












ಆಕ್ಸ್ಫರ್ಡ್ ಶಾಲೆಯ ಅರ್ಥಪೂರ್ಣ ಶೈಕ್ಷಣಿಕ ಪ್ರವಾಸ
ಯಲಹಂಕದ ಕೋಗಿಲಿನ ಆಕ್ಸ್ಫರ್ಡ್ ಆಂಗ್ಲ ಶಾಲೆ, ಜನವರಿ 23 ಗುರುವಾರ ಹಾಗೂ 24 ಶುಕ್ರವಾರದಂದು ಒಂದ ರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಂಡಿತ್ತು.
ಈ ಸಂಬಂಧ ಬೆಂಗಳೂರಿನ ಜಿ.ಕೆ.ವಿ.ಕೆ ಬಳಿ ಇರುವ “ರಂಗೋಲಿ ಗಾರ್ಡನ್” ಗೆ (ಗ್ರಾಮೀಣ ಬದುಕಿನ ಮಾದರಿ) ವಿದ್ಯಾರ್ಥಿಗಳು ಭೇಟಿ ಕೊಟ್ಟಿದ್ದರು.
ಈ ಪ್ರವಾಸ ಮಕ್ಕಳಿಗೆ ಗ್ರಾಮೀಣ ಬದುಕಿನ ಚಿತ್ರಣವನ್ನು ಯಥಾವತ್ತಾಗಿ ಬಿಂಬಿಸು ವುದರೊಂದಿಗೆ ಮಕ್ಕಳ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು ಎಂದರೆ ತಪ್ಪಾಗಲಾರದು.
ದನ ಕರುಗಳ ಹಿಂಡು, ಅವುಗಳ ಪೋಷಣೆ, ದನ ಕಾಯುವ ಹುಡುಗರು, ವಿವಿಧ ರೀತಿಯ ಪ್ರಾಣಿಗಳು ನಾಯಿ ,ಕತ್ತೆ ,ಹಸು ,ಕುರಿ , ಮೇಕೆ ಇವುಗಳ ಮಾದರಿಗಳು ಅತ್ಯಂತ ಸುಂದರ ಹಾಗೂ ನೈಜವಾಗಿ ತೋರುತ್ತಿದ್ದವು. ಅಲ್ಲದೆ, ಮನೆಗಳ ವಿವಿಧ ಮಾದರಿಗಳು, ನಾನಾ ಜನಾಂಗಗಳು ಅವುಗಳ ಕಸುಬುಗಳನ್ನು ಬಿಂಬಿಸುವ ಬಡಗಿ, ಕಮ್ಮಾರ, ನೇಕಾರ, ಅಗಸ , ಕುಂಬಾರ ಬಳೆಗಾರ, ಮೀನುಗಾರ, ಸುಣ್ಣದಕಲ್ಲು ಸುಡುವ ಜನಾಂಗ ಮುಂತಾದ ಮಾದರಿಗಳು ಒಂದಕ್ಕೊಂದು ಭಿನ್ನವಾಗಿ ತೋರುತ್ತಿದ್ದವು. ಇದರೊಂದಿಗೆ ಕಂಬಳಿ ನೇಯ್ಗೆ ಯ ಮಗ್ಗದ ನಾನಾ ರೀತಿಗಳು, ಚಾಪೆ ಎಣಿಕೆ ಮಾದರಿಗಳು ಕಲಾಕೃತಿಗಳು ಅದ್ಭುತವಾಗಿದ್ದವು.
ನಗರೀಕರಣದ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಕೆಸರುಗದ್ದೆ ಓಟ ,ಲಗೋರಿ, ಚಿನ್ನಿದಾಂಡು, ಕಣ್ಣಾ ಮುಚ್ಚಾಲೆ, ಕುಸ್ತಿ ಮುಂತಾದ ಆಟಗಳ ಮಾದರಿಗಳು ಮಕ್ಕಳ ಕುತೂಹಲ ಬರಿತ ಕಣ್ಣುಗಳನ್ನು ಅರಳಿಸಿದ್ದವು.
ಒಟ್ಟಾರೆ ನಾಗರಿಕತೆಯನ್ನು ತಬ್ಬಿಕೊಳ್ಳುವ
ಭರದಲ್ಲಿ. ಕ್ಷೀಣವಾಗುತ್ತಿರುವ ಗ್ರಾಮೀಣ ಪ್ರದೇಶದ ಜನರ ನಾಡು ನುಡಿ ಕಸಬುಗಳು ಬದುಕಿನ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗುವುದರೊಂದಿಗೆ ಈ ಒಂದು ಶೈಕ್ಷಣಿಕ ಪ್ರವಾಸಕ್ಕೊಂದು ಅರ್ಥ ನೀಡಿತ್ತು ಎಂದರೆ ತಪ್ಪಾಗಲಾರದು.
[
— ಎ. ವಿ ಚಂದ್ರಕಲಾ. ಕೋಲಾರ