



“ಸುಸ್ಥಿರ ಸಂಪನ್ಮೂಲ ನಿರ್ವಹಣಾ ಯೋಜನೆ” ವಿಷಯ ಇಟ್ಟುಕೊಂಡು ಪರಿಸರ ಮಾಸ 2025 ಅನ್ನು ಆರಂಭಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಬೆಂಗಳೂರು, 5 ಜೂನ್ 2025: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು 2025ರ “ಸುಸ್ಥಿರ ಸಂಪನ್ಮೂಲ ನಿರ್ವಹಣಾ ಯೋಜನೆ” ಎಂಬ ಥೀಮ್ ಇಟ್ಟುಕೊಂಡು ಪರಿಸರ ಮಾಸ 2025 ಅನ್ನು ಆರಂಭಿಸಿದೆ. ಟೊಯೋಟಾ ಎನ್ವಿರಾನ್‌ಮೆಂಟಲ್ ಚಾಲೆಂಜ್ 2050 ಮತ್ತು “ಟೊಯೋಟಾ ಗ್ಲೋಬಲ್ ವಿಷನ್ 2050ರ ಸಾಕಾರಕ್ಕೆ ಜಾಗೃತಿ ಹೆಚ್ಚಳ” ಎಂಬ ಜಾಗತಿಕ ಥೀಮ್‌ಗೆ ಪೂರಕವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಅಭಿಯಾನವು ಕಂಪನಿಯ ಕಾರ್ಯನಿರ್ವಹಣೆಯಲ್ಲಿ ಸುಸ್ಥಿರತೆಯ ಸಂಸ್ಕೃತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ‘ಝೀರೋ- ಬೇಸ್ ಥಿಂಕಿಂಗ್’ ಅಳವಡಿಸಿಕೊಳ್ಳುವುದು ಈ ವರ್ಷದ ಕೇಂದ್ರ ವಿಷಯವಾಗಿದ್ದು, ಇದು ಎಲ್ಲಾ ಸಂಪನ್ಮೂಲಗಳನ್ನು ಮೂಲದಿಂದ ಮರುಮೌಲ್ಯಮಾಪನ ಮಾಡುವ ಮತ್ತು ನಿಜವಾದ ಮೌಲ್ಯವನ್ನು ಒದಗಿಸುವವುಗಳನ್ನು ಮಾತ್ರ ಉಳಿಸಿಕೊಳ್ಳುವ ಒಂದು ಉತ್ತಮ ತಂತ್ರವಾಗಿದೆ. ಇದರಿಂದ ರಿಫ್ಯೂಸ್, ರೀಸೈಕಲ್ (ಸರ್ಕ್ಯುಲರ್ ಎಕಾನಮಿ), ರೀಯೂಸ್ ಮತ್ತು ರಿಡ್ಯೂಸ್ (4ಆರ್ ಗಳು) ಮೂಲಕ ದೀರ್ಘಾವಧಿಯ ಸುಸ್ಥಿರತೆ ಸಾಧ್ಯವಾಗಲಿದೆ.
ಪ್ರತೀ ಜೂನ್‌ನಲ್ಲಿ ಆಚರಿಸಲಾಗುವ ಟೊಯೋಟಾದ ಜಾಗತಿಕ ಪರಿಸರ ಮಾಸವು ಪ್ರಮುಖ ಪರಿಸರ ಸಮಸ್ಯೆಗಳ ಪರಿಹಾರ ಒದಗಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. 2025ರ ಆವೃತ್ತಿಯು ಜಾಗೃತಿ ಉಂಟು ಮಾಡಲು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಜಾಸ್ತಿ ಮಾಡುವ ಕಡೆಗೆ ಕಮನ ಹರಿಸಲಿದೆ. ಜೊತೆಗೆ ಭಾರತದಲ್ಲಿ ಟಿಕೆಎಂನ 25 ವರ್ಷಗಳ ಯಶಸ್ವಿ ಪಯಣವನ್ನು ಸಂಭ್ರಮಿಸಲಾಗುತ್ತದೆ. ‘ಜರ್ನಿ ಟು ಗ್ರೀನ್ @ 25’ ಥೀಮ್ ಮೂಲಕ ಪ್ರಮುಖ ಪರಿಸರ ಸಾಧನೆಗಳನ್ನು ಆಚರಿಸಲಾಗುತ್ತದೆ. ಇಲ್ಲಿ ಕೆಲವು ಪ್ರಮುಖ ಪರಿಸರ ಸಾಧನೆಗಳನ್ನು ಹಂಚಿಕೊಳ್ಳಲಾಗಿದೆ:
ಗ್ರಿಡ್ ವಿದ್ಯುತ್‌ಗೆ ಶೇ.100ರಷ್ಟು ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಮಾಡಲಾಗಿದ್ದು, ಇದರಿಂದ ಉತ್ಪಾದನಾ ವಿಭಾಗದಿಂದ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಗುರಿಗೆ ವೇಗ ನೀಡಲಾಗಿದೆ.
ಟಿಕೆಎಂನ ಒಟ್ಟು ಉತ್ಪಾದನೆಗೆ ಬೇಕಾದ ನೀರಿನ ಶೇ.89.3ರಷ್ಟನ್ನು ಮರುಬಳಕೆಯ ನೀರು ಮತ್ತು ಮಳೆನೀರು ಸಂಗ್ರಹಣೆಯಿಂದ ಪೂರೈಸಲಾಗುತ್ತದೆ.
ಕಾರ್ಖಾನೆ ಘಟಕಗಳಲ್ಲಿ ಪರಿಣಾಮಕಾರಿ ತ್ಯಾಜ್ಯ ನಿರ್ವಹಣಾ ಪದ್ಧತಿಗಳ ಅಳವಡಿಕೆ, ತ್ಯಾಜ್ಯದ ಮರುಬಳಕೆಯನ್ನು ಶೇ.96ರಷ್ಟು ಜಾಸ್ತಿ ಮಾಡಲಾಗಿದೆ.
ಟಿಕೆಎಂ 25 ಎಕರೆ ವಿಸ್ತೀರ್ಣದಲ್ಲಿ ‘ಇಕೋ ಜೋನ್’ ಎಂಬ ವಿಶಿಷ್ಟ ಅನುಭವಾತ್ಮಕ ಪರಿಸರ ಕಲಿಕಾ ಕೇಂದ್ರವನ್ನು ಸ್ಥಾಪಿಸಿದೆ. ಮಕ್ಕಳಲ್ಲಿ ವಿಶೇಷವಾಗಿ ಪರಿಸರ ಆಸಕ್ತಿ ಬೆಳೆಸಲು ಮತ್ತು ಅವರನ್ನು ಇಕೋ ಚಾಂಪಿಯನ್‌ಗಳಾಗಿ ಬೆಳೆಸಲು 17 ಶೈಕ್ಷಣಿಕ ಥೀಮ್ ಪಾರ್ಕ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದುವರೆಗೆ ಟಿಕೆಎಂ 42,000+ ವಿದ್ಯಾರ್ಥಿಗಳು ಮತ್ತು ವಿವಿಧ ಪಾಲುದಾರರನ್ನು ತಲುಪಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮತ್ತು ಡೈರೆಕ್ಟರ್ ಶ್ರೀ ಬಿ. ಪದ್ಮನಾಭ ಅವರು, “ಟಿಕೆಎಂಲ್ಲಿ ಪರಿಸರ ಕಾಳಜಿಯು ನಮ್ಮ ಕಾರ್ಪೊರೇಟ್ ಸಿದ್ಧಾಂತ ಮತ್ತು ಕಾರ್ಯಾಚರಣೆಯ ತಂತ್ರದಲ್ಲಿ ಆಳವಾಗಿ ಬೇರೂರಿದೆ. ಪರಿಸರ ಮಾಸ ಒಂದು ಕಾರ್ಯಕ್ರಮ ಮಾತ್ರವೇ ಅಲ್ಲ, ಇದು ಪ್ರತಿಯೊಬ್ಬ ವ್ಯಕ್ತಿಯೂ ಹಸಿರು ಜಗತ್ತಿಗೆ ಕೊಡುಗೆ ನೀಡುವಂತೆ ಮಾಡಲು ನೀಡಿದ ಕರೆಯಾಗಿದೆ. ‘ಝೀರೋ ಬೇಸ್ ಥಿಂಕಿಂಗ್’ ತಂತ್ರವು ಸಣ್ಣ ಸುಧಾರಣೆಗಳನ್ನು ಮೀರಿ ಶಾಶ್ವತ ಪ್ರಭಾವವನ್ನು ಬೀರುವ ರೂಪಾಂತರಕಾರಿ ಪರಿಹಾರಗಳನ್ನು ಅಳವಡಿಸಿಕೊಳ್ಳಲು ನಮ್ಮನ್ನು ಒತ್ತಾಯಿಸುತ್ತದೆ. ಪ್ರತೀ ಯೋಜನೆಯನ್ನು ಸುಸ್ಥಿರ ಜೀವನ ಮತ್ತು ಹಸಿರು ಆವಿಷ್ಕಾರಗಳಿಗೆ ಪ್ರಾಯೋಗಿಕ ಒಳನೋಟಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ,” ಎಂದು ಹೇಳಿದರು.
2025ರ ಪರಿಸರ ತಿಂಗಳು “ಟಿಕೆಎಂ ಸಸ್ಟೇನೇಬಲ್ ಹಬ್ 2025” ಮೂಲಕ ನಡೆಯಲಿದ್ದು, ಇದು ಕಲಿಕೆ, ಆವಿಷ್ಕಾರ ಮತ್ತು ಸುಸ್ಥಿರತಾ ಕ್ರಮಗಳಲ್ಲಿ ತೊಡಗಿಸಿಕೊಳ್ಳುವಿಕೆಗೆ ಒಂದು ಕೇಂದ್ರೀಕೃತ ವೇದಿಕೆಯಾಗಿದೆ. ಇಕೋ ತಿಂಗಳಲ್ಲಿ ನಡೆಯುವ ವಾರದ ಸುಸ್ಥಿರ ಸ್ಟಾಲ್ ಸರಣಿಯ ಪ್ರಮುಖ ಅಂಶಗಳು ಹೀಗಿವೆ:
ಗ್ರೀನ್ ಎಕ್ಸ್ ಪೋ: ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ (ಟಿಟಿಟಿಐ) ವಿದ್ಯಾರ್ಥಿಗಳು ರಚಿಸಿರುವ ಪ್ರಮುಖ ಪರಿಸರ ಕೆಪಿಐಗಳ ಆಧಾರದ ಮಾದರಿಗಳನ್ನು ಪ್ರದರ್ಶಿಸಲಾಗುವುದು.
ತ್ಯಾಜ್ಯದಿಂದ ಸಂಪತ್ತು: ಶಾಲಾ ವಿದ್ಯಾರ್ಥಿಗಳಿಂದ ನಡೆಸಲ್ಪಡುವ ಸೃಜನಾತ್ಮಕ ಯೋಜನೆಯು ನವೀನ ಅಪ್ ಸೈಕ್ಲಿಂಗ್ ವಸ್ತುಗಳ ಬಳಕೆಯನ್ನು ಉತ್ತೇಜಿಸುತ್ತದೆ.
ಗ್ರೀನ್ ಎಕ್ಸಿಬಿಷನ್: ಪರಿಸರ ಸ್ನೇಹಿ ಜೀವನಶೈಲಿ ಉತ್ಪನ್ನಗಳು, ದೈನಂದಿನ ಅಗತ್ಯ ವಸ್ತುಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಟೆಕ್ ಶೋ: ಸೌರ ಸ್ಟೌವ್ ಗಳು, ಎಲೆಕ್ಟ್ರಿಕ್ ಬೈಸಿಕಲ್ ಗಳಂತಹ ಸುಸ್ಥಿರ ವಿದ್ಯುತ್ ಉತ್ಪನ್ನಗಳ ಪ್ರದರ್ಶನ.
ಹೆಚ್ಚುವರಿಯಾಗಿ, ಪ್ಲಾಸ್ಟಿಕ್-ಮುಕ್ತ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು, ಮರುಬಳಕೆ ಮತ್ತು ವಸ್ತುಗಳ ಮರುಉಪಯೋಗ, ಸಂಪನ್ಮೂಲ ಬಳಕೆಯನ್ನು ಕಡಿಮೆ ಮಾಡುವುದು, ಅರಣ್ಯೀಕರಣ ಪ್ರಯತ್ನಗಳನ್ನು ಹೆಚ್ಚಿಸುವುದು ಮತ್ತು ಇನ್ನೂ ಹಲವಾರು ವೈವಿಧ್ಯಮಯ ಇಕೋ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅವುಗಳಲ್ಲಿ ಕೆಲವು ಹೀಗಿವೆ:
• ಪ್ಲಾಸ್ಟಿಕ್ ಪ್ಯಾಕೇಜಿಂಗ್ ತೊಡೆದುಹಾಕುವಿಕೆ: 2030ರ ವೇಳೆಗೆ ಶೂನ್ಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಗುರಿಯನ್ನು (ಪರ್ಯಾಯ ಪ್ಯಾಕೇಜಿಂಗ್ ಉತ್ಪನ್ನಗಳನ್ನು ಉತ್ತೇಜಿಸುವುದು), ಭಾಗಗಳ ಪ್ಯಾಕೇಜಿಂಗ್‌ನಲ್ಲಿ ಶೇ.5ರಷ್ಟು ಕಡಿತ ಮತ್ತು ಜುಲೈ 2025ರ ವೇಳೆಗೆ ಪ್ಲಾಸ್ಟಿಕ್ ಆಧಾರಿತ ಬಾಟಲ್ ಗಳು, ಕವರ್‌ಗಳು, ಕಟ್ಲರಿಗಳ ಸಂಪೂರ್ಣ ತೊಡೆದುಹಾಕುವಿಕೆಯಂತಹ ಗುರಿ ಹೊಂದಲಾಗಿದೆ.
• ಸರ್ಕ್ಯುಲರ್ ಎಕಾನಮಿಯ ಉತ್ತೇಜನ: ಕಾಪಿಯರ್ ಪೇಪರ್, ಟಿಶ್ಯೂ ಪೇಪರ್, ಬ್ಯಾಗ್ ಗಳು ಮತ್ತು ಮರುಉದ್ದೇಶಿತ ಗಾರ್ಮೆಂಟ್ ಗಳಂತಹ ಅಪ್ ಸೈಕಲ್ಡ್ ಉತ್ಪನ್ನಗಳ ಪರಿಚಯ, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ವಸ್ತುಗಳ ಜೀವನವನ್ನು ವಿಸ್ತರಿಸುವುದು.
• ಇಂಗಾಲ ಮತ್ತು ಸಂಪನ್ಮೂಲ ಕಡಿತ ಗುರಿಗಳು: ಇಂಗಾಲದ ಡೈ ಆಕ್ಸೈಡ್, ನೀರಿನ ಬಳಕೆ, ತ್ಯಾಜ್ಯ ಮತ್ತು ಕಾಗದದ ಬಳಕೆಯನ್ನು ಕಡಿಮೆ ಮಾಡಲು ಕೈಜನ್- ಚಾಲಿತ ಸುಧಾರಣೆಗಳು, ‘2030ರ ವೇಳೆಗೆ ಪ್ಲಾಂಟ್ ಝೀರೋ ಇಂಗಾಲದ ಡೈ ಆಕ್ಸೈಡ್’ ಸಾಧಿಸುವ ಪ್ರಯತ್ನಗಳು.
• ಹಸಿರು ಆವರಣ ಮತ್ತು ಅರಣ್ಯೀಕರಣ: ಟಿಕೆಎಂ ಪರಿಸರ ಮತ್ತು ಪಾಲುದಾರ ಸ್ಥಳಗಳಲ್ಲಿ ಗಿಡ ವಿತರಣೆ ಮತ್ತು ನೆಡುವಿಕೆ ಡ್ರೈವ್‌ಗಳು ಜೈವಿಕ ವೈವಿಧ್ಯತೆ ಮತ್ತು ಇಕೋಸಿಸ್ಟಮ್ ಪುನರ್ಸ್ಥಾಪನೆಯನ್ನು ಬೆಂಬಲಿಸುವುದು.
• ಸಮುದಾಯ ತೊಡಗಿಸಿಕೊಳ್ಳುವಿಕೆ: ಐಟಿಐ ಕಾಲೇಜುಗಳು, ಸರ್ಕಾರಿ ಶಾಲೆಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಹೆಚ್ಚಿನ ತಲುಪುವಿಕೆಯಿಂದ ಪರಿಸರ ಜಾಗೃತಿಯನ್ನು ಹೆಚ್ಚಿಸಲು ಮತ್ತು ಇಕೋ ಮನಸ್ಥಿತಿಯನ್ನು ಸೃಷ್ಟಿಸುವುದು.
ಹೆಚ್ಚುವರಿಯಾಗಿ, ಭಾಗವಹಿಸುವಿಕೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು, ಟಿಕೆಎಂ ತನ್ನ ಇಕೋಸಿಸ್ಟಮ್ ನಾದ್ಯಂತ ಉದ್ಯೋಗಿಗಳು, ಸರಬರಾಜುದಾರ-ಡೀಲರ್-ಲಾಜಿಸ್ಟಿಕ್ಸ್ ಪಾಲುದಾರರಿಂದ ಅತ್ಯುತ್ತಮ ಪರಿಸರ-ಚಾಲಿತ ಕೊಡುಗೆಗಳನ್ನು ಗುರುತಿಸುತ್ತದೆ. ತಿಂಗಳು ಬೆಳೆಯುತ್ತಿದ್ದಂತೆ, ಟಿಕೆಎಂ ಇಂಗಾಲದ ತಟಸ್ಥತೆಯನ್ನು ಸಾಧಿಸುವ, ಪರಿಸರ ಪ್ರಭಾವವನ್ನು ಕನಿಷ್ಠಗೊಳಿಸುವ ಮತ್ತು ತನ್ನ ಕಾರ್ಯಾಚರಣೆಗಳಾದ್ಯಂತ ಸುಸ್ಥಿರತೆಯ ಸಂಸ್ಕೃತಿಯನ್ನು ಬೇರೂರಿಸುವ ಬದ್ಧತೆಯನ್ನು ಪುನರ್ದೃಢೀಕರಿಸುತ್ತದೆ. ಟೊಯೋಟಾದ “ರೆಸ್ಪೆಕ್ಟ್ ಫಾರ್ ದಿ ಪ್ಲಾನೆಟ್” ಸಿದ್ಧಾಂತದಿಂದ ಮಾರ್ಗದರ್ಶನ ಪಡೆದ ಈ ಯೋಜನೆಯು ಅರ್ಥಪೂರ್ಣ ಸಹಕಾರ ಮತ್ತು ಮುಂದಾಲೋಚನೆಯ ಪರಿಹಾರಗಳ ಮೂಲಕ ದೀರ್ಘಾವಧಿಯ ಇಕೋ-ಜವಾಬ್ದಾರಿಯನ್ನು ಪ್ರೇರೇಪಿಸುವ ಕ್ರಿಯೆಗಳಾಗಿ ದೃಷ್ಟಿಯನ್ನು ಸಾರುತ್ತದೆ.