





ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸರೋಜಮ್ಮ, ಉಪಾಧ್ಯಕ್ಷರಾಗಿ ಸಿ.ಭಾಸ್ಕರ್ ಆಯ್ಕೆಯಾಗಿದ್ದಾರೆ.
ಸಹಕಾರ ಸಂಘದಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 7 ಸದಸ್ಯರ ಬೆಂಬಲದೊಂದಿಗೆ ಕ್ರಮವಾಗಿ ಅಧ್ಯಕ್ಷರಾಗಿ ಸರೋಜಮ್ಮ, ಉಪಾಧ್ಯಕ್ಷರಾಗಿ ಸಿ.ಭಾಸ್ಕರ್ ಆಯ್ಕೆಯಾದರು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸಹಕಾರ ಸಂಘದ ನಿರ್ದೇಶಕರು, ಮುಖಂಡರು, ಬ್ಯಾಟರಾಯನಪುರ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಎನ್.ಶ್ರೀನಿವಾಸಯ್ಯ, ಮುಖಂಡರಾದ ಗೌರೀಶ್, ಹನುಮಂತಿ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಎ.ಮುನಿರಾಜು, ಬಿ.ಕೆ.ಮಂಜುನಾಥಗೌಡ, ನಿರ್ದೇಶಕರಾದ ಜೋಡಿದಾರ್ ಹರೀಶ್, ಶ್ರೀನಾಥ್, ಅಶೋಕ್ ಗೌಡ, ಮುನೇಗೌಡ, ಮಂಜುನಾಥ್ ರೆಡ್ಡಿ ಇನ್ನಿತರರಿದ್ದರು.