


ನೀಟ್ –ಯುಜಿ 2025 ; ಧಾರವಾಡ ದೈವಿಕ್ ಅಂಬಾಟಿ AIR 513, ಹುಬ್ಬಳ್ಳಿಯ ದಕ್ಷ್ ಎಸ್ಆರ್ AIR 318 ರ್ಯಾಂಕ್ ಗಳಿಸಿ ಸಾಧನೆ
ಹುಬ್ಬಳ್ಳಿ :- ನೀಟ್ –ಯುಜಿ 2025 ಪರೀಕ್ಷೆಯಲ್ಲಿ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL),ನ ವಿದ್ಯಾರ್ಥಿಗಳಾದ ಧಾರವಾಡದ ದೈವಿಕ್ ಅಂಬಾಟಿ AIR 513 ಮತ್ತು ಹುಬ್ಬಳ್ಳಿಯ ದಕ್ಷ್ ಎಸ್ಆರ್ AIR 318 ರ್ಯಾಂಕನೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ಘೋಷಿಸಿದೆ.
ಈ ಅಸಾಧಾರಣ ಸಾಧನೆಯು ವಿದ್ಯಾರ್ಥಿಗಳ ಬದ್ಧತೆ, ಶೈಕ್ಷಣಿಕ ಶಿಸ್ತು ಮತ್ತು ಎಇಎಸ್ಎಲ್ ಒದಗಿಸಿದ ಅತ್ಯುತ್ತಮ ತರಬೇತಿ ಮತ್ತು ಮಾರ್ಗದರ್ಶನದ ಫಲಿತಾಂಶವಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶನಿವಾರ ಫಲಿತಾಂಶಗಳನ್ನು (ಎನ್ಟಿಎ) ಘೋಷಿಸಿದೆ.
ವಿಶ್ವದ ಅತ್ಯಂತ ಸವಾಲಿನ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ನೀಟ್ ಅನ್ನು ಎದುರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಎಇಎಸ್ಎಲ್ ನ ತರಗತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಎಇಎಸ್ಎಲ್ ನ ಅತ್ಯುನ್ನತ ಶೈಕ್ಷಣಿಕ ಅಡಿಪಾಯ, ಅವರ ಪರಿಕಲ್ಪನಾ ಸ್ಪಷ್ಟತೆ ಮತ್ತು ಸ್ಥಿರ ಮತ್ತು ಶಿಸ್ತಿನ ಅಧ್ಯಯನ ದಿನಚರಿ ಕಾರಣ ಎಂದು ತಿಳಿಸಿದ್ದಾರೆ.
ಎಇಎಸ್ಎಲ್ ನ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ಅವರು ಸಾಧಕರನ್ನು ಅಭಿನಂದಿಸಿ ಮಾತನಾಡಿ,ನೀಟ್ ಯುಜಿ 2025 ರಲ್ಲಿ ನಮ್ಮ ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನದ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಮಾತ್ರವಲ್ಲದೆ ಅವರ ಪೆÇೀಷಕರ ಬೆಂಬಲ ಮತ್ತು ನಮ್ಮ ಶೈಕ್ಷಣಿಕ ತಂಡದ ಬದ್ಧ ಪ್ರಯತ್ನಗಳನ್ನು ಸಹ ಪ್ರದರ್ಶಿಸುತ್ತವೆ. ಅವರ ವೈದ್ಯಕೀಯ ವೃತ್ತಿಜೀವನದಲ್ಲಿ ನಿರಂತರ ಯಶಸ್ಸನ್ನು ಬಯಸುತ್ತೇವೆ ಎಂದರು.
ಭಾರತದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಪದವಿಪೂರ್ವ ವೈದ್ಯಕೀಯ (MBBS), ದಂತ ವೈದ್ಯಕೀಯ (BDS) ಮತ್ತು ಆಯುಷ್ (BAMS, BUMS, BHMS, ಇತ್ಯಾದಿ) ಕೋರ್ಸ್ಗಳನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಮತ್ತು ವಿದೇಶದಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆಯಲು ಬಯಸುವವರಿಗೆ ಅರ್ಹತಾ ಪರೀಕ್ಷೆಯಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET ಅನ್ನು ವಾರ್ಷಿಕವಾಗಿ ನಡೆಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕ ಡಿ.ರವಿಕುಮಾರ್, ಏರಿಯಾ ಸೆಲ್ಸ್ ಹೆಡ್ ಅನಿಲ್ ಕುಮಾರ್ ಎಚ್.ಆರ್. , ಅಕಾಡೆಮಿಕ್ ಎಂಜಿನಿಯರಿಂಗ್ ಟಿ.ವೆಂಕಟೇಶ್ವರಲು, ಅಕಾಡಮಿಕ್ ಹೆಡ್ ಫೌಂಡೇಶನರ್ ವಿ.ಎಲ್.ಲಿಂಗಾರೆಡ್ಡಿ, ಬ್ರ್ಯಾಂಚ್ ಹೆಡ್ ವಿಜಯ ಮಹಾಂತೇಶ ಇದ್ದರು