

ಕೋಕ್ ಸ್ಟುಡಿಯೋ ಭಾರತ್ ಸೀಸನ್ 3, ಒಂದು ಐಕಾನಿಕ್ ಲೈನ್-ಅಪ್ ನಿಮ್ಮ ಮುಂದೆ ಬರಲು ಸಜ್ಜಾಗಿದೆ – ಡ್ರಾಪ್‌ಗೆ ಸಿದ್ಧರಾಗಿ!
ಬೆಂಗಳೂರು, ಫೆಬ್ರವರಿ 18, 2025: ಕೋಕ್ ಸ್ಟುಡಿಯೋ ಭಾರತ್, ಭಾರತದ ಅತ್ಯಂತ ಪ್ರಭಾವಿ ಧ್ವನಿಗಳು ಮತ್ತು ವೈವಿಧ್ಯಮಯ ಸಂಗೀತ ಪ್ರಭಾವಗಳನ್ನು ಒಟ್ಟುಗೂಡಿಸುವ ಹೊಚ್ಚ ಹೊಸ ಸೀಸನ್ 3 ರೊಂದಿಗೆ ಮರಳಲು ಸಜ್ಜಾಗಿದೆ. ಕೋಕ್ ಸ್ಟುಡಿಯೋ ಭಾರತ್, ಸಾಂಪ್ರದಾಯಿಕ ಕಥೆಗಳನ್ನು ಸಮಕಾಲೀನ ಬೀಟ್ ಗಳೊಂದಿಗೆ ಬೆರೆಸುವ, ಜೆನ್-ಜೆಡ್ ಗೆ ಮೆಚ್ಚುಗೆಯಾಗುವ ಸಾಂಸ್ಕೃತಿಕ ಅನುಭವಗಳನ್ನು ಸೃಷ್ಟಿಸುವಲ್ಲಿ ಹೆಸರುವಾಸಿಯಾಗಿದೆ. ಈ ಸೀಸನ್, ಭಾರತದ ಶ್ರೀಮಂತ ಸೋನಿಕ್ ಪರಂಪರೆಯ ಅದ್ಭುತವಾದ ಮರುಕಲ್ಪನೆಯಾಗಿದ್ದು, ಜಾನಪದ ಸಂಪ್ರದಾಯಗಳನ್ನು ಸಮಕಾಲೀನ ಧ್ವನಿಗಳೊಂದಿಗೆ ಸುಮಧುರವಾಗಿ ಬೆರೆಸುತ್ತ ಮರೆಯಲಾಗದಂತಹ ಸಂಗೀತಾನುಭವವನ್ನು ನೀಡುತ್ತದೆ. ಪಂಜಾಬ್‌ನ ಹೃದಯಸ್ಪರ್ಶಿ ಬೀಟ್‌ಗಳಿಂದ ಹಿಡಿದು ಈಶಾನ್ಯದ ಆತ್ಮಸ್ಪರ್ಶಿ ಮಾಧುರ್ಯದವರೆಗೆ, ಕೋಕ್ ಸ್ಟುಡಿಯೋ ಭಾರತ್ ಸಂಗೀತದ ಮೂಲಕ ಕಥೆ ಹೇಳುವ ಪ್ರಕಾರದ ಗಡಿಗಳನ್ನು ವಿಸ್ತರಿಸುತ್ತಲೇ ಇದೆ., ಲೆಜೆಂಡರಿ ಪರಿಣತರ ಜೊತೆ, ಬೆಳೆಯುತ್ತಿರುವ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡುತ್ತಿದೆ.
ಸೀಸನ್ 3, ಅಸಾಧಾರಣ ಧ್ವನಿಗಳ ಮಿಶ್ರಣವನ್ನು ಒಳಗೊಂಡಿರುತ್ತದೆ. ಪ್ರತಿಯೊಂದೂ ತಮ್ಮ ಪ್ರದೇಶಗಳ ಆತ್ಮವನ್ನು ಪ್ರತಿನಿಧಿಸುತ್ತದೆ. ಈ ಸಾಲಿನಲ್ಲಿ ಭಾಗವಹಿಸುತ್ತಿರುವವರು: ವಿಶಾಲ್ ಮಿಶ್ರಾ, ಮಾಲಿನಿ ಅವಸ್ತಿ, ಶಾಲ್ಮಲಿ ಖೋಲ್ಗಡೆ, ಸಂತೋಷ್ ನಾರಾಯಣನ್, ಶಂಕುರಾಜ್ ಕೊನ್ವಾರ್, ದಂಡಾ ನ್ಯೋಲಿವಾಲಾ, ಪ್ರತೀಕ್ಷಾ ಶ್ರೀವಾಸ್ತವ, ಆಫ್ರೋ, ಥಿಯಾರಾಜ್‌ಎಕ್ಸ್ಟಿಟಿ, ಗುಲಾಬ್ ಸಿಧು, ಜಸ್ಸಾ ಧಿಲ್ಲೋನ್, ರಾಗಿಂದರ್, ಆದಿತ್ಯ ಸಿದ್ಧಾಬಂಥಿ ಅಗ್ಮಿತ್, ಮಧು ಸಿದ್ಧಾರ್‌ಬಂಥಿ ಅಗ್ಮಿತ್ ಜಯಮೂರ್ತಿ, ಎಕ್ಸ್ ವಿರ್ ಗ್ರೆವಾಲ್, ದಾಬ್ಜಿ, ಎಸ್‌ವಿಡಿಪಿ, ಮೆಹಕ್ ಸಿಧು, ಭಾರ್ಗವ್ ಪುರೋಹಿತ್, ಮತ್ತು ಇಂಡಿಯನ್ ಕೊರಲ್ ಎನ್‌ಸೆಂಬಲ್. ಈ ಸೀಸನ್ ನಲ್ಲಿ ಪ್ರತಿಯೊಂದು ಟ್ರ್ಯಾಕ್ ಭಾರತದ ವಿಶಾಲವಾದ ಸಂಗೀತ ಪರಂಪರೆಗೆ ಸಲ್ಲಿಸುವ ಗೌರವವಾಗಿರುತ್ತದೆ. ಅವಧಿ ಜಾನಪದ, ಪಂಜಾಬಿ ಹಿಪ್-ಹಾಪ್, ಅಸ್ಸಾಮಿ ಪರ್ಯಾಯ ರಾಕ್, ತಮಿಳು ಜಾನಪದ, ಇತ್ಯಾದಿಗಳು ಇರಲಿವೆ.
ಜನಪ್ರಿಯ ಗಾಯಕ ವಿಶಾಲ್ ಮಿಶ್ರಾ, “ಕೋಕ್ ಸ್ಟುಡಿಯೋ ಭಾರತ್, ಯಾವಾಗಲೂ ಭಾರತದ ವೈವಿಧ್ಯಮಯ ಸಂಗೀತದ ವಿವಿಧ ಆಯಾಮಗಳನ್ನು ಪ್ರದರ್ಶಿಸುವ ಒಂದು ವೇದಿಕೆಯಾಗಿದೆ. ಇಲ್ಲಿ ನನ್ನ ಧ್ವನಿಯನ್ನು ಸಹ ನೀಡಲು ನಾನು ಉತ್ಸುಕನಾಗಿದ್ದೇನೆ ಮತ್ತು ವಿವಿಧ ಪ್ರಕಾರಗಳ ಸಮ್ಮಿಳನ ಹೇಗೆ ಪ್ರೇಕ್ಷಕರಿಗೆ ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತದೆ ಎಂಬುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ.”
ಕೋಕಾ-ಕೋಲಾ ಇಂಡಿಯಾ ಮತ್ತು ನೈಋತ್ಯ ಏಷ್ಯಾದ ಉಪಾಧ್ಯಕ್ಷೆ ಗ್ರೀಷ್ಮಾ ಸಿಂಗ್: “ಕೋಕ್ ಸ್ಟುಡಿಯೋ ಭಾರತ್, ಮೂಲ ಉದ್ದೇಶ ಕಥೆ ಹೇಳುವಿಕೆ ಮತ್ತು ಸಂಸ್ಕೃತಿಯ ಪ್ರದರ್ಶನ – ವಿಶಿಷ್ಟ ಮತ್ತು ಗುರುತಿಸಬಹುದಾದ ಧ್ವನಿ ಮತ್ತು ದೃಶ್ಯ ಗಳ ಮೂಲಕ ಸಾಂಪ್ರದಾಯಿಕತೆ ಮತ್ತು ಆಧುನಿಕತೆ ಎರಡಕ್ಕೂ ಒಂದು ಸೇತುವೆ ನಿರ್ಮಿಸುತ್ತದೆ. ಭಾರತದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಕಲಾವಿದರಿಂದ ಆರಿಸಲ್ಪಟ್ಟ ಗುಂಪಿನ ಸುತ್ತಲೂ ರೂಪುಗೊಂಡಿದೆ ಈ ಸೀಸನ್ 3. ಸಂಗೀತದ ಶ್ರೀಮಂತ ಪ್ರಕಾರಗಳನ್ನು ಒಳಗೊಂಡಿರುವ ವಿಶಿಷ್ಟ ಧ್ವನಿಗಳಿಗೆ ಹೊಸ ಯುವ ನೋಟವನ್ನು ತರುತ್ತದೆ” ಎಂದು ಹೇಳಿದರು.
ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್, ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ದೇವರಾಜ್ ಸನ್ಯಾಲ್ , “ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್‌ನಲ್ಲಿ, ನಾವು ಯಾವಾಗಲೂ ನಮ್ಮ ಸಂಗೀತ ಪ್ರದರ್ಶನಕ್ಕೆ ಭಾರತವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನೆ ನಮ್ಮ ವೇದಿಕೆ ಎಂದು ಪರಿಗಣಿಸಿದ್ದೇವೆ. ಪ್ರಪಂಚದಾದ್ಯಂತದ ಅತ್ಯಂತ ಸುಂದರವಾದ ಸಂಸ್ಕೃತಿಗಳ ಧ್ವನಿಗಳು ಮತ್ತು ಮಾಧುರ್ಯಗಳನ್ನು ಸೇರಿಸಿದಾಗ ಜಾಗತಿಕ ಧ್ವನಿ ಹುಟ್ಟಿಕೊಳ್ಳುತ್ತದೆ. ಸೀಸನ್ 3, ಇಂದಿನ ಯುವ ಮತ್ತು ನಿರ್ಭೀತ ಧ್ವನಿಗಳ ಅತ್ಯಂತ ಉನ್ನತ ಸಾಂಸ್ಕೃತಿಕ ಅಂಶವನ್ನು ಹೊಂದಿರುವುದರಿಂದ “ಕೋಕ್ ಸ್ಟುಡಿಯೋ ಭಾರತ್” ಬಗ್ಗೆ ನಾವು ಬಹಳ ಉತ್ಸುಕರಾಗಿದ್ದೇವೆ. ನಮ್ಮ ಶ್ರೇಷ್ಠ ಪರಂಪರೆಯ ಕಲಿಕೆ ಮತ್ತು ಕಥಾ ನಿರೂಪಣೆ ಎರಡೂ ಇಲ್ಲೆ ಮೇಳೈಸಲಿವೆ. ಇದು ವೇದಿಕೆಯ ವಿಕಾಸದಲ್ಲಿನ ಒಂದು ರೋಮಾಂಚಕಾರಿ ಅಧ್ಯಾಯವಾಗಿದೆ.”
ಖ್ಯಾತ ಜಾನಪದ ದಂತಕಥೆ ಮಾಲಿನಿ ಅವಸ್ಥಿ: “ಜಾನಪದ ಸಂಗೀತ ಯಾವಾಗಲೂ ನಮ್ಮ ಇತಿಹಾಸ, ನಮ್ಮ ಪ್ರದೇಶ, ನಮ್ಮ ಜನರ ಆತ್ಮವನ್ನು ಹೊತ್ತಿರುವುದರಿಂದ ಅದು ಯಾವಾಗಲೂ ಹಳೆಯ ನೆನಪುಗಳನ್ನು ನೀಡುವ ಸಂಗೀತವಾಗಿರುತ್ತದೆ. ಕೋಕ್ ಸ್ಟುಡಿಯೋ ಭಾರತ್ ಮೂಲಕ ಆಳವಾಗಿ ಬೇರೂರಿರುವ ಸಂಬಂಧಗಳಿರುವ ಈ ಕಾಲಾತೀತ ಧ್ವನಿಗಳನ್ನು ಹೊಸ ಪೀಳಿಗೆಗೆ ಮರುಪರಿಚಯಿಸುತ್ತಿದ್ದೇವೆ; ಸಂಪ್ರದಾಯ ಮತ್ತು ನಾವೀನ್ಯತೆ ಎರಡನ್ನೂ ಹೇಗೆ ಅದ್ಭುತವಾಗಿ ಒಗ್ಗೂಡಿಸಿ ಪರಿಪೂರ್ಣ ಸಾಮರಸ್ಯದೊಂದಿಗೆ ಹಾಡಬಹುದು ಎಂಬುದನ್ನು ಸಾಬೀತುಪಡಿಸುತ್ತಿದ್ದೇವೆ”.
ಅದ್ಭುತ ಸಂಗೀತ ಸಂಯೋಜನೆ ಮತ್ತು ಹೊಸ ಸಂಯೋಜನೆಗಳೊಂದಿಗೆ, ಕೋಕ್ ಸ್ಟುಡಿಯೋ ಭಾರತ್ ಸೀಸನ್ 3 ಮತ್ತೊಮ್ಮೆ ಭಾರತದ ಸಂಗೀತದ ಪ್ರಭಾವಕ್ಕೆ ಹೊಸ ವ್ಯಾಖ್ಯಾನ ಬರೆಯಲು ಸಜ್ಜಾಗಿದೆ. ಕೇಳಲು ಸಿದ್ಧವಾಗಿರಿ: ಮೊದಲ ಟ್ರ್ಯಾಕ್ ಡ್ರಾಪ್ ಫೆಬ್ರವರಿ 21 ರಂದು!