ಸೇಂಟ್ ಫಿಲೋಮಿನಾಸ್ ಇಂಗ್ಲಿಷ್ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ ಕಾರ್ಯಕ್ರಮ

ಯಲಹಂಕ. ಸುದ್ದಿ. ಯಲಹಂಕ ವಿದ್ಯಾರಣ್ಯಪುರ. ಸೇಂಟ್ ಫಿಲೋಮಿನಾಸ್ ಇಂಗ್ಲಿಷ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ಶಾಲೆಗೆ ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಆಗೂ ಶ್ರೀ ವೆಂಕಟೇಶ H S (ರಿಟೈರ್ಡ್ ISRO SCIENTIST) ಭಾಗವಹಿಸಿ ಶಾಲೆ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಿಗೆ ಪೋಷಕರಿಗೆ ಶುಭ ಕೋರುತ್ತಾ ಶಾಲೆಯ ಬಗ್ಗೆ ಮಾತನಾಡಿದರು ಮತ್ತು ಶ್ರೀ ಜಿ ಎನ್ ಸುರೇಶ್ ಪ್ರೆಸಿಡೆಂಟ್, ಶ್ರೀ ಚಂದ್ರಯ್ಯ ನಾಯ್ಡು ಸೆಕ್ರೆಟರಿ , ಶ್ರೀಮತಿ ಮಾಲತಿ N K ಪ್ರಾಂಶುಪಾಲರು , ಶ್ರೀ ಅವಿನಾಶ್ ನಾಯ್ಡು ಡೈರೆಕ್ಟರ್, ಶ್ರೀಮತಿ ಅನುಪಮಾ ಸುಧೀರ್ ಅಕಡೆಮಿಕ್ ಕೋಆರ್ಡಿನೇಟರ್ . ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಸಿಬ್ಬಂದಿ ವರ್ಗದವರು ಭಾಗವಹಿಸಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಬಂದಂತ ಗಣ್ಯರು ಅನೇಕ ರೀತಿಲಿ ಶಾಲೆಯ ಬಗ್ಗೆ ಮಕ್ಕಳ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ನಿಮ್ಮ ಕೈಯಲ್ಲಿದೆ ತಮ್ಮ ಮಕ್ಕಳನ್ನ ಉನ್ನತ ವಿದ್ಯಾಭ್ಯಾಸ ಮಾಡಿಸಿ ಎಂದು ಬಂದಂತಹ ಗಣ್ಯರು ಪೋಷಕರಿಗೆ ತಿಳಿಸಿದರು. ಮಕ್ಕಳಿಗೂ ಸಹ ಒಳ್ಳೆಯ ಬುದ್ಧಿವಾದ ಹೇಳಿದರು. ಬಂದಂತಹ ಗಣ್ಯರಿಗೆ ಸನ್ಮಾನ ಮಾಡಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ, ಸುಮನ್ಸ್ ಡ್ರೀಮ್ಸ್ ಇವೆಂಟ್ಸ್ & ಪ್ರಾಡಕ್ಷನ್ ಹೌಸ್ ವತಿಯಿಂದ ಮಕ್ಕಳಿಗೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತರಬೇತಿ ನೀಡಲಾಗಿತ್ತು. ಮಕ್ಕಳು ಬಹಳ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಟ್ಟರು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಆಯೋಜಿಸಿದ ಸುಮನ್ಸ್ ಡ್ರೀಮ್ಸ್ ಇವೆಂಟ್ಸ್ & ಪ್ರೊಡಕ್ಷನ್ ಹೌಸ್ ತಂಡದ ಮಾಲೀಕರಾದ ಶ್ರೀಯುತ ಹ್. ರವಿ ಕುಮಾರ್ (ಸುಮನ್) ಶಾಲೆಯ ಮುಖ್ಯಸ್ಥರಿಂದ ಸನ್ಮಾನಿಸಿ ಗೌರವರಿಸಿದ್ದರು. ಮತ್ತು ಟೀಮ್ ಹೆಚ್ ಆರ್ ಕೆ ಕೊರಿಯೋಗ್ರಾಫರ್ ತಂಡದವರು ಕೂಡ ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *