





ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಪಡೆದು ದೇಶಕ್ಕೂ ಹಾಗೂ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ
ಕರ್ನಾಟಕ ರಾಜ್ಯದ ಕರಾಟೆ ಮಕ್ಕಳು ಕಜಾಕಿಸ್ತಾನದಲ್ಲಿ ಆಯೋಜಿಸಲಾದ ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಪಡೆದು ದೇಶಕ್ಕೂ ಹಾಗೂ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ.ವಿಶ್ವ ಕರಾಟೆ ಒಕ್ಕೂಟದ ಅಧ್ಯಕ್ಷರಾದ (ಡಬ್ಲ್ಯೂಕೆಸಿ) ವಿಯಾಚೆಸ್ಲಾವ್ ಟಿಮೊಫೀವ್ ಇವರ ಅಧ್ಯಕ್ಷತೆಯಲ್ಲಿ ಕಜಾಕಿಸ್ತಾನ್ದ ಉರಾಲ್ಕ್ಸ್ ನಗರದಲ್ಲಿ ಏಪ್ರಿಲ್ ೧೯ ರಿಂದ ೨೦, ೨೦೨೫ II Wಏಅ/ಈW ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ ನಡೆಯಿತು. ಒಟ್ಟು ೧೧ ದೇಶಗಳು ಈ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಯಲಹಂಕದ ಮಾರುತಿನ ಗರದಲ್ಲಿ ಸಹಕಾರ ಇಲಾಖೆಯಲ್ಲಿ ನೊಂದಣಿಯಾಗಿರುವ ಒಕಿನಾವಾ ಗೊಜುಕಾನ್ ಕರಾಟೆ-ಡು ತರಬೇತಿ ಸಂಸ್ಥೆಯಲ್ಲಿ ತರಬೇತುದಾರರಾದ ಊಥಿ ಅಚಿಠಿಣಚಿiಟಿ. ಊಚಿಟಿshi S.ಅ. ಆuಡಿಚಿi ರವರ ಬಳಿ ತರಬೇತಿ ಪಡೆಯುತ್ತಿರುವ ೯ ಮಕ್ಕಳು ಭಾಗವಹಿಸಿದ್ದರು. ನಮ್ಮ ಭಾರತೀಯ ಕರಾಟೆ ತಂಡವು ಒಂದು ಚಿನ್ನದ ಪದಕ, ಮೂರು ಬೆಳ್ಳಿ ಪದಕಗಳು ಮತ್ತು ಮೂರು ಕಂಚಿನ ಪದಕಗಳು ಒಟ್ಟು ೭ ಪದಕಗಳನ್ನು ಗೆಲ್ಲುವ ಮೂಲಕ ವಿದೇಶಿ ನೆಲದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಜೂನಿಯರ್ ಏಚಿಣಚಿ ವಿಭಾಗದ ೬-೭ ವಯಸ್ಸಿನ ವೃಂದಲ್ಲಿ ೧) ನಿದಿತ್ ಗೌಡ- ಬಂಗಾರದ ಪದಕ, ೧೪-೧೫ ವಯಸ್ಸಿನ ವೃಂದಲ್ಲಿ ೨) ಅರಸು ಪ್ರದೀಪ್- ಬೆಳ್ಳಿ ಪದಕ, ೧೨-೧೩ ವಯಸ್ಸಿನ ವೃಂದಲ್ಲಿ ೩) ಅದ್ವೈತ್ ರಾಜ್- ಬೆಳ್ಳಿ ಪದಕ, ೪) ಭಗತ್ ಗೌಡ- ಕಂಚು ಪದಕ, ೧೦-೧೧ ವಯಸ್ಸಿನ ವೃಂದಲ್ಲಿ ೫) ಅನನ್ಯ ಶರ್ಮ- ಕಂಚು ಪದಕ, ಜೂನಿಯರ್ ಏumiಣe ವಿಭಾಗದ ೧೨-೧೩ ವಯಸ್ಸಿನ ವೃಂದಲ್ಲಿ ೬) ವೆನ್ಯಾ- ಬೆಳ್ಳಿ ಪದಕ, ೧೧-೧೨ ವಯಸ್ಸಿನ ವೃಂದಲ್ಲಿ ೭) ಸಯೀಶ್ ಕಂಚು ಪದಕಗಳನ್ನು ಗೆದ್ದು ಬೀಗಿದ್ದಾರೆ. ಮಕ್ಕಳು ಈ ಸಾಧನೆ ಮಾಡಿದ್ದು ಭಾರತದ ದೇಶಕ್ಕೆ, ನಾಡಿಗೆ ಹೆಮ್ಮೆಯನ್ನು ತಂದಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
ಆರ್ ಹನುಮಂತು
9845085793
7349337989