ಮಹಾಕುಂಭ ಆಚರಣೆ: ತಾಜಾತನ, ಉದ್ದೇಶ ಹಾಗೂ ಸಾಮಾಜಿಕ ಪ್ರಭಾವದ ಕೋಕ-ಕೋಲಾ ಇಂಡಿಯಾದ ಮಿಶ್ರಣ

ಬೆಂಗಳೂರು, 22 ಜನವರಿ, 2025: ಕೋಕ-ಕೋಲಾ ಇಂಡಿಯಾ, ತನ್ನ ಬಾಟ್ಲಿಂಗ್ ಭಾಗೀದಾರ ಸಂಸ್ಥೆ SLMG ಬೆವರೇಜಸ್ ಜೊತೆಜೊತೆಗೇ, ಸ್ಥಳೀಯ ಸಮುದಾಯಗಳಿಗಾಗಿ ಜಲೀಕರಣ, ಗ್ರಾಹಕ ಅನುಕೂಲತೆ ಹಾಗೂ ಆರ್ಥಿಕ ಅವಕಾಶಗಳ ಅಡಚಣೆರಹಿತ ಸಂಯೋಜನೆಯ ಮೂಲಕ ಜಗತ್ತಿನ ಅತಿದೊಡ್ಡ ಸಾಂಸ್ಕೃತಿಕ ಮೇಳಗಳ ಪೈಕಿ ಒಂದಾದ ಮಹಾಕುಂಭ 2025 ಅನುಭವವನ್ನು ವರ್ಧಿಸಲು ಸಜ್ಜಾಗಿದೆ. ಅರ್ಥಪೂರ್ಣ ಸಾಮಾಜಿಕ ಹಾಗೂ ಪರಿಸರ ಪ್ರಭಾವಗಳನ್ನು ಮುನ್ನಡೆಸುವ ಸಮಯದಲ್ಲೇ ಲಕ್ಷಾಂತರ ವೀಕ್ಷಕರಿಗೆ ಕಾರ್ಯಕ್ರಮವನ್ನು ವರ್ಧಿಸುವುದು ಸಂಸ್ಥೆಯ ಗುರಿಯಾಗಿದೆ.

ಮಹಾಕುಂಭ ಮೈದಾನಗಳಾದ್ಯಂತ ಪ್ರಬಲವಾದ ರೀಟೇಲ್ ಮತ್ತು ವಿತರಣಾ ಕಾರ್ಯಜಾಲವನ್ನು ಅನುಷ್ಠಾನಗೊಳಿಸುವ ಮೂಲಕ ಕೋಕ-ಕೋಲಾ ಇಂಡಿಯಾ ಮತ್ತು SLMG ಬೆವರೇಜಸ್, ತನ್ನ ವೈವಿಧ್ಯಮಯವಾದ ಹೈಡ್ರೇಶನ್(ಜಲೀಕರಣ) ಪೋರ್ಟ್‌ಫೋಲಿಯೋ ಆದ್ಯಂತ ಸುಲಭ ಪ್ರವೇಶ ಖಾತರಿಪಡಿಸುತ್ತಿಇದೆ. ಪ್ರಮುಖ ಸ್ಥಳಗಳಲ್ಲಿ ಇರಿಸಲಾದ ಕೂಲರ್ ಗಳು ಸ್ಥಳೀಯ ಮಾರಾಟಗಾರರ ಕಾರ್ಯಾಚರಣೆಯ ಹೈಡ್ರೇಶನ್ ಕಾರ್ಟ್‌ಗಳು ಹಾಗೂ ಫುಡ್ ಕೋರ್ಟ್ಸ್ ಮತ್ತು ರೀಟೇಲ್ ಔಟ್‌ಲೆಟ್‌ಗಳೊಂದಿಗೆ ಸಹಭಾಗಿತ್ವವು, ಸ್ಥಳೀಯ ಮಾರಾಟಗಾರರು, ತ್ಯಾಜ್ಯ ಕೆಲಸಗಾರರು, ಚಿಕ್ಕ ವ್ಯಾಪಾರಸಂಸ್ಥೆಗಳು ಮತ್ತು ಜೀವನೋಪಾಯಗಳಿಗೆ ಆಧಾರ ಒದಗಿಸಿ, ಒಟ್ಟಾರೆ ಅನುಭವವನ್ನು ವರ್ಧಿಸುವ ಸಮಯದಲ್ಲೇ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿವೆ.

SLMG ಬೆವರೇಜಸ್‌ನ ದಕ್ಷಿಣ ಯು.ಪಿ ವಲಯದ ವಲಯ ಅಧ್ಯಕ್ಷರಾದ ಲಬನ್ಯೇಂದು ಮಿಶ್ರ, “SLMG ಬೆವರೇಜಸ್‌ನಲ್ಲಿ ನಾವು, ಉತ್ತರ ಪ್ರದೇಶದಲ್ಲಿ ಈ ಐತಿಹಾಸಿಕ ಸಾಂಸ್ಕೃತಿಕ ಆಚರಣೆಯ ಸಂದರ್ಭದಲ್ಲಿ ಲಕ್ಷಾಂತರ ಮಂದಿಯನ್ನು ತಾಜಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದಕ್ಕೆ ಹರ್ಷಿಸುತ್ತೇವೆ. ಮೇಳದುದ್ದಕ್ಕೂ ಸಂದರ್ಶಕರಿಗಾಗಿ ಟಚ್‌ಪಾಯಿಂಟ್ಸ್ ಸೃಷ್ಟಿಸುವ ಮೂಲಕ ನಾವು ಗ್ರಾಹಕರಿಗೆ ಬೆವರೇಜ್(ಪಾನೀಯ) ಆಯ್ಕೆಗಳನ್ನು ಒದಗಿಸುತ್ತಿದ್ದೇವೆ.

ಹೈಡ್ರೇಶನ್ ಕಾರ್ಟ್‌ಗಳಿರಬಹುದು, ಉಜ್ವಲವಾದ ಫುಡ್ ಕೋರ್ಟ್ ಲಭ್ಯತೆ ಇರಬಹುದು ಅಥವಾ ಹಿಂದೆಂದೂ ಇರದ ಪ್ರಪ್ರಥಮವಾದ 100 ಡೋರ್ ಕೂಲರ್ ವಾಲ್ ಇರಬಹುದು, ಐತಿಹಾಸಿಕ 3-D OOH ಡಿಸ್ಪ್ಲೇಗಳು, ಸೆಲ್ಫೀ ವಲಯಗಳು ಮತ್ತು ಕೂಲರ್ ವಾಲ್‍ಗಳಿರಬಹುದು, ನಾವು ಸ್ಥಳೀಯ ಸ್ವಾದಗಳೊಡನೆ ಸಂಪರ್ಕ ಏರ್ಪಡಿಸಿಕೊಳ್ಳುತ್ತಲೇ ನಮ್ಮ ವೈವಿಧ್ಯಮಯ ಪೋರ್ಟ್‌ಫೋಲಿಯೋವನ್ನೂ ಜೀವಂತಗೊಳಿಸುತ್ತಿದ್ದೇವೆ. ನಾವು ರೀಟೇಲ್ ಅಸ್ತಿತ್ವವನ್ನು ಗರಿಷ್ಟಗೊಳಿಸಿ, ಸರಬರಾಜು ಸರಪಳಿ ಸಾಮರ್ಥ್ಯವನ್ನು ಖಾತರಿಪಡಿಸುತ್ತಿದ್ದೇವೆ. ಇದರಿಂದ, ಗ್ರಾಹಕರು ತಾಜಾ ಆಗಿದ್ದು ಜಲೀಕರಣ ಹೊಂದಿರುವ ಸಮಯದಲ್ಲೇ, ಸ್ಥಳೀಯ ವ್ಯಾಪಾರಸ್ಥರು ಮತ್ತು ವೈಭವೋಪೇತ ಕಾರ್ಯಕ್ರಮದ ಒಟ್ಟಾರೆ ಯಶಸ್ಸಿಗೆ ಆಧಾರ ಒದಗಿಸಿ ಕೊಡುಗೆ ಸಲ್ಲಿಸುತ್ತಿದ್ದೇವೆ” ಎಂದರು.

ಕೋಕ-ಕೋಲಾ ಇಂಡಿಯಾ, ಸ್ಥಳೀಯ ಮಾರಾಟಗಾರರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ, ತ್ಯಾಜ್ಯ ನಿರ್ವಹಣಾ ಉಪಕ್ರಮಗಳೊಡನೆ ದಿನಗೂಲಿ ಕಾರ್ಮಿಕರಿಗೆ ಬೆಂಬಲ ಒದಗಿಸುವ ಮೂಲಕ ಹಾಗೂ ಆಹಾರ ಮತ್ತು ಪಾನೀಯ ರೀಟೇಲರ್ಗಳ ವ್ಯಾಪಾರ ಬೆಳವಣಿಗೆಯನ್ನು ಮುನ್ನಡೆಸುವ ಸಮಯದಲ್ಲೇ ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ಸಕ್ರಿಯ ಶಕ್ತಿ ಒದಗಿಸಿ, ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನು ಪೋಷಿಸಲಿದೆ.

ಮಹಾಕುಂಭ 2025ದಲ್ಲಿ ಕೋಕ-ಕೋಲಾ ಇಂಡಿಯಾದ ತೊಡಗಿಕೊಳ್ಳುವಿಕೆಯ ಪ್ರಮುಖಾಂಶಗಳು:
• ತಾಜಾತನದ ಮೂಲಕ ಸಮುದಾಯಗಳ ಸಂಪರ್ಕ : ಕೋಕ-ಕೋಲಾ, ಥಮ್ಸ್ ಅಪ್, ಸ್ಪ್ರೈಟ್, ಮಾಜಾ, ಫಾಂಟಾ, ಕಿನ್ಲಿ, ಮಿನಿಟ್ ಮೇಡ್, ಮತ್ತು ಚಾರ್ಜ್ಡ್ (Coca-Cola, Thums Up, Sprite, Maaza, Fanta, Kinley, Minute Maid, and Charged)ಒಳಗೊಂಡಂತೆ ವಿವಿಧ ಪಾನೀಯ ಪೋರ್ಟ್‌ಫೋಲಿಯೋದೊಮ್ದಿಗೆ ಲಕ್ಷಾಂತರ ಸಂದರ್ಶಕರನ್ನು ತಾಜಗೊಳಿಸಿ ಅವರೊಡನೆ ಸಂಪರ್ಕ ಏರ್ಪಡಿಸಿಕೊಳ್ಳುವುದು ನಮ್ಮ ಗುರಿ. ಹೈಡ್ರೇಶನ್ ಕಾರ್ಟ್‌ಗಳು ಮತ್ತು ಫುಡ್ ಕೋರ್ಟ್ ಕ್ರಿಯಾಶೀಲತೆ ಮೂಲಕ ಉತ್ಪನ್ನಗಳು ಪ್ರತಿ 400 ಮೀಟರ್ಗೆ ಲಭ್ಯವಿದ್ದು, ಹಬ್ಬದಾಚರಣೆಯುದ್ದಕ್ಕೂ ಸಂದರ್ಶಕರು ತಾಜಾ ಆಗಿರುವುದನ್ನು ಖಾತರಿಪಡಿಸುತ್ತವೆ.
• ಮಹಾಕುಂಭ ವಿಶೇಷ ಆವೃತ್ತಿ ಪ್ಯಾಕೇಜಿಂಗ್ : ಭಾರತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವ ಸಲುವಾಗಿ ನಾವು ಆಯ್ದ ಪಾನೀಯಗಳಿಗೆ ಮಹಾಕುಂಭ-ಥೀಮ್‌ನ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದೇವೆ. ಈ ವಿಶೇಷ ವಿನ್ಯಾಸಗಳು, ಸ್ಮರಣಸಂಚಿಕೆಗಳಾಗಿಯೂ ಇದ್ದು, ಸಂಪ್ರದಾಯವನ್ನು ಕೋಕ-ಕೋಲಾದ ಜಾಗತಿಕ ಆಕರ್ಷಣೆಯೊಡನೆ ಮೇಳೈಸಿವೆ.
• ತಲ್ಲೀನ ಕ್ರಿಯೆಗಳು : ಸಂದರ್ಶಕರು, ಹೈಡ್ರೇಶನ್ ಕಾರ್ಟ್, ಉಜ್ವಲವಾದ ಫುಡ್ ಕೋರ್ಟ್ ಕ್ರಿಯಾಶೀಲತೆ, ಐತಿಹಾಸಿಕ 3-D OOH ಡಿಸ್ಪ್ಲೇಗಳು, ಸೆಲ್ಫೀ ವಲಯಗಳು ಮತ್ತು ಕೂಲರ್ ವಾಲ್‍ಗಳು ಮುಂತಾದ ವಿಶಿಷ್ಟ ಅನುಭವಗಳಲ್ಲಿ ತೊಡಗಿಕೊಳ್ಳಬಹುದು. ಈ ಕ್ರಿಯೆಗಳು, ಹಬ್ಬದ ವಾತಾವರಣವನ್ನು ಹೆಚ್ಚಿಸುವುದರ ಜೊತೆಜೊತೆಗೇ ಕೋಕ-ಕೋಲಾ ಪಾನೀಯಗಳನ್ನು ಕುಂಭದ ವೈವಿಧ್ಯಮಯ ಅಡುಗೆ ಸ್ವಾದಗಳೊಡನೆ ನಿಖರವಾಗಿ ಹೊಂದಿಕೊಳ್ಳುವುದನ್ನೂ ಪ್ರದರ್ಶಿಸುತ್ತವೆ.
• ಮೂಲದಲ್ಲಿ ಧೀರ್ಘಸ್ಥಾಯಿತ್ವ: ಸದ್ಯ ನಡೆಯುತ್ತಿರುವ ಕುಂಭ ಮೇಳದಲ್ಲಿ, ಕೋಕ-ಕೋಲಾ ಇಂಡಿಯಾ, ಪ್ರಮುಖ ಸ್ಥಳಗಳಲ್ಲಿ, PET ತ್ಯಾಜ್ಯ ಮರುಬಳಕೆಗಾಗಿ ರಿವರ್ಸ್ ವೆಂಡಿಂಗ್ ಮೆಶೀನ್‌ಗಳು(RVM), ನೈರ್ಮಲ್ಯ ಕಾರ್ಮಿಕರು ಹಾಗೂ ಸ್ವಯಂಸೇವಕರಿಗೆ ಮರುಬಳಕೆ ಮಾಡಿದ PET ಜಾಕೆಟ್‌ಗಳು ಹಾಗೂ ಸಂಪೂರ್ಣವಾಗಿ ಮರುಬಳಕೆ ಮಾಡಿದ ಬಹುಪದರುಗಳ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಿದ ಮಹಿಳೆಯರ ವಸ್ತ್ರಬದಲಾವಣೆ ಕೋಣೆಗಳ ಮೂಲಕ ದೀರ್ಘಸ್ಥಾಯಿತ್ವಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.

Leave a Reply

Your email address will not be published. Required fields are marked *