ಸೊಗಸಾದ ವಿನ್ಯಾಸ ಮತ್ತು 19 ಪ್ರೀಮಿಯಂ ಫೀಚರ್ ಗಳುಳ್ಳ ಇನ್ನೋವಾ ಹೈಕ್ರಾಸ್‌ನ ಎಕ್ಸ್‌ ಕ್ಲೂಸಿವ್ ಎಡಿಷನ್ ಬಿಡುಗಡೆ ಮಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

• ಎಕ್ಸ್‌ ಕ್ಲೂಸಿವ್ ಎಡಿಷನ್: ಸೊಗಸಾದ ವಿನ್ಯಾಸ ಮತ್ತು ಡ್ಯುಯಲ್ ಟೋನ್ ಆಕ್ಸೆಂಟ್‌ ಗಳನ್ನು ಹೊಂದಿರುವ ಈ ವಾಹನವನ್ನು ಇನ್ನೋವಾ ಹೈಕ್ರಾಸ್ ನ ಆಕರ್ಷಕ ಉಪಸ್ಥಿತಿಯನ್ನು ಮತ್ತಷ್ಟು ಆಕರ್ಷಕಗೊಳಿಸಲು ವಿನ್ಯಾಸಗೊಳಿಸಲಾಗಿದೆ.
• ಕಾರ್ಯನಿರ್ವಹಣೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ಹಲವು ಫೀಚರ್ ಗಳ ಮೂಲಕ ಅಪ್ ಗ್ರೇಡ್ ಮಾಡಲಾಗಿದೆ.
• ಝಡ್ಎಕ್ಸ್ (ಓ) ಗ್ರೇಡ್‌ ನಲ್ಲಿ ಮಾತ್ರವೇ ಸೀಮಿತ ಕಾಲಾವಧಿಯಲ್ಲಿ ಲಭ್ಯವಿರುವ ಈ ವಾಹನವು ಸೂಪರ್ ವೈಟ್ ಮತ್ತು ಪರ್ಲ್ ವೈಟ್ ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿ ದೊರೆಯಲಿದೆ.
• ಇನ್ನೋವಾ ಹೈಕ್ರಾಸ್ ಝಡ್ಎಕ್ಸ್(ಓ) ಎಕ್ಸ್‌ ಕ್ಲೂಸಿವ್ ಎಡಿಷನ್‌ ನ ಎಕ್ಸ್-ಶೋರೂಂ ಬೆಲೆ ₹32,58,000/- (ದೇಶಾದ್ಯಂತ ಎಕ್ಸ್-ಶೋರೂಂ ಬೆಲೆ ಒಂದೇ ಆಗಿರುತ್ತದೆ)

ಬೆಂಗಳೂರು, ಮೇ 02, 2025: ಗ್ರಾಹಕ-ಕೇಂದ್ರಿತ ತತ್ವಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಇನ್ನೋವಾ ಹೈಕ್ರಾಸ್‌ ನ ಝಡ್ಎಕ್ಸ್(ಓ) ಗ್ರೇಡ್‌ ಎಕ್ಸ್‌ ಕ್ಲೂಸಿವ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ.

ಇನ್ನೋವಾ ಹೈಕ್ರಾಸ್‌ ನ ಭಾರಿ ಯಶಸ್ಸಿನ ಆಧಾರದ ಮೇಲೆ ನಿರ್ಮಿಸಲಾಗಿರುವ ಈ ಹೊಸ ಆವೃತ್ತಿಯು ಸೊಗಸಾದ ವಿನ್ಯಾಸ ಮತ್ತು ಅತ್ಯುತ್ತಮ ಕ್ಯಾಬಿನ್ ಅನುಭವವನ್ನು ಒದಗಿಸಲಿದೆ. ಈ ಕೆಳಗಿನ ಫೀಟರ್ ಅನ್ನು ಒಳಗೊಂಡಿದೆ:

A. ಡ್ಯುಯಲ್ ಟೋನ್ ಎಕ್ಸ್‌ ಟೀರಿಯರ್
• ಬ್ಲಾಕ್ ಎಲಿಮೆಂಟ್ಸ್:
o ರೂಫ್
o ಫ್ರಂಟ್ ಗ್ರಿಲ್
o ರೇರ್ ಗಾರ್ನಿಶ್
o ಅಲಾಯ್ ವೀಲ್ಸ್
o ಹುಡ್ ಎಂಬ್ಲೆಮ್
• ಫ್ರಂಟ್ ಅಂಡರ್ ರನ್
• ಫ್ರಂಟ್ ಗ್ರಿಲ್ ಗಾರ್ನಿಶ್
• ವೀಲ್ ಆರ್ಕ್ ಮೌಲ್ಡಿಂಗ್
• ಔಟ್‌ಸೈಡ್ ರೇರ್ ವ್ಯೂ ಮಿರರ್ (ಓ ವಿ ಆರ್ ಎಂ) ಗಾರ್ನಿಶ್
• ಎಕ್ಸ್‌ ಕ್ಲೂಸಿವ್ ಬ್ಯಾಡ್ಜ್
• ರೇರ್ ಅಂಡರ್ ರನ್
• ರೇರ್ ಡೋರ್ ಕ್ರೋಮ್ ಲಿಡ್ ಗಾರ್ನಿಶ್

B. ಡ್ಯುಯಲ್ ಟೋನ್ ಇಂಟೀರಿಯರ್
o ಇನ್‌ ಸ್ಟ್ರುಮೆಂಟ್ ಪ್ಯಾನಲ್
o ಡೋರ್ ಫ್ಯಾಬ್ರಿಕ್
o ಸೀಟ್ ಮೆಟೀರಿಯಲ್
o ಸೆಂಟರ್ ಕನ್ಸೋಲ್ ಲಿಡ್
• ಏರ್ ಪ್ಯೂರಿಫೈಯರ್
• ಲೆಗ್ ರೂಮ್ ಲ್ಯಾಂಪ್
• ವೈರ್‌ಲೆಸ್ ಚಾರ್ಜರ್

ಇನ್ನೋವಾ ಹೈಕ್ರಾಸ್ ಎಕ್ಸ್‌ ಕ್ಲೂಸಿವ್ ಎಡಿಷನ್ ಝಡ್ಎಕ್ಸ್(ಓ) ಗ್ರೇಡ್‌ನಲ್ಲಿ ಲಭ್ಯ
ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಇನ್ನೋವಾ ಹೈಕ್ರಾಸ್, ತನ್ನ ಚಂದ ಮತ್ತು ದಕ್ಷತೆಯ ಸಂಯೋಜನೆಯಿಂದ ಯಶಸ್ಸು ಸಾಧಿಸುವುದನ್ನು ಮುಂದುವರೆಸಿದೆ. ಚಾಲಕನ ವಿಶಿಷ್ಟತೆಗೆ ತಕ್ಕಂತೆ ಪ್ರತೀ ಪಯಣವನ್ನು ವಿಶೇಷವಾಗಿಸಲು ರೂಪಿಸಲಾಗಿರುವ ಇನ್ನೋವಾ ಹೈಕ್ರಾಸ್ ಎಕ್ಸ್‌ ಕ್ಲೂಸಿವ್ ಎಡಿಷನ್ ಝಡ್ಎಕ್ಸ್(ಓ), ಮೇ 2025 ರಿಂದ ಜುಲೈ 2025 ರವರೆಗೆ, ಸೂಪರ್ ವೈಟ್ ಮತ್ತು ಪರ್ಲ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಲಭ್ಯವಿರುತ್ತದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್-ಸರ್ವಿಸ್-ಯೂಸ್ಡ್ ಕಾರ್ ಬಿಸಿನೆಸ್ ವೈಸ್ ಪ್ರೆಸಿಡೆಂಟ್ ಶ್ರೀ ವರೀಂದರ್ ವಾಧ್ವಾ ಅವರು, “ಇನ್ನೋವಾ ಹೈಕ್ರಾಸ್ ತನ್ನ ಎಸ್ ಯು ವಿ ಶೈಲಿಯ ಸೌಂದರ್ಯ ಮತ್ತು ಎಂಪಿವಿ ಯ ವಿಶಾಲತೆ ಸ್ಥಳಾವಕಾಶದ ಮೂಲಕ ಗ್ರಾಹಕರಿಂದ ಸತತವಾಗಿ ಮೆಚ್ಚುಗೆ ಪಡೆಯುತ್ತಾ ಬಂದಿದೆ. ಅದಕ್ಕಾಗಿ ಮತ್ತು ಬ್ರಾಂಡ್‌ ನ ಮೇಲೆ ಅವರು ಇಟ್ಟಿರುವ ವಿಶ್ವಾಸಕ್ಕೆ ನಾವು ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇವೆ. ಇಂದು, ನಾವು ಇನ್ನೋವಾ ಹೈಕ್ರಾಸ್ ಎಕ್ಸ್‌ ಕ್ಲೂಸಿವ್ ಎಡಿಷನ್ ಝಡ್ಎಕ್ಸ್(ಓ) ಅನ್ನು ಬಿಡುಗಡೆ ಮಾಡಲು ಸಂತೋ ಪಡುತ್ತೇವೆ. ಇದನ್ನು ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಆಸೆಗಳನ್ನು ಪೂರೈಸಲು ಚಿಂತನಶೀಲವಾಗಿ ರೂಪಿಸಲಾಗಿದೆ. ಈ ವಿಶೇಷ ಆವೃತ್ತಿಯು ಟೊಯೋಟಾದ ವಿಶಿಷ್ಟತೆ ಮತ್ತು ಉನ್ನತ ಗ್ರಾಹಕ ಅನುಭವ ಒದಗಿಸುವ ಬದ್ಧತೆಗೆ ಸಾಕ್ಷಿಯಾಗಿದೆ. ಈ ವಾಹನ ಬಿಡುಗಡೆ ಮಾಡುವ ಮೂಲಕ ನಾವು ಅತ್ಯಾಧುನಿಕ ಮೌಲ್ಯ ಮತ್ತು ಹೆಚ್ಚುವರಿ ಸೌಕರ್ಯ ಒದಗಿಸುವ ಫೀಚರ್ ಗಳನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ವಿಶೇಷವಾಗಿ ಆಯಾಸ ಮುಕ್ತ ಡ್ರೈವ್ ಸೌಲಭ್ಯ ಒದಗಿಸುವ, ಕುಟುಂಬಗಳ ಮೆಚ್ಚಿನ ಕಾರ್ ಆಗಿರುವ ಇನ್ನೋವಾ ಹೈಕ್ರಾಸ್‌ ನ ಯಶಸ್ಸಿನ ಪ್ರಯಾಣವನ್ನು ಈ ಮೂಲಕ ಮುಂದುವರಿಸಲಿದ್ದೇವೆ” ಎಂದು ಹೇಳಿದರು.

2022ರ ನವೆಂಬರ್ ನಲ್ಲಿ ಪರಿಚಯಿಸಿದಾಗಿನಿಂದಲೂ ಇನ್ನೋವಾ ಹೈಕ್ರಾಸ್ ಗ್ರಾಹಕರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ. ಟೊಯೋಟಾದ ಜನಪ್ರಿಯವಾದ ಗುಣಮಟ್ಟ, ಬಾಳಿಕೆ ಮತ್ತು ವಿಶ್ವಾಸಾರ್ಹತೆ (ಕ್ಯೂಡಿಆರ್) ತತ್ವಕ್ಕೆ ಪೂರಕವಾಗಿ ಮೂಡಿಬಂದಿರುವ ವಾಹನವಿದು. 5ನೇ ತಲೆಮಾರಿನ ಸೆಲ್ಫ್- ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್‌ ನಿಂದ ಚಾಲಿತವಾಗಿರುವ, ಈ ವಾಹನವನ್ನು ಅತ್ಯಾಧುನಿಕ ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (ಟಿ ಎ ಜಿ ಎ) ನಲ್ಲಿ ನಿರ್ಮಿಸಲಾಗಿದೆ. ಅತ್ಯುತ್ತಮ ಕಾರ್ಯಕ್ಷಮತೆ, ಅತ್ಯುನ್ನತ ಇಂಧನ ದಕ್ಷತೆ ಮತ್ತು ಉನ್ನತ ಡ್ರೈವಿಂಗ್ ಸೌಕರ್ಯವನ್ನು ನೀಡುತ್ತದೆ. 2.0-ಲೀಟರ್ 4-ಸಿಲಿಂಡರ್ ಗ್ಯಾಸೋಲಿನ್ ಎಂಜಿನ್ ಮತ್ತು ಇ-ಡ್ರೈವ್ ಸೀಕ್ವೆನ್ಷಿಯಲ್ ಶಿಫ್ಟ್‌ ಹೊಂದಿರುವ ಈ ವಾಹನವು 137 ಕಿ.ವ್ಯಾಟ್ (186 ಪಿಎಸ್) ನಷ್ಟು ಅತ್ಯುತ್ತಮ ಪವರ್ ಒದಗಿಸುತ್ತದೆ. ಜೊತೆಗೆ ವಿಭಾಗದಲ್ಲೇ ಅತ್ಯುತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ. ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್ ವಾಹನವನ್ನು ಶೇ.60ರಷ್ಟು ಸಮಯದವರೆಗೆ ಎಲೆಕ್ಟ್ರಿಕ್ (ಇವಿ) ಮೋಡ್‌ ನಲ್ಲಿ ಚಲಾಯಿಸುವಂತೆ ಅನುವು ಮಾಡಿಕೊಡುತ್ತದೆ.ಜೊತೆಗೆ ಶಕ್ತಿ, ದಕ್ಷತೆ ಮತ್ತು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಜವಾಬ್ದಾರಿಯುತ ಹೆಜ್ಜೆ ಇಡುತ್ತಿದೆ ಮತ್ತು ಗ್ರಾಹಕರಿಗೆ ಹಸಿರು ಭವಿಷ್ಯಕ್ಕೆ ಪೂರಕವಾದ ಸ್ಮಾರ್ಟ್ ಆಯ್ಕೆಯನ್ನು ಮುಂದಿಡುತ್ತದೆ.

ಪವರ್ಡ್ ಒಟ್ಟೋಮನ್ ಸೆಕೆಂಡ್ ರೋ ಸೀಟ್ಸ್, ಫ್ರಂಟ್ ವೆಂಟಿಲೇಟೆಡ್ ಸೀಟ್ಸ್, ಡ್ಯುಯಲ್ ಝೋನ್ ಏರ್ ಕಂಡಿಷನಿಂಗ್, ಪ್ಯಾನೋರಮಿಕ್ ಸನ್‌ರೂಫ್, ಟೊಯೋಟಾ ಸೇಫ್ಟಿ ಸೆನ್ಸ್™, ಮತ್ತು ಕನೆಕ್ಟೆಡ್ ಇನ್ಫೋಟೈನ್‌ಮೆಂಟ್ ಎಕ್ಸ್ ಪೀರಿಯನ್ಸ್ ಮುಂತಾದ ವಿಭಾಗ ಶ್ರೇಷ್ಠ ಫೀಚರ್ ಗಳನ್ನು ಹೊಂದಿರುವ ಇನ್ನೋವಾ ಹೈಕ್ರಾಸ್ ಪ್ರೀಮಿಯಂ ಎಂಪಿವಿ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಚ್ಚಿದೆ ಮತ್ತು ಭಾರತದಾದ್ಯಂತ ಗ್ರಾಹಕರು ಸಂತೋಷ ಪಡುವಂತೆ ಮಾಡಿದೆ.

ಈಗ ಈ ಕಾರ್ ಅನ್ನು ಎಲ್ಲಾ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್ ಮಾಡಬಹುದಾಗಿದ್ದು, ಗ್ರಾಹಕರು ಆನ್‌ಲೈನ್‌ನಲ್ಲಿ https://www.toyotabharat.com/ ನಲ್ಲಿ ಕೂಡ ಬುಕ್ ಮಾಡಬಹುದು.

Leave a Reply

Your email address will not be published. Required fields are marked *