
ಕೊಡುಗೆ ಹಳ್ಳಿ ಗ್ರಾಮ ಪಂಚಾಯತ್ ಮಹಿಳಾ ದಿನಾಚರಣೆಯ ವಿಶೇಷ ಆಹ್ವಾನಿತರಿಗೆ ಆಗಮಿಸಿದ್ದ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶೀಲಾದೇವಿ ಎಸ್ ಮಳಿಮಠರವರು ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರಿಗೆ ಪ್ರಸ್ತುತ ಸಂದರ್ಭದ ಮಹಿಳೆಯ ಅಸ್ಥಿತೆಯನ್ನು ವಿವರಿಸುತ್ತಾ ಗ್ರಾಮ ಪಂಚಾಯತ್ ನ ಆ್ಯಪ್ ಗಳನ್ನು ಸದ್ಬಳಕೆ ಮಾಡಿಕೊಂಡು ಮೂಲಸೌಕರ್ಯಗಳನ್ನು ಬಳಸಿಕೊಳ್ಳುವುದು ಮಹಿಳೆಯ ಸಖಲೀಕರಣದ ಅತೀ ಅವಶ್ಯಕ ಆಯಾಮ ಎಂದು ದಿನಾಂಕ 26-3 -2025ರ ಬುಧವಾರದಂದು ಗ್ರಾಮ ಮಹಿಳಾ ಸಭೆಗೆ ತಿಳುವಳಿಕೆ ಮಾಡಿಸಿದರು. ಕೊಡುಗೆಹಳ್ಳಿ ಗ್ರಾಮ ಪಂಚಾಯತ್ತ್ ಪಿಡಿಓ ಶ್ರೀಮತಿ ಭಾಗೀರಥಿಯವರು ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು ಸೀಮಂತ.. ಆಶಾಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಅಡುಗೆ ಸಹಾಯಕರಿಗೆ ಶಿಕ್ಷಕರಿಗೆ ವಿಶೇಷವಾಗಿ ತಮ್ಮ ಕಾರ್ಯದಿಂದ ಶ್ರದ್ಧೆ ಮೆರೆದ ಮಹಿಳೆಯರಿಗೆ ಸನ್ಮಾನ ಮಾಡಿ ಮಹಿಳೆಯರ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿದರು.