಂಚಿಕೆ ಮತ್ತು ಮಾರುಕಟ್ಟೆ), ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಡಾ. ಆದಿತ್ಯ ಮೋಹನ್ ಜಾಧವ್, ಉಪನಿಬಂಧಕ ಡಾ.ರಾಘವೇಂದ್ರ ಪ್ರಭು ಸೇರಿದಂತೆ ಕ್ವಿಜ್ ನ ಆಯೋಜನಾ ವಿಭಾಗದ ಪ್ರತಿನಿಧಿಗಳಿದ್ದರು.

Leave a Reply

Your email address will not be published. Required fields are marked *