ಯಲಹಂಕ ಕ್ಷೇತ್ರ ಬಿಜೆಪಿ ವತಿಯಿಂದ ಯಲಹಂಕ ಹೋಲಿ‌ ಉತ್ಸವ :
ಕಾರ್ಯಕರ್ತರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದ ಶಾಸಕ ಎಸ್ ಆರ್ ವಿಶ್ವನಾಥ್
ಯಲಹಂಕ : ಹೋಲಿ ಹಬ್ಬದ ಪ್ರಯುಕ್ತ ಯಲಹಂಕ ಕ್ಷೇತ್ರ ಬಿಜೆಪಿ ವತಿಯಿಂದ ಯಲಹಂಕ ಉಪನಗರ 4ನೇ ಹಂತದ ಸ್ವಾಮಿ ವಿವೇಕಾನಂದ ಪಾರ್ಕ್ ನಲ್ಲಿ ಆಯೋಜಿಸಿದ್ದ ‘ಯಲಹಂಕ ಹೋಲಿ ಉತ್ಸವ’ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಪಾಲ್ಗೊಂಡು, ಬಿಜೆಪಿ ಕಾರ್ಯಕರ್ತರಿಗೆ, ಮುಖಂಡರಿಗೆ ಬಣ್ಣ ಹಚ್ಚುವ ಮೂಲಕ ಹೋಲಿ ಹಬ್ಬದ ಸಂಭ್ರಮ ಆಚರಿಸಿದರು.
ಇದೇ ವೇಳೆ ಕಾರ್ಯಕರ್ತರೊಂದಿಗೆ ಡಿಜೆ ಸಂಗೀತಕ್ಕೆ ನೃತ್ಯದ ಹೆಜ್ಜೆ ಹಾಕಿದ ಶಾಸಕರ ಉತ್ಸಾಹ, ಸಂಭ್ರಮ ಕಂಡು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮುಗಿಲು ಮುಟ್ಟುವಂತೆ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಸಂಭ್ರಮದ ಈ ಹೋಲಿ‌ ಉತ್ಸವದಲ್ಲಿ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಉಪಸ್ಥಿತರಿದ್ದು ಹೋಲಿ ಉತ್ಸವದ ಸಂಭ್ರಮವನ್ನು ಸವಿದರು.
ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್ ಅವರ ನೇತೃತ್ವದಲ್ಲಿ ನಡೆದ ಯಲಹಂಕ ಹೋಲಿ ಉತ್ಸವದಲ್ಲಿ ಹೆಸರಾಂತ ಡಿಜೆ ಗಳಾದ ಸುನಿಲ್ ಗುಡ್ಡು, ಡಿಜೆ ತರುಣ್, ಬಿಗ್ ಬಾಸ್ ಖ್ಯಾತಿಯ ಉದಯೋನ್ಮುಖ ಯುವ ನಟ ರಕ್ಷಕ್ ಬುಲೆಟ್, ಧಾರಾವಾಹಿ ನಾಯಕ ನಟ ಸುಜಿತ್ ಪಾಲ್ಗೊಂಡು ಹೋಲಿ ಉತ್ಸವಕ್ಕೆ ವಿಶೇಷತೆಯ ಮೆರಗು ನೀಡಿದರು.
ಹೋಲಿ ಸಂಭ್ರಮದ ಮಹತ್ವದ ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 1200ಕ್ಕೂ ಹೆಚ್ಚಿನ ಜನ ಪಾಲ್ಗೊಳ್ಳುವ ಮೂಲಕ ಉತ್ಸಾಹ, ಸಂಭ್ರಮದ ಕಳೆ ತಂದುಕೊಟ್ಟರು.
ಯಲಹಂಕ ಹೋಲಿ ಉತ್ಸವದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಸತೀಶ್, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಬಿಇ ಮುಖಂಡರಾದ ಡಾ.ಶಶಿಕುಮಾರ್, ಆವಲಹಳ್ಳಿ ಕೇಶವಮೂರ್ತಿ, ಚೊಕ್ಕನಹಳ್ಳಿ ವೆಂಕಟೇಶ್, ನಗರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಬಿಜೆಪಿ ಯುವ ಮುಖಂಡರಾದ ಶರತ್ ರೆಡ್ಡಿ, ಅಕ್ಷತ್, ಮಲ್ಲಿಕಾರ್ಜುನ, ಮಹಿಳಾ ಮುಖಂಡರಾದ ಗೌರಿ, ಮಧುರ, ಕವಿತ, ಹರ್ಷ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *