8 ಕೋಟಿ ರು.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್ ಆರ್.ವಿಶ್ವನಾಥ್ ಚಾಲನೆ :
ಯಲಹಂಕ : ಯಲಹಂಕ ನಗರದ ಅಟ್ಟೂರು ವಾರ್ಡ್ ವ್ಯಾಪ್ತಿಯಲ್ಲಿ ಅಂಬಾಭವಾನಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ, ಲಕ್ಷ್ಮಣರೆಡ್ಡಿ ಬಡಾವಣೆ ಮತ್ತು ಹರಿರಾಜ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಯಲಹಂಕ ಉಪನಗರ ವಾರ್ಡ್ ವ್ಯಾಪ್ತಿಯಲ್ಲಿ ಸುಭಾಷ್ ಚಂದ್ರ ಬೋಸ್ ಉದ್ಯಾನವನ ಅಭಿವೃದ್ಧಿ, ನಂಜುಂಡಪ್ಪ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಚೌಡೇಶ್ವರಿ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಕೆಂಪೇಗೌಡ ವಾರ್ಡ್ ವ್ಯಾಪ್ತಿಯ ನಗರೇಶ್ವರ ಮತ್ತು ಧರ್ಮರಾಯ ಸ್ವಾಮಿ ದೇವಾಲಯಗಳ ರಸ್ತೆ ಅಭಿವೃದ್ಧಿ, ಮಾರುತಿನಗರ, ಮುನಿತಿಮ್ಮಯ್ಯ ಬಡಾವಣೆ, ಸುರಭಿ ಬಡಾವಣೆಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಸುಮಾರು 8 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಶನಿವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ರಾಜ್ಯ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ದೊರೆಯುತ್ತಿಲ್ಲ.  ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕುಂಟಿತವಾಗದಂತೆ ಗಮನ ಹರಿಸಲಾಗುತ್ತಿದೆ. ಇಂದು ಯಲಹಂಕ ನಗರ ವ್ಯಾಪ್ತಿಯ ನಾಲ್ಕೂ ವಾರ್ಡ್ ಗಳಲ್ಲಿ 8 ಕೋಟಿ ರು.ವೆಚ್ಚದಲ್ಲಿ ಉದ್ಯಾನವನಗಳ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ18 ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ನಿರ್ವಹಣೆಗಾಗಿ ಸುಮಾರು 50 ಸಾವಿರಕ್ಕೂ ಹೆಚ್ಚು ಕೋಟಿ ರು.ಗಳನ್ನು ವ್ಯಯಿಸುತ್ತಿದ್ದು, ಇದಕ್ಕಾಗಿಯೇ ಹೆಣಗಾಡುತ್ತಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಿದ್ದು, ರಾಜ್ಯದ ಜನತೆಗೆ ಅನಗತ್ಯ ತೆರಿಗೆಯ ಹೊರೆ ಹೇರಲಾಗುತ್ತಿದೆ. ಜನತೆ ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೊರಗೆ ಹೈರಾಣಾಗಿ ಹೋಗಿದ್ದು, ತೆರಿಗೆ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳತ್ತಿರುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಬೇಸತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳ ಬದಲಿಗೆ ಅದೇ ಹಣವನ್ನು ಅಭಿವೃದ್ಧಿಗೆ‌ ನೀಡಿದ್ದರೆ ರಾಜ್ಯದಲ್ಲಿ ಗಮನಾರ್ಹವಾದ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದವು ಎಂದು ಸರ್ಕಾರದ ಬಗ್ಗೆ ಬೇಸರದ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ಬಿಜೆಪಿ ಮುಖಂಡರಾದ ಎ.ಸಿ. ಮುನಿಕೃಷ್ಣಪ್ಪ, ಚೊಕ್ಕನಹಳ್ಳಿ ವೆಂಕಟೇಶ್, ಬಿಬಿಎಂಪಿ ಮಾಜಿ ಸದಸ್ಯ ಎಂ.ಮುನಿರಾಜು, ಮುನಿಯಪ್ಪ(ಕೂರ್ಲಪ್ಪ), ಓಂ ರವೀಂದ್ರ, ಎ.ಎಸ್.ರಾಜ, ಜಿ.ಈಶ್ವರಪ್ಪ, ವೇಣು, ಡಾ.ಲೋಕೇಶ್, ಪದ್ಮ, ಲತಾ ಚಂದ್ರಶೇಖರ್, ಚೌಡಪ್ಪ, ತೀರ್ಥಪ್ರಸಾದ್, ಬೆಟ್ಟಹಳ್ಳಿ ಚಂದ್ರಪ್ಪ, ಶಿವಕುಮಾರ್ , ಯುವ ಮೋರ್ಚಾ ಅಧ್ಯಕ್ಷ  ಎಚ್.ಎಸ್.ಕಿರಣ್, ಅಕ್ಷತ್, ಶರತ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *