ರಾಜಾನುಕುಂಟೆ ಗ್ರಾ.ಪಂ. ನೂತನ ಅಧ್ಯಕ್ಷರ ಪದಗ್ರಹಣ :

ಯಲಹಂಕ : ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾ.ಪಂ. ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು‌ ಪಾಲ್ಗೊಂಡು ನೂತನ ಅಧ್ಯಕ್ಷೆ ಭವಾನಿ ಶ್ರೀನಿವಾಸ್ ಅವರಿಗೆ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಶಾಸಕರು ‘ನೂತನ ಅಧ್ಯಕ್ಷೆ ಭವಾನಿ ಶ್ರೀನಿವಾಸ್ ಅವರು ಗ್ರಾ.ಪಂ.ಯ ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸರ್ವಾಂಗೀಣ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುವಂತಾಗಲಿ ಮತ್ತು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಉಪಾಧ್ಯಕ್ಷ ಇಟಗಲ್ ಪುರ ಮೋಹನ್, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ಗ್ರಾ.ಪಂ.ಸದಸ್ಯರಾದ ಆರ್.ಡಿ. ರಾಜಣ್ಣ, ಆರ್.ಎಚ್. ಹನುಮೇಗೌಡ, ಸಾದೇನಹಳ್ಳಿ ಚಿಕ್ಕಣ್ಣ, ಸಂತೋಷ್, ವೆಂಕಟೇಶ್, ಸುಜಾತಮ್ಮ, ಮುತ್ತುವೇಣು, ಸೌಮ್ಯ ಗೋವಿಂದರಾಜು, ಸುಜಾತಮ್ಮ, ಮಮತಾ ರಮೇಶ್, ಬೈರಮ್ಮ, ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *