


108 ಆ್ಯಂಬುಲೆನ್ಸ್ ಚಾಲಕರಿಗೆ ಸನ್ಮಾನ :
ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯಜನೆ :
ಬ್ಯಾಟರಾಯನಪುರ : ವಿಶ್ವ ಪೈಲಟ್ ದಿನಾಚರಣೆ ಪ್ರಯುಕ್ತ ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಭಾಗದ ಪೈಲಟ್(ಆ್ಯಂಬುಲೆನ್ಸ್ ಚಾಲಕರು)ಗಳಿಗೆ ಬೆಟ್ಟಹಲಸೂರು ಗ್ರಾಮದ ಮುಖಂಡರು ಗೌರವಿಸಿ ಸನ್ಮಾನಿಸಿದರು.
ಇದೇ ವೇಳೆ ಪೈಲಟ್ ಗಳು ಕೇಕ್ ಕತ್ತರಿಸಿ ಪೈಲಟ್ ದಿನಾಚರಣೆಯ ಸಂಭ್ರಮ ಆಚರಿಸಿದರು. ಇದೇ ಸಂದರ್ಭದಲ್ಲಿ ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಚಮಿ ಶ್ರೀನಿವಾಸ್, ಗ್ರಾ.ಪಂ.ನಿಕಟ ಪೂರ್ವ ಅಧ್ಯಕ್ಷ ಬಿ.ಎಂ.ನಾಗೇಶ್, ಗ್ರಾ.ಪಂ.ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮುಖಂಡರಾದ ರವೀಂದ್ರನಾಥಗೌಡ, ಬಿ.ಎನ್.ನಾಗೇಶ್, ಮೈಲಾರ ಸ್ವಾಮಿ, ಬೆಟ್ಟಹಲಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶಸ್ವಿನಿ, ಪೈಲಟ್ ಅಸೋಸಿಯೇಷನ್ ನ ಬೆಂಗಳೂರು ಜಿಲ್ಲಾ ವ್ಯವಸ್ಥಾಪಕ ಆಸೀಫ್, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯನಿರ್ವಾಹಕ ವ್ಯವಸ್ಥಾಪಕ ತೇಜಸ್, ಬೆಂಗಳೂರು ಕೇಂದ್ರ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸ್ವಾಮಿ, ಬೆಂಗಳೂರು ಪೂರ್ವ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂದೀಪ್ ಪಾಟೀಲ್, ‘ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ನೌಕರರ ಸಂಘಟನೆ’ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಪೈಲಟ್ ಗಳಿದ್ದರು.